ದಾವಣಗೆರೆ: ಜಾತಿ ವ್ಯವಸ್ಥೆಯನ್ನು ಪ್ರಶ್ನಿಸುವ ಹಿಂದುಳಿದವರ, ದಲಿತರ ಕೂಗು ಗಟ್ಟಿಯಾಗಬೇಕು ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ವರ್ಗಗಳ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಪ್ರೊ.ಸಣ್ಣರಾಮ ಕರೆ ನೀಡಿದರು.

ನಗರದ ಗುಂಡಿ ಮಹಾದೇವಪ್ಪ ಕಲ್ಯಾಣಮಂಟಪದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ವರ್ಗಗಳ ನೌಕರರ ಒಕ್ಕೂಟದ ರಾಜ್ಯ ಸಮಿತಿ ಮತ್ತು ಜಿಲ್ಲಾ ಘಟಕ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಬದ್ಧ ಜಾತಿ ವ್ಯವಸ್ಥೆಯನ್ನು ಪ್ರಶ್ನಿಸುವ ಹಕ್ಕನ್ನು ಎಡಚಿಂತನೆಯ ಚಳವಳಿಗಳು ರೂಪಿಸಿವೆ. ಆದರೆ, ಚಳವಳಿಗಳು ಕ್ಷೀಣಗೊಂಡಿರುವ ಈ ದಿನಗಳಲ್ಲಿ ದಲಿತರ ದನಿಯೂ ಕ್ಷೀಣಗೊಂಡಿದೆ. ಆದರೆ, ದಲಿತರ ಹಕ್ಕನ್ನು ಪಡೆಯಲು ಜಾತಿ ವ್ಯವಸ್ಥೆಯನ್ನು ಪ್ರಶ್ನಿಸುವ ಕೂಗು ಗಟ್ಟಿಯಾಗುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಡಾ.ಬಿ.ಆರ್. ಅಂಬೇಡ್ಕರ್ ವೈಚಾರಿಕ ಪ್ರಜ್ಞೆಯ ಪ್ರತಿಮೆ. ಅವರ ಒಳನೋಟ, ಚಿಂತನೆಗಳನ್ನು ಮನೆಮನೆ ತಲುಪಿಸಿದ್ದು ದಲಿತ ಸಂಘರ್ಷ ಸಮಿತಿಯ ಪ್ರೊ.ಬಿ. ಕೃಷ್ಣಪ್ಪ. 60-70ರ ದಶಕದಲ್ಲಿ ಅವರು ದಲಿತರ ಗುಡಿಸಲುಗಳಲ್ಲಿ ಹಚ್ಚಿದ ಹಣತೆಗಳನ್ನು ಆರದಂತೆ ನೋಡಿಕೊಳ್ಳಬೇಕು. ಅದಕ್ಕೆ ಸಂಘಟನೆಯ ಅಗತ್ಯವಿದೆ. ಇದರಿಂದ ವ್ಯಕ್ತಿ, ಶಕ್ತಿಯಾಗಲು ಸಾಧ್ಯ. ಆಗ ಆ ಶಕ್ತಿಯಿಂದ ರಾಜ್ಯವನ್ನೇ ನಡುಗಿಸಬಹುದು ಎಂದರು.

ಮೀಸಲಾತಿ ದಲಿತರಿಗೆ ಶಕ್ತಿ ನೀಡಿದೆ. ಆದರೆ, ಈ ಮೀಸಲಾತಿ ಪ್ರಕ್ರಿಯೆ ವ್ಯವಸ್ಥೆಯಲ್ಲಿ ಬೇಡುವ ಪ್ರಕ್ರಿಯೆಯಾಗಿಯೇ ಉಳಿದುಕೊಂಡಿದೆ. ಈ ಪ್ರಕ್ರಿಯೆ ದಲಿತ ಸಮುದಾಯಗಳಲ್ಲಿ ತಲ್ಲಣ ಉಂಟುಮಾಡುತ್ತದೆ. ಯಾವತ್ತೂ ಮೀಸಲಾತಿ ನೀಡುವವರು ಪ್ರಭಾವಶಾಲಿಯಾಗಿದ್ದಾರೆ. ಹಾಗಾಗಿ, ಮೀಸಲು ಪಡೆಯುವವರು ದುರ್ಬಲಗೊಳ್ಳುತ್ತಲೇ ಇದ್ದಾರೆ. ಹಾಗಾಗಿ, ಮೀಸಲಾತಿಗೆ ಪರ್ಯಾಯ ವ್ಯವಸ್ಥೆ ರೂಪಿಸಿಕೊಳ್ಳುವ ಜವಾಬ್ದಾರಿ ಈ ಸಮುದಾಯಗಳ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ದಿನದಿಂದ ದಿನಕ್ಕೆ ಖಾಸಗೀಕರಣಗೊಳ್ಳುತ್ತಿವೆ. ಇದರಿಂದ ಹಿಂದುಳಿದ ಸಮುದಾಯಗಳಿಗೆ ಮುಖ್ಯವಾಹಿನಿಯಲ್ಲಿ ಬರಲು ಕಷ್ಟವಾಗುತ್ತದೆ. ಖಾಸಗಿ ರಂಗದಲ್ಲೂ ಮೀಸಲಾತಿ ವಿಸ್ತರಣೆಗೊಂಡಲ್ಲಿ ದಲಿತರೂ ಕೂಡಾ ಖಾಸಗಿ ವಲಯದಲ್ಲಿ ಉದ್ಯೋಗ ಪಡೆಯುವಂತಾಗುತ್ತದೆ. ಈ ನಿಟ್ಟಿನಲ್ಲಿ ದಲಿತರ ಕೂಗು ಗಟ್ಟಿಗೊಳ್ಳಬೇಕಿದೆ.

