ಭಾನುವಾರ, ಏಪ್ರಿಲ್ 11, 2021
20 °C

ಜಾಮೀನಿಗಾಗಿ ಲಂಚ ಪ್ರಕರಣ: ಎಸಿಬಿ ಮುಂದೆ ಶ್ರೀರಾಮುಲು ಹಾಜರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾಮೀನಿಗಾಗಿ ಲಂಚ ಪ್ರಕರಣ: ಎಸಿಬಿ ಮುಂದೆ ಶ್ರೀರಾಮುಲು ಹಾಜರು

ಹೈದರಾಬಾದ್  (ಐಎಎನ್ಎಸ್): ಜಾಮೀನಿಗಾಗಿ ಲಂಚ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಆಂಧ್ರಪ್ರದೇಶ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನೀಡಿರುವ ನೋಟಿಸ್‌ಗೆ ಉತ್ತರಿಸಲು ಕರ್ನಾಟಕದ ಮಾಜಿ ಸಚಿವ ಹಾಗೂ ಬಡವ ಶ್ರಮಿಕ ರೈತ ಪಕ್ಷದ (ಬಿಎಸ್ಆರ್) ಸ್ಥಾಪಕ ಬಿ. ಶ್ರೀರಾಮುಲು ಮಂಗಳವಾರ ಇಲ್ಲಿನ ಭ್ರಷ್ಟಾಚಾರ ನಿಗ್ರಹ ದಳದ ಮುಂದೆ ಹಾಜರಾದರು.ಪ್ರಕರಣಕ್ಕೆ ಸಂಬಂದಿಸಿದಂತೆ ಶ್ರೀರಾಮುಲು ಅವರಿಗೆ ಎಸಿಬಿಯು ಕಳೆದ ವಾರ ನೋಟಿಸ್ ಜಾರಿಗೊಳಿಸಿತ್ತು. ಇದರಿಂದಾಗಿ ಶ್ರೀರಾಮುಲು ಅವರು ಮಂಗಳವಾರ ಬೆಳಿಗ್ಗೆ ಎಸಿಬಿಯ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.ಎಸಿಬಿಯಿಂದ ಈಗಾಗಲೇ ಬಂಧನಕ್ಕೆ ಒಳಗಾಗಿರುವ ಕಂಪ್ಲಿ ಶಾಸಕ ಟಿ.ಎಚ್. ಸುರೇಶ್ ಬಾಬು ಅವರು ಜಿ. ಜನಾರ್ದನ ರೆಡ್ಡಿ ಅವರ ಜಾಮೀನಿಗಾಗಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮುಲು ಅವರ ಮಾರ್ಗದರ್ಶನ ಇತ್ತು ಎಂದು ಎಸಿಬಿ ತನಿಖಾಧಿಕಾರಿಗಳ ಮುಂದೆ ಅವರು ಹೇಳಿಕೆಯನ್ನು ನೀಡಿದ್ದರು.ಈ ಹೇಳಿಕೆಗೆ ಸಂಬಂಧಿಸಿದಂತೆ ಹಾಗೂ ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ಎಸಿಬಿ ಅಧಿಕಾರಿಗಳು ಶ್ರೀರಾಮುಲು ಅವರಿಗೆ ನೋಟಿಸ್ ಜಾರಿಗೊಳಿಸಿದ್ದರು.
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.