ಶುಕ್ರವಾರ, ಜೂನ್ 25, 2021
26 °C

ಜಾತಿ, ಧರ್ಮ ಮೀರಿದ ಬಣ್ಣದ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾತಿ, ಧರ್ಮ ಮೀರಿದ ಬಣ್ಣದ ಹಬ್ಬ

ಕುಷ್ಟಗಿ: ಜಾತಿ, ಧರ್ಮವನ್ನು ಮೀರಿ ಹೋಳಿ ಆಚರಣೆಯನ್ನು ಪಟ್ಟಣದಲ್ಲಿ ಶುಕ್ರವಾರ ಶಾಂತಿ ಮತ್ತು ಸಂಭ್ರಮ, ಸಡಗರದೊಂದಿಗೆ ನಡೆಸಲಾಯಿತು.ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿತ್ತು. ಸರ್ಕಾರಿ ಕಚೇರಿಗಳಲ್ಲಿ ಬೆರಳೆಣಿಕೆ ನೌಕರರು ಕೆಲಸ ನಿರ್ವಹಿಸುತ್ತಿದ್ದುದು ಕಂಡುಬಂದಿತು. ಸಾರಿಗೆ ಸಂಸ್ಥೆಯ ಬಸ್ ಸೇವೆಗೆ ವ್ಯತ್ಯಯವಾಗಲಿಲ್ಲ. ಶುಕ್ರವಾರ ಪೇಟೆಗೆ ರಜೆ ಇದ್ದುದರಿಂದಲೂ ಎಲ್ಲ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು ಮುಚ್ಚಿದ್ದರಿಂದ ರಸ್ತೆಗಳಲ್ಲಿ ಕೇವಲ ಓಕುಳಿ ಎರಚುವವರು ಮಾತ್ರ ಇದ್ದರು.

ಬಳಿ ವಸ್ತ್ರಧಾರಿಗಳಾಗಿ ಓಕುಳಿಯಲ್ಲಿ ಮಿಂದೆದ್ದ ಪಟ್ಟಣದ ಯುವಕರು ಮತ್ತು ಪುರಸಭೆಯ ಕೆಲ ಸದಸ್ಯರ ಗುಂಪು ವಾದ್ಯಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತೆರಳಿ ತಾಳಕ್ಕೆ ತಕ್ಕಂತೆ ಹೆಜ್ಜೆಹಾಕಿದ್ದು ಜನರ ಗಮನಸೆಳೆಯಿತು.

 

ಅಲ್ಲದೇ ಪ್ರಮುಖ ವೃತ್ತಗಳಲ್ಲಿ ಗುರುತು ಸಿಗದಂತೆ ಅಕ್ಷರಶಃ ಬಣ್ಣದಲ್ಲಿ ಮುಳುಗಿದ್ದ ಯುವಕರು, ಬಾಲಕರು, ಬಾಲಕಿಯರು ಸಹ ಅನೇಕ ಗುಂಪುಗಳಲ್ಲಿ ಪ್ರತ್ಯೇಕ ತೆರಳಿ ಸ್ನೇಹಿತರಿಗೆ ಬಣ್ಣದ ಸಿಂಚನಗೈಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಎಲ್ಲಡೆ ಸಂಭ್ರಮ ಮನೆ ಮಾಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.