ಬುಧವಾರ, ಏಪ್ರಿಲ್ 14, 2021
32 °C

ಜಾಗೃತಿ ಮೂಡಿಸಲು ಅ. 2ರಿಂದ ಗ್ರಾಮ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾಗೃತಿ ಮೂಡಿಸಲು ಅ. 2ರಿಂದ ಗ್ರಾಮ ಸಭೆ

ಬೆಂಗಳೂರು: `ಪ್ರತಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ವರ್ಷದ ಕ್ರಿಯಾ ಯೋಜನೆಯಲ್ಲಿ ಜೈವಿಕ ಇಂಧನ ಬಳಕೆಯನ್ನು ಸೇರಿಸಬೇಕು~ ಎಂದು ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಕಾರ್ಯಕಾರಿ ಅಧ್ಯಕ್ಷ ವೈ.ಬಿ.ರಾಮಕೃಷ್ಣ ತಿಳಿಸಿದರು.ಭಾನುವಾರ ಚಿತ್ರಕಲಾ ಪರಿಷತ್ತಿನಲ್ಲಿ ನಡೆದ ಜೈವಿಕ ಇಂಧನ ಮೇಳದ ಸಮಾರೋಪ ಸಮಾರಂಭ ನಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಅಕ್ಟೋಬರ್ 2 ರಿಂದ ಪ್ರತಿ ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಗ್ರಾಮ ಸಭೆಗಳನ್ನು ನಡೆಸಲಾಗುವುದು.

 

ಇಂತಹ ಗ್ರಾಮ ಸಭೆಗಳಲ್ಲಿ ಜೈವಿಕ ಇಂಧನದ ಬಳಕೆಯ ಬಗ್ಗೆ ಚರ್ಚೆ ನಡೆಸಿ, ಜಾಗೃತಿಯನ್ನು ಮೂಡಿಸಲಾಗುವುದು~ ಎಂದರು. `ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ರೈತರನ್ನು ಸಂಘಟಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು. ಮುಖ್ಯವಾಗಿ ಜೈವಿಕ ಇಂಧನವನ್ನು ಅವರೇ ಉತ್ಪಾದಿಸಿ  ಅವರೇ ಬಳಕೆ ಮಾಡುವಂತೆ ಪ್ರೋತ್ಸಾಹಿಸಲಾಗುವುದು~ ಎಂದು ಹೇಳಿದರು.`ಈ ಮೇಳವು  ಜೈವಿಕ ಇಂಧನದ ಬಳಕೆಯ ಮುಂದಿನ ಕಾರ್ಯಕ್ರಮಗಳ ವ್ಯವಸ್ಥಿತ ರೂಪವನ್ನು ನೀಡಲು ಚಾಲನೆ ನೀಡಲಾಗಿದೆ. ಇದು ಆರಂಭ ಮಾತ್ರವಾಗಿದೆ. ಮುಂದೆ ಸಾಧಿಸುವುದು ಬಹಳ ಇದೆ~ ಎಂದು ಪ್ರತಿಕ್ರಿಯಿಸಿದರು.

`ಮೇಳದಲ್ಲಿ ಒಟ್ಟು 12 ಮಳಿಗೆಗಳು ಭಾಗವಹಿಸಿದ್ದವು. ಜನರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದರಿಂದ ಸ್ಫೂರ್ತಿ ಪಡೆದು ಮುಂದಿನ ಕಾರ್ಯಕ್ರಮಗಳನ್ನು ಯೋಜಿಸಲಾಗುವುದು~ ಎಂದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.