ಸೋಮವಾರ, ಜನವರಿ 20, 2020
18 °C
ಈ ಗೌರವ ಪಡೆದ ಭಾರತದ 4ನೇ ಬೌಲರ್‌

ಜಹೀರ್‌ 300 ವಿಕೆಟ್‌ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಹಾನ್ಸ್‌ಬರ್ಗ್: ಭಾರತದ ವೇಗಿ ಜಹೀರ್ ಖಾನ್ ಟೆಸ್ಟ್‌ ಕ್ರಿಕೆಟ್‌ನಲ್ಲಿ 300 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನ ಅಂತಿಮ ದಿನವಾದ ಭಾನುವಾರ ಜಾಕ್‌ ಕಾಲಿಸ್ ವಿಕೆಟ್ ಪಡೆದು ಅವರು ಈ ಗೌರವ ತಮ್ಮದಾಗಿಸಿಕೊಂಡರು. ಇದರೊಂದಿಗೆ 300 ಹಾಗೂ ಅದ ಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ನಾಲ್ಕನೇ ಹಾಗೂ ವಿಶ್ವದ 27 ನೇ ಬೌಲರ್ ಎನಿಸಿಕೊಂಡರು.

ಭಾರತದ ಪರ ಅನಿಲ್ ಕುಂಬ್ಳೆ (619), ಕಪಿಲ್ ದೇವ್ (434) ಮತ್ತು ಹರಭಜನ್ ಸಿಂಗ್ (413) ಈ ಸಾಧನೆ ಮಾಡಿದ್ದಾರೆ. ಕಪಿಲ್ ದೇವ್ ನಂತರ ಈ ಸಾಧನೆ ಮಾಡಿದ ಭಾರತದ ಎರಡನೇ ವೇಗದ ಬೌಲರ್‌ ಎನಿಸಿಕೊಂಡ ಜಹೀರ್‌,  ಪಾಕಿಸ್ತಾನದ ವಾಸಿಮ್‌ ಅಕ್ರಂ (414) ಮತ್ತು ಶ್ರೀಲಂಕಾದ ಚಮಿಂದಾ ವಾಸ್ (355) ನಂತರ ಈ ಸಾಧನೆ ಮಾಡಿದ ವಿಶ್ವದ ಮೂರನೇ ಎಡಗೈ ವೇಗಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

 ವಾಂಡರರ್ಸ್ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡ  ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಜಹೀರ್ ಪಾಲಿಗೆ 89 ನೇ ಪಂದ್ಯವಾಗಿದೆ. ಈ ಪಂದ್ಯದ ಅಂತಿಮ ದಿನದಾಟದ 61 ನೇ ಓವರ್ ಬೌಲ್ ಮಾಡಿದ ಅವರು 34 ರನ್‌ ಗಳಿಸಿ ಆಡುತ್ತಿದ್ದ ಕಾಲಿಸ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿ ಸಂಭ್ರಮಿಸಿದರು.ಮೊದಲ ಇನಿಂಗ್ಸ್‌ನಲ್ಲಿ  ಅವರು ನಾಲ್ಕು ವಿಕೆಟ್ ಕಬಳಿಸಿ ಮಿಂಚಿದ್ದರು. ನವೆಂಬರ್ 2000 ರಂದು ಢಾಕಾದಲ್ಲಿ ನಡೆದ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಜಹೀರ್ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಒಟ್ಟು 200 ಏಕದಿನ ಪಂದ್ಯಗಳನ್ನಾಡಿರುವ ಅವರು 282 ಮತ್ತು 17 ಟ್ವೆಂಟಿ ಪಂದ್ಯಗಳಿಂದ 17 ವಿಕೆಟ್ ಗಳಿಸಿದ್ದಾರೆ.

ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್‌ಗಳು

ಆಟಗಾರ ಪಂದ್ಯ ಇನಿಂಗ್ಸ್ ವಿಕೆಟ್

ಅನಿಲ್ ಕುಂಬ್ಳೆ 132 236 619

ಕಪಿಲ್ ದೇವ್ 131 227 434

ಹರಭಜನ್ ಸಿಂಗ್ 101 186 413

ಜಹೀರ್ ಖಾನ್ 89 160 300

ಬಿಷನ್ ಸಿಂಗ್ ಬೇಡಿ 67 118 266

ಪ್ರತಿಕ್ರಿಯಿಸಿ (+)