ಶನಿವಾರ, ಜನವರಿ 25, 2020
18 °C

ಜಾನಪದ ಸಾಹಿತಿ ಶಿವಯೋಗಿ ಬಿದರಿ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕಾಕ: ಮೂಲತಃ ತಾಲ್ಲೂಕಿನ ಮಮದಾಪೂರ ಗ್ರಾಮದವರಾಗಿದ್ದ ಇಲ್ಲಿಯ ವಿವೇಕಾನಂದ ನಗರ ಬಡಾವಣೆ ನಿವಾಸಿ ನಿವೃತ್ತ ಶಿಕ್ಷಣಾಧಿಕಾರಿ ಶಿವಯೋಗಿ ಮಹಾದೇವಪ್ಪ ಬಿದರಿ (68) ಶುಕ್ರವಾರ ನಿಧನ ಹೊಂದಿದರು.ಅವರಿಗೆ ಪತ್ನಿ, ಮೂವರು ಪುತ್ರಿಯರು, ಪುತ್ರ ಇದ್ದಾರೆ.ಮೃತರ ಅಂತಿಮಯಾತ್ರೆಯಲ್ಲಿ ಜೆಡಿ–ಎಸ್‌ ಜಿಲ್ಲಾ ಘಟಜದ ಅಧ್ಯಕ್ಷ ಅಶೋಕ ಪೂಜಾರಿ, ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಬಾಲಶೇಖರ ಬಂದಿ, ಚುಟುಕು ಸಾಹಿತಿ ಟಿ.ಸಿ.ಮೊಹರೆ, ಸಾಹಿತಿ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಸಿ.ಡಿ. ಅಕ್ಕಿ, ಪ್ರಾಧ್ಯಾಪಕ ಡಾ. ಸಿ.ಕೆ. ನಾವಲಗಿ, ನಿವೃತ್ತ ಪ್ರಾಚಾರ್ಯ ವಸಂತ ಕುಲಕರ್ಣಿ, ನಿವೃತ್ತ ಮುಖ್ಯ ಉಪಾಧ್ಯಾಯ ಎಸ್‌.ವಿ. ಮಿರ್ಜಿ, ರೋಟರಿ ರಕ್ತ ಭಂಡಾರದ ಸೋಮಶೇಖರ ಮಗದುಮ್‌, ಎಪಿಎಂಸಿ ನಿರ್ದೇಶಕ ಮಹಾಂತೇಶ ತಾಂವಶಿ, ರೋಟರಿ ಸೇವಾ ಸಂಸ್ಥೆಯ ಮಲ್ಲಿಕಾರ್ಜುನ ಕಲ್ಲೋಳಿ, ಗೋಕಾಕ ಶಿಕ್ಷಣ ಸಂಸ್ಥೆಯ ವಿಶ್ವಸ್ಥ ಮಂಡಳಿ ಚೇರಮನ್‌ ಗಂಗಪ್ಪಣ್ಣ ತಾಂವಶಿ, ಗೋಕಾಕ ವಲಯ ಕ್ಷೇತ್ರ ಶಿಕ್ಷಣಾಧಿ ಕಾರಿ ಎ.ಎಸ್‌.ಜೋಡಗೇರಿ  ಪಾಲ್ಗೊಂಡಿ ದ್ದರು. ಬಿದರಿ ಅವರು ಜಾನಪದ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು.

ಪ್ರತಿಕ್ರಿಯಿಸಿ (+)