ಮಂಗಳವಾರ, ಜೂನ್ 22, 2021
29 °C

ಜಾಗತೀಕರಣದಿಂದ ದೇಸಿ ಸಂಸ್ಕೃತಿಗೆ ಧಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: `ಜಾಗತೀಕರಣದ ಬೆನ್ನು ಹತ್ತಿರುವ ನಾವು ನಮ್ಮ ಸ್ಥಳೀಯ ಸಂಸ್ಕೃತಿ ಮರೆತು ಮಾನವೀಯತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಜನಪದ ಪರಂಪರೆ ಹಾಗೂ ಸಾಹಿತ್ಯವನ್ನು ಪುನರ್ ಮೌಲ್ಯೀಕರಣ ಮಾಡುವ ಅವಶ್ಯಕತೆ ಇದೆ~ ಎಂದು ಪ್ರೊ. ಸೋಮಶೇಖರ ಇಮ್ರೋಪುರ ಅವರು ಅಭಿಪ್ರಾಯಪಟ್ಟರು.ಇಲ್ಲಿಯ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಿಂದ ಕರ್ನಾಟಕ ಜಾನಪದ ಅಕಾಡೆಮಿಯ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ  ಮಹಿಳಾ ಜಾನಪದ ಕುರಿತ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.`ಕಳೆದ ಶತಮಾನದಿಂದ ಮಹಿಳಾ ಜಾನಪದ ಅಧ್ಯಯನದ ಬಗ್ಗೆ ಜಾಗತಿಕ ಮಟ್ಟದಲ್ಲಿ ಗಂಭೀರವಾದ ಚಿಂತನೆ ನಡೆಯುತ್ತಿದೆ. ಆದರೂ, ಜಾನಪದ ಸಂಸ್ಕೃತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಚನಾತ್ಮಕ ಕೆಲಸಗಳು ಆಗಿಲ್ಲ~ ಎಂದು ವಿಷಾದಿಸಿದರು.ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ.ಮೀನಾ ಚಂದಾವರಕರ, ಮಾಹಿತಿ ತಂತ್ರಜ್ಞಾನದ ಯುಗದೊಂದಿಗೆ ನಮ್ಮ ಜಾನಪದ ಕಲೆಗಳು ಹೊಂದಿಕೊಂಡು ಹೋಗುವ ಅನಿವಾರ್ಯತೆ ಉಂಟಾಗಿದೆ. ದೇಸಿ ಸಂಸ್ಕೃತಿಯ ಅನನ್ಯತೆಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು.ಮಹಿಳಾ ವಿವಿ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ವಿಜಯಶ್ರಿ ಸಬರದ, ಡಾ.ಮಹೇಶ ಚಿಂತಾಮಣಿ ವೇದಿಕೆಯಲ್ಲಿದ್ದರು.ಕಾಳವ್ವ ವಾಲಿ, ಮಹಾದೇವಿ ಜೈನಾಪುರ, ಅನ್ನಪೂರ್ಣಾ ವಾಲಿ, ಡಾ. ಬಸವರಾಜ ಮಲಶೆಟ್ಟಿ, ಬಿ.ಆರ್. ಪೊಲೀಸ್ ಪಾಟೀಲ ಜನಪದ ಗೀತೆಗಳನ್ನು ಹಾಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.