ಶುಕ್ರವಾರ, ಜನವರಿ 24, 2020
28 °C

ಜಮ್ಮು ಭೂಕುಸಿತ: ಸಂಚಾರ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮ್ಮು(ಪಿಟಿಐ): ಇಲ್ಲಿಯ ರಾಮ್‌ಬನ್ ಜಿಲ್ಲೆಯ ಶತಾನಿ ನಲ್ಲಾ ಪ್ರದೇಶದಲ್ಲಿ ಶುಕ್ರವಾರ ಭೂಕುಸಿತ ಉಂಟಾದ ಪರಿಣಾಮ 300 ಕಿ.ಮೀ ಉದ್ದದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ.ಜಮ್ಮುವಿನಿಂದ ಕಾಶ್ಮೀರಕ್ಕೆ ಇರುವ ಏಕೈಕ ಮಾರ್ಗ ಇದಾಗಿದೆ. ರಸ್ತೆ ಸಂಚಾರ ಸ್ಥಗಿತಗೊಂಡದ್ದರಿಂದ 400ಕ್ಕೂ ಹೆಚ್ಚು ವಾಹನಗಳು ವಿವಿಧ ಪ್ರದೇಶಗಳಲ್ಲಿ ನಿಂತಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಗಡಿ ರಸ್ತೆ ಪ್ರಾಧಿಕಾರ(ಬಿಆರ್‌ಒ) ದ ಸಿಬ್ಬಂದಿಗಳು ರಸ್ತೆ ತೆರವು ಕಾರ್ಯದಲ್ಲಿ ತೊಡಗಿವೆ.

ಪ್ರತಿಕ್ರಿಯಿಸಿ (+)