ಗುರುವಾರ , ಮಾರ್ಚ್ 4, 2021
20 °C

ಜಾತಿಗಳು ಉತ್ತಮ ಸಮಾಜ ಕಟ್ಟಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾತಿಗಳು ಉತ್ತಮ ಸಮಾಜ ಕಟ್ಟಲಿ

ಮೈಸೂರು: ಇವತ್ತು ಜಾತಿಗಳು ಇರಬೇಕೋ ಅಥವಾ ಜಾತ್ಯತೀತತೆ ಬೇಕೋ ಎಂಬ ವಾದಗಳು ನಡೆಯುತ್ತಿವೆ. ಜಾತಿಗಳು ಇರುವುದೇ ಆದರೆ ಉತ್ತಮ ಸಮಾಜ ಮತ್ತು ವ್ಯಕ್ತಿತ್ವವನ್ನು ಕಟ್ಟಲಿ ಎಂದು ಪ್ರೊ.ಲಕ್ಷ್ಮೀನಾರಾಯಣ ಹೇಳಿದರು.ಮೈಸೂರು ವಿಶ್ವವಿದ್ಯಾಲಯದ ಬಾಬು ಜಗಜೀವನರಾಂ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಬಾಬು ಜಗಜೀವನರಾಂ ಅವರ 26ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದರು.`ನಮ್ಮ ಸಮಾಜದಲ್ಲಿ ಜಾತಿಗಳು ಇರುವುದೇ ಆದರೆ ಸ್ವಾರ್ಥರಹಿತವಾಗಿರಬೇಕು. ಸಂಸ್ಕೃತಿ ಮತ್ತು ಸಾಹಿತ್ಯದ ಪ್ರತೀಕವಾಗಿರಬೇಕು. ವಾಸ್ತವತೆಯಲ್ಲಿ ಬದುಕುವಂತಾಗಬೇಕು~ ಎಂದು ಹೇಳಿದರು.`ಬಾಬು ಜಗಜೀವನರಾಂ ಅತ್ಯಂತ ಕೆಳವರ್ಗದ ಕುಟುಂಬದಲ್ಲಿ ಹುಟ್ಟಿದವರು. ಆದರೆ ಮಹೋನ್ನತ ನಾಯಕರಾಗಿ ಬೆಳೆದರು. ಅಷ್ಟೇ ದಿಟ್ಟತನವೂ ಅವರಲ್ಲಿತ್ತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿಯವರ ಮುಂದೆ ನಿಂತು ಮಾತನಾಡುವ ಧೈರ್ಯ ಯಾರಿಗೂ ಇರಲಿಲ್ಲ. ಆದರೆ ಜಗಜೀವನರಾಂ   ಮಾತ್ರ ಒಂದು ಸುದೀರ್ಘ ವಾದ ಮತ್ತು ನೇರ ನಿಷ್ಠುರ ಪತ್ರ ಬರೆದರು. ತುರ್ತು ಪರಿಸ್ಥಿತಿ ಸಾಧುವಲ್ಲವೆಂದು ಹೇಳಿದರು~ ಎಂದು ನೆನಪಿಸಿದರು.`ಬಾಬೂಜಿ ವಿಶಿಷ್ಟ ಸಾಧಕರು. 20ರ ವಯಸ್ಸಿ ನಲ್ಲಿಯೇ ಜನಸಂಘಟನೆ ಮಾಡಿ ಗಮನ ಸೆಳೆದವರು. ಇಡೀ ಸಮುದಾಯಕ್ಕೆ ಚೈತನ್ಯ ತುಂಬಿದರು. ಅವರು ರಾಷ್ಟ್ರಕಟ್ಟುವ ವಿಧಾನದ ಬಗ್ಗೆ ಮೇಲ್ಪಂಕ್ತಿ ಹಾಕಿದವರು~ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಪ್ರೊ.ವಿ.ಜಿ.ತಳವಾರ್, `ಬಾಬಾ ಸಾಹೇಬ ಅಂಬೇಡ್ಕರ್, ಬಾಬು ಜಗಜೀವನರಾಂ ಮಹಾನ್ ವ್ಯಕ್ತಿಗಳು. ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಬಾರದು. ಬಾಬು ಜಗಜೀವನರಾಂ ಅಧ್ಯಯನ ಸಂಸ್ಥೆಯು ಗ್ರಾಮೀಣ ಮಟ್ಟದಲ್ಲಿ ಹೋಗಿ ತಳಮಟ್ಟದ ಸಮುದಾಯಗಳಿಗೆ ಬಾಬೂಜಿಯವರ ಆದರ್ಶಗಳನ್ನು ತಿಳಿಸಬೇಕು.

 

ಸಂಸತ್‌ನಲ್ಲಿರುವ ಜಗಜೀವನರಾಂ ಕುರಿತ ಪುಸ್ತಕಗಳ ಅಧ್ಯಯನಗಳನ್ನು ಕೈಗೊಳ್ಳಬೇಕು~ ಎಂದು ಸಲಹೆ ನೀಡಿದರು. ಸಿಂಡಿಕೇಟ್ ಸದಸ್ಯರಾದ ಎಂ. ದಾಸಯ್ಯ, ಅ.ಮ. ಭಾಸ್ಕರ್ ಮತ್ತಿತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.