ಗುರುವಾರ , ಮಾರ್ಚ್ 4, 2021
30 °C
ಧ್ವಜಾರೋಹಣ ನೆರವೇರಿಸಿದ ಶಾಸಕ ಐಹೊಳೆ

ಜಾತಿ ಪಂಥ ಬಿಟ್ಟು ಒಂದಾಗೋಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾತಿ ಪಂಥ ಬಿಟ್ಟು ಒಂದಾಗೋಣ

ರಾಯಬಾಗ: ತ್ಯಾಗ ಬಲಿದಾನಗಳಿಂದ ಗಳಿಸಿರುವ ಸ್ವಾತಂತ್ರವನ್ನು ನಾವು ಅದನ್ನು ಉಳಿಸಿ ಬೆಳೆಸಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಒಗ್ಗಟ್ಟಾಗಿ ಹೋರಾಡಬೇಕು. ಜಾತಿ, ಮತ ಪಂಥಗಳನ್ನು ಬಿಟ್ಟು ನಾವೆಲ್ಲರೂ ಒಂದು ಎಂದು ಪ್ರದರ್ಶಿಸುವಂತೆ ಶಾಸಕ ದುರ್ಯೋಧನ ಐಹೊಳೆ ಹೇಳಿದರು.ಪಟ್ಟಣದ ಸರ್ಕಾರಿ ಕೇಂದ್ರ ಶಾಲಾ ಆವರಣದಲ್ಲಿ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಅಧಿಕಾರಿಗಳು ಸಾರ್ವಜನಿಕರಿಗಾಗಿ ಒಳ್ಳೆಯ ಕಾರ್ಯಗಳನ್ನು ಮಾಡಿ ತಾಲ್ಲೂಕನ್ನು ಜಿಲ್ಲೆಯಲ್ಲಿ ಮಾದರಿ ಮಾಡಬೇಕು ಎಂದು ಸಲಹೆ ನೀಡಿದರು.

ಬಿ.ಎಲ್.ಗಂಟಿ ವಿಶೇಷ ಉಪನ್ಯಾಸ ನೀಡಿದರು. ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ­ಯಾದ ರಾಯಬಾಗದ ದೇಸಾಯಿ ಯೂತ್‌ ಅಸೋಸಿಯೇಶನ್ ಕ್ಲಬ್ ತಂಡದ ಕ್ರೀಡಾಪಟುಗಳನ್ನು ತಾಲ್ಲೂಕು ಆಡಳಿತದಿಂದ ಸತ್ಕರಿಸಲಾಯಿತು.ತಾಲ್ಲೂಕು ಕೇಂದ್ರ ಶಾಲೆ ಬಹಳ ಹಳೆಯ ಕಟ್ಟಡವಾಗಿದ್ದು ಈ ಕಟ್ಟಡವನ್ನು ನವೀಕರಿಸಿ ನೂತನ ಕಟ್ಟಡ ಕಟ್ಟಿಸಿಕೊಡುವಂತೆ ಬಿಇಓ ರಾಜೇಂದ್ರ ತೇರದಾಳ ಶಾಸಕರಲ್ಲಿ ಮನವಿ ಮಾಡಿದರು.ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ರವಿಶಂಕರ ನರಗಟ್ಟಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ನಿಂಗಪ್ಪ ಪಕಾಂಡಿ, ಶೈಲಶ್ರೀ ತೇಲಿ, ಅನಿತಾ ಮೋಹಿತೆ, ಅನಿಲ ಸಾನೆ, ಸದಾ ಶಿವ ಹಳಿಂಗಳಿ, ಗೋಪಾಲ ಕೊಚೇರಿ, ಅಶೋಕ ಅಂಗಡಿ, ಸುನಿಲ ಶೆಟ್ಟಿ,ಮಾರುತಿ ನಾಯ್ಕ, ವಿಮಲಾ ಕಲ್ಲಪ್ಪ ಹಳಿಂಗಳಿ ಹಾಗೂ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಪಾಲಕರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.ಬಿಇಒ ರಾಜೇಂದ್ರ ತೇರದಾಳ ಸ್ವಾಗತಿಸಿದರು. ಡಿ.ಎಸ್. ಡಿಗ್ರಜ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಖನಗಾಂವ ವರದಿಖನಗಾಂವ (ಗೋಕಾಕ): ಗ್ರಾಮದ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ 70ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅತೀ ವಿಜೃಭಣೆಯಿಂದ ಆಚರಿಸಲಾಯಿತು.ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮ ಜರುಗಿದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗಿತು. ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಇದ್ದರು.ಪಿಕೆಪಿಎಸ್‌ನಲ್ಲೂ: ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದಲ್ಲೂ ನಡೆದ ಧ್ವಜಾರೋಹಣವನ್ನು ಅಧ್ಯಕ್ಷ ಸಿದ್ದಪ್ಪ ಮಾರಿಹಾಳ ಧ್ವಜಾರೋಹಣ ನೆರವೇರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.