ಬುಧವಾರ, ಜೂನ್ 23, 2021
24 °C

ಜಯಾ ಬಚ್ಚನ್ ರೂ 92 ಕೋಟಿ ಒಡತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ(ಪಿಟಿಐ): ಸಿನಿಮಾ ತಾರೆಯಾಗಿ ನಂತರ ರಾಜಕೀಯ ಪ್ರವೇಶಿಸಿದ ಜಯಾ ಬಚ್ಚನ್ ಅವರ ಆಸ್ತಿ ಮೌಲ್ಯ 91.65 ಕೋಟಿ ರೂಪಾಯಿ.ರಾಜ್ಯಸಭೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜಯಾ ತಮ್ಮ ಆಸ್ತಿಪಾಸ್ತಿ ವಿವರ ನೀಡಿದ್ದು, ಪತಿ ಮೆಗಾಸ್ಟಾರ್ ಅಮಿತಾಬ್ ಬಳಿ ಇರುವ ಆಸ್ತಿ 402.21 ಕೋಟಿ ಎಂದು ದಾಖಲಿಸಿದ್ದಾರೆ.ರೂ 94,246 ರೂ ನಗದು ತಮ್ಮ ಬಳಿ ಇದ್ದು, 3.97 ಕೋಟಿಯನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುವುದಾಗಿ ಜಯಾ ತಿಳಿಸಿದ್ದಾರೆ. ರೂ 30 ಲಕ್ಷ ಮೌಲ್ಯದ ಟೊಯೊಟಾ ಲೆಕ್ಸಸ್ ಸೇರಿ ಎರಡು ವಾಹನಗಳು ಇದ್ದು ರೂ 13.34 ಕೋಟಿ ಮೌಲ್ಯದ ಚಿನ್ನಾಭರಣ, ಮುಂಬೈನಲ್ಲಿ ಎರಡು ಬೃಹತ್ ಬಂಗಲೆ ಹಾಗೂ ಭೋಪಾಲ್‌ನಲ್ಲಿ ಎರಡು ಫ್ಲ್ಯಾಟ್, ಭೋಪಾಲ್ ಹಾಗೂ ಲಖನೌನಲ್ಲಿ ಕೃಷಿ ಭೂಮಿ ಅವರ ಹೆಸರಿನಲ್ಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.