ಮಂಗಳವಾರ, ಜನವರಿ 28, 2020
23 °C

ಜಯಾ ಅಕ್ರಮ ಆಸ್ತಿ: ಆಭರಣ ಹಾಜರಿಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು (ಪಿಟಿಐ): ತಮಿಳು­ನಾಡು ಮುಖ್ಯಮಂತ್ರಿ ಜೆ. ಜಯ­ಲಲಿತಾ ಅವರಿಂದ 1997ರಲ್ಲಿ ವಶ­ಪಡಿಸಿಕೊಳ್ಳಲಾದ ಬೆಲೆಬಾಳುವ ವಸ್ತು­ಗಳನ್ನು ಹಾಜರುಪಡಿಸಲು ಇಲ್ಲಿನ ವಿಶೇಷ ನ್ಯಾಯಾಲಯ ಗುರು­ವಾರ ಆದೇಶಿಸಿದೆ. ಜಯಲಲಿತಾ ಅವರು ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ್ದಾರೆ ಎಂಬ ದೂರಿನ ಕುರಿತು ವಿಶೇಷ ನ್ಯಾಯಾ­ಲಯ ವಿಚಾರಣೆ ನಡೆಸುತ್ತಿದೆ.ಜಯಲಲಿತಾ ಅವರಿಂದ ವಶಪಡಿಸಿ­ಕೊಳ್ಳಲಾದ ಬೆಲೆಬಾಳುವ ವಸ್ತುಗ­ಳನ್ನು ಚೆನ್ನೈನ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ (ಆರ್‌ಬಿಐ) ಖಜಾನೆ­ಯಲ್ಲಿ ಇಡಲಾಗಿದೆ. ಅದನ್ನು ಇದೇ 21­ರೊಳಗೆ ನ್ಯಾಯಾಲಯಕ್ಕೆ ಹಾಜ­ರು­ಪಡಿಸಬೇಕು ಎಂದು ವಿಶೇಷ ನ್ಯಾಯಾ­ಲಯದ ನ್ಯಾಯಾಧೀಶ ಜಾನ್‌ ಮೈಕೇಲ್‌ ಡಿಕುನ್ನ ಅವರು ಆದೇಶಿಸಿದರು.1997ರಲ್ಲಿ ವಶಪಡಿಸಿಕೊಳ್ಳಲಾದ 800 ಕೆ.ಜಿ ಬೆಳ್ಳಿ, 28 ಕೆ.ಜಿ ಚಿನ್ನ, 70 ಜೊತೆ ಪಾದರಕ್ಷೆಗಳು, 10,500 ಸೀರೆ­ಗಳು, 91 ಕೈಗಡಿಯಾರಗಳು ಮತ್ತು ಇತರ ಬೆಲೆಬಾಳುವ ವಸ್ತುಗ­ಳನ್ನು ಕೋರ್ಟ್‌ ತನ್ನ ವಶಕ್ಕೆ ಪಡೆ­ಯಬೇಕು ಎಂದು ಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ. ಅನ್ಬಳ­ಗನ್‌ ಅರ್ಜಿಯಲ್ಲಿ ಕೋರಿದ್ದರು.

ಪ್ರತಿಕ್ರಿಯಿಸಿ (+)