ಗುರುವಾರ , ಜೂನ್ 17, 2021
22 °C

ಜಾತಿ ಜಪಕ್ಕೆ ಕೊನೆಯಿಲ್ಲವೇ?

ಚಂಪಕ,ಬೆಂಗಳೂರು Updated:

ಅಕ್ಷರ ಗಾತ್ರ : | |

ಹೊಸ ಮನೆಗೆ ಬಾಡಿಗೆಗೆಂದು ಹೋದಾಗ ಪಕ್ಕದ ಮನೆಯ ಆಂಟಿ ಮಾತನಾಡಿಸುತ್ತಲೇ ‘ನೀವು ಗೌಡ್ರು ತಾನೇ’ ಎಂದು ಕೇಳಿದ್ದರು. ತಕ್ಷಣ ಅವಾಕ್ಕಾದ ನಾನು ‘ಹ್ಞೂಂ ಆಂಟಿ’ ಎಂದೆ. ಮರು­ಕ್ಷಣ ನನ್ನಗನ್ನಿಸಿದ್ದು ನಾನು ಪರಿಶಿಷ್ಟ ಜಾತಿಯವ­ಳೆಂಬುದಾಗಿ ಹೇಳಿಕೊಳ್ಳಲು ಸಾಧ್ಯವಿ­ರ­ಲಿಲ್ಲವೇ ಎಂದು!ಇದಾದ ಆರು ತಿಂಗಳ ನಂತರ ಅದೇ ಆಂಟಿ ಯಾರದೋ ವಿಷಯವಾಗಿ ಅವರ ಮನೆ ಮಾಲೀಕರ ಬಳಿಯಲ್ಲಿ, ‘ಏನು ಮಾಡು­ವುದು ಹೇಳದೇ ಕೇಳದೇ ಒಳಗೆ ಬಂದುಬಿಟ್ಟರು, ಅವರು ಹೋದಮೇಲೆ ಮನೆ ಒರೆಸಿದರಾಯಿತು’ ಎಂದು ಮಾತನಾಡಿಕೊಳ್ಳು­ತ್ತಿದ್ದರು. ಇದನ್ನು ಕೇಳಿ ನಾನು ವಿದ್ಯಾವಂತಳಾದರೂ ಒಳಗೊಳಗೇ ಆತಂಕಿತ­ಳಾ­ಗಿದ್ದೆ.ಈ ವ್ಯವಸ್ಥೆಯನ್ನು ಅಂಬೇಡ್ಕರ್‌–ಗಾಂಧಿ­ ಬಂದು ಹೋದರೂ ಬದಲಿ­ಸ­ಲಾಗ­ಲಿಲ್ಲವಲ್ಲ? ನಾವು ಧೈರ್ಯವಾಗಿ ಜಾತಿ­ಯನ್ನು ಹೇಳಿ­­ಕೊಳ್ಳಲು ಸಾಧ್ಯವೇ ಇಲ್ಲವೇ? ಮನುಷ್ಯನಿಗೆ ಜಾತಿ ಅವಶ್ಯವೇ? ‘ನೀವು ಯಾರು?’ ‘ಗೌಡ್ರಾ’? ಎಂದು ಅವರು ಏಕೆ ಕೇಳುತ್ತಾರೆ? ಎಲ್ಲರೂ ಗೌಡರೇ ಆಗಿರಬೇಕೆ??

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.