ಕೇವಲ ಮೀಸಲಾತಿಯೊಂದನ್ನೇ ನಂಬಿದರೆ ದಲಿತರ, ಹಿಂದುಳಿದ ಸಮುದಾಯದ ಅಭಿವೃದ್ಧಿ ಅಸಾಧ್ಯ. ಈ ಸಮುದಾಯಗಳು ಸ್ಥಿತ್ಯಂತರ ಹೊಂದುವ ಅಗತ್ಯವಿದೆ. ಅಲ್ಲದೇ, ಮೀಸಲಾತಿಗೆ ಪರ್ಯಾಯ ವ್ಯವಸ್ಥೆ ತರಲು ಈ ಸಮುದಾಯಗಳು ಕಾರ್ಯತತ್ಪರ ಆಗಬೇಕು. ಉದ್ಯಮೀಕರಣದತ್ತ ಈ ಸಮುದಾಯಗಳು ಗಮನಹರಿಸಿದರೆ ಅಭಿವೃದ್ಧಿ ಸಾಧ್ಯ ಎಂದು ಅವರು ಸಲಹೆ ನೀಡಿದರು.
ಬೆಂಗಳೂರಿನ ಸಹಾಯಕ ಪೊಲೀಸ್ ಆಯುಕ್ತ ಎಸ್. ಸಿದ್ದರಾಜು ಮಾತನಾಡಿ, ವಿಧಾನಸೌಧದಿಂದ ಹೊರಟ ಕಾಯ್ದೆಗಳು ದಲಿತರ ಕೇರಿಯನ್ನು ತಲುಪುತ್ತಿಲ್ಲ. ಹಿಂದುಳಿದವರು ತಮ್ಮ ಜಾತಿಯ ಬಗ್ಗೆ ಕೀಳರಿಮೆ ಬಿಟ್ಟು ಆತ್ಮವಿಶ್ವಾಸದಿಂದ ಬದುಕುವಂತಾಗಬೇಕು. ಈ ಆತ್ಮವಿಶ್ವಾಸ ರಾಜಕೀಯ ಪ್ರಾತಿನಿಧ್ಯದಿಂದ ಮಾತ್ರ ದೊರೆಯಬಲ್ಲದು ಎಂದರು.

ರಾಮಾಯಣ, ಮಹಾ ಭಾರತಗಳನ್ನೇ ದೇಶದ ಇತಿಹಾಸವೆಂದು ಬಿಂಬಿಸಲಾಗಿದೆ. ಆದರೆ, ಶತಮಾನಗಳಿಂದ ನೋವು ಅನುಭವಿಸಿರುವ ದಲಿತರ ಇತಿಹಾಸದತ್ತ ಯಾರೂ ಗಮನಹರಿಸಿಲ್ಲ ಎಂದು ವಿಷಾದಿಸಿದರು.

ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಪ್ರೊ.ಸಿ.ಕೆ. ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಂ. ಮುನಿಕೃಷ್ಣಪ್ಪ, ಶಂಕರ್, ಎಂ. ಮಹಾದೇವಪ್ಪ, ಪ್ರೊ.ಕೆ.ಕೆ. ಕಾಮಾನಿ, ಕೋಟೆಪ್ಪ, ನಾಗರಾಜ್, ಜಯಪ್ರಕಾಶ್ ನಾರಾಯಣ್, ಜಿ.ವಿ. ಶ್ರೀನಿವಾಸ್, ಡಿ.ಕೆ. ತಿಮ್ಮಪ್ಪ, ಗೂಳಿಹಟ್ಟಿ ತಿಪ್ಪೇಸ್ವಾಮಿ, ಎಚ್.ಪಿ. ನಾಗರಾಜ್, ಡಾ.ಕೃಷ್ಣಮೂರ್ತಿ ಹಾಜರಿದ್ದರು.

ಒಕ್ಕೂಟದ ರಾಜ್ಯ ಘಟಕದ ಉಪಾಧ್ಯಕ್ಷ ಡಾ.ಎ.ಬಿ. ರಾಮಚಂದ್ರಪ್ಪ ಆಶಯ ನುಡಿಗಳನ್ನಾಡಿದರು. ಜಿಲ್ಲಾ ಒಕ್ಕೂಟದ ಗೌರವಾಧ್ಯಕ್ಷ ಪ್ರೊ.ಎಂ.ಒ. ತಿಪ್ಪಯ್ಯ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಪ್ರೊ.ಎಂ. ಮಂಜಣ್ಣ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಪ್ರೊ.ವಿಶ್ವನಾಥ್ ವಂದಿಸಿದರು. ಗಂಗಾಧರ ತಿಲಕ್ ಮತ್ತು ಸಂಗಡಿಗರು ಕ್ರಾಂತಿಗೀತೆ ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.