ಭುವನೇಶ್ವ (ಪ್ರಜಾವಾಣಿ ವಾರ್ತೆ): ಒಡಿಶಾ ಸರ್ಕಾರದ ಆದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜವಾನನ ಬಳಿ 70 ಲಕ್ಷ ಮೌಲ್ಯದ ಆಸ್ತಿ ಪತ್ತೆಯಾಗಿದೆ!

ವರಮಾನ ಇಲಾಖೆ ಜವಾನ ಪಿ.ಕೆ ಸ್ವಾಯಿನ್ ಬಳಿ ಈ ಆಸ್ತಿ ಪತ್ತೆಯಾಗಿದ್ದು, ಭುವನೇಶ್ವರದಲ್ಲಿ 45 ಲಕ್ಷ ಬೆಲೆಬಾಳುವ ವೈಭೋವೋಪೇತ ಮನೆ ಇವನ ಹೆಸರಿನಲ್ಲಿದೆ. ಜಾಗೃತ ದಳದ ಅಧಿಕಾರಿಗಳು ಬುಧವಾರ ಭುವನೇಶ್ವರದಲ್ಲಿ ಆತನ ಮನೆ ಹಾಗೂ ನಯಾಗರ್ ಜಿಲ್ಲೆಯಲ್ಲಿರುವ ಮನೆಗೆ ಏಕಕಾಲದಲ್ಲಿ ದಾಳಿ ನಡೆಸಿದ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ. ದಾಳಿ ವೇಳೆ 4.5 ಲಕ್ಷ ರೂ. ನಗದು ಹಣ ದೊರೆತಿದೆ.

ಆದಾಯ ಇಲಾಖೆಯ ಕೇಂದ್ರ ಕಚೇರಿಗೆ ಕೇವಲ 3 ತಿಂಗಳ ಹಿಂದೆ ಈತ ಜವಾನನಾಗಿ ಸೇರಿಕೊಂಡಿದ್ದ. ಒಂಬತ್ತು ಸಾವಿರ ರೂ. ಸಂಬಳ ಪಡೆಯುತ್ತಿದ್ದ ಈತ ಈ ಮೊದಲು ತಹಶೀಲ್ದಾರ ಕಚೇರಿಯಲ್ಲಿ 20 ವರ್ಷ ಜವಾನನಾಗಿ ಕೆಲಸ ಮಾಡಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.