ಶ್ರೀನಗರ (ಪಿಟಿಐ): ಬೇಸಿಗೆ ಸಂದರ್ಭದಲ್ಲಿ ಗಲಭೆಯಿಂದಾಗಿ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗಾದ ತೊಂದರೆಯನ್ನು ನೀಗಿಸಲು ತೆರೆಯಲಾಗಿದ್ದ ಶಾಲೆಗಳನ್ನು ಹಾಗೂ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಕಾಶ್ಮೀರ ಕಣಿವೆಯಾದ್ಯಂತ ಮಂಜು ಬಿದ್ದದ್ದರಿಂದ ಗುರುವಾರ ಮುಚ್ಚಬೇಕಾಯಿತು.
‘ಕಣಿವೆಯಲ್ಲಿ ಮಂಜು ಬೀಳುತ್ತಿರುವುದರಿಂದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಸಂಚಾರಕ್ಕೆ ಮುಚ್ಚಲಾಗಿದೆ’ ಎಂದು ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆಯ ಸಂಚಾಲಕ ಅಮೀರ್ ಆಲಿ ತಿಳಿಸಿದ್ದಾರೆ.
ಅನಂತನಾಗ್ ಜಿಲ್ಲೆಯಲ್ಲಿ ಕಾಶ್ಮೀರ ಕಣಿವೆಯ ಹೆಬ್ಬಾಗಿಲೆನಿಸಿರುವ ಕ್ವಾಜಿಗುಂಡ್‌ನಲ್ಲಿ 1.25 ಅಡಿಗಳಷ್ಟು ಹಿಮ ಶೇಖರವಾಗಿತ್ತು ಎಂದು ಅವರು ತಿಳಿಸಿದ್ದಾರೆ. ‘ ರಸ್ತೆ ತೆರವು ಕಾರ್ಯ ಜಾರಿಯಲ್ಲಿದ್ದು ಹವಾಮಾನ ಸ್ಥಿತಿ ಅನುಸಾರ ವಾಹನ ಸಂಚಾರಕ್ಕೆ ಅನುಮತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ‘ ಎಂದು ಅವರು ತಿಳಿಸಿದ್ದಾರೆ. ‘ ಈವರೆಗೆ ತೆರೆಯಲಾಗಿದ್ದ ಎಲ್ಲಾ ಶಾಲೆಗಳಿಗೂ ಚಳಿಗಾಲದ ರಜೆ ನೀಡಲಾಗಿದೆ’ ಎಂದು ಕಾಶ್ಮೀರದ ಆಡಳಿತದ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.