ಹಾವೇರಿ:`ರೈತರ ಆಸ್ತಿ ದಾಖಲೆಗಳನ್ನು ಪಡೆದು ಅವರ ಹೆಸರಿನಲ್ಲಿ ಬ್ಯಾಂಕ್ನಲ್ಲಿ ಕೋಟ್ಯಾಂತರ ರೂಪಾಯಿ ಸಾಲ ಪಡೆಯುವ ಕುಂತಂತ್ರ ಕೆಲಸ ಸಂಗೂರ ಸಕ್ಕರೆ ಕಾರ್ಖಾನೆಯ ಜಿ.ಎಂ. ಶುಗರ್ಸ್ ಆಡಳಿತ ಮಂಡಳಿಯಿಂದ ನಡೆಯು ತ್ತಿದೆ~ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಶಿವಾನಂದ ಗುರುಮಠ ಗಂಭೀರ ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ದಾವಣಗೆರೆಯ ಕಾರ್ಪೋರೆಷನ್ ಬ್ಯಾಂಕ್ ಜತೆ ಸಾಲ ಪಡೆಯಲು ಒಡಂಬಂಡಿಕೆ ಮಾಡಿಕೊಂಡ ಜಿ.ಎಂ. ಶುಗರ್ಸ್ ಆಡಳಿತ ಮಂಡಳಿ ನೂರಾರು ರೈತರಿಂದ ದಾಖಲೆಗಳನ್ನು ಸಹ ಪಡೆದುಕೊಂಡಿದೆ ಎಂದು ತಿಳಿಸಿದರು.

ರೈತರ ಹಿರಿತನದ ಪಟ್ಟಿ ತಯಾರಿಸಲಾಗುತ್ತದೆ ಎಂದು ಸುಳ್ಳು ಹೇಳಿ ರೈತರ ಫೋಟೋ, ಮತದಾರರ ಗುರುತಿನ ಚೀಟಿ ಹಾಗೂ ಜಮೀನಿನ ಪಹಣಿ ಪತ್ರಿಕೆಗಳಂತಹ ದಾಖಲೆ ಗಳನ್ನು ಪಡೆದುಕೊಂಡು ಅವರಿಗೆ ಗೊತ್ತಿಲ್ಲದಂತೆಯೇ ಅವರನ್ನು ಸಾಲಗಾರ ರನ್ನಾಗಿ ಮಾಡುವ ವ್ಯವಸ್ಥಿತ ಸಂಚು ಜಿ.ಎಂ.ಶುಗರ್ಸ್ ಆಡಳಿತ ಮಂಡಳಿ ನಡೆಸಿದೆ ಎಂದು ಆಪಾದಿಸಿದರು.

ರೈತರಿಗಾಗಲಿ, ರೈತ ಮುಖಂಡರಿಗೆ ಈ ಬಗ್ಗೆ ಯಾವುದೇ ಮಾಹಿತಿ ನೀಡದೇ ಕಾರ್ಖಾನೆ ಕ್ಷೇತ್ರಾಧಿಕಾರಿ ಮೂಲಕ ರೈತರ ದಾಖಲೆಗಳನ್ನು ಸಂಗ್ರಹಿಸ ಲಾಗುತ್ತಿದೆ. ಈ ಬಗ್ಗೆ ಆ ಅಧಿಕಾರಿ ಯನ್ನು ಕೇಳಿದರೆ, ತಮಗೇನು ಗೊತ್ತಿಲ್ಲ. ಒಂದು ದಾಖಲೆ ಸಂಗ್ರಹಿ ಸಿದರೆ 200 ರೂ. ನೀಡುತ್ತಿದ್ದಾರೆ. ಅದಕ್ಕಾಗಿ ಸಂಗ್ರಹ ಮಾಡುತ್ತಿದ್ದೇವೆ. ಹೆಚ್ಚಿನ ಮಾಹಿತಿಯನ್ನು ಕಾರ್ಖಾನೆ ಯಿಂದ ಪಡೆದುಕೊಳ್ಳಿ ಎಂದು ಹೇಳುತ್ತಿದ್ದಾರೆ ಎಂದರು.

ಕಾರ್ಖಾನೆ ರೈತರಿಗೆ ನೀಡಿದ ಪತ್ರದಲ್ಲಿ ಯಾರ ಹೆಸರು ಇಲ್ಲ. ಸಹಿ ಮಾಡಿದ್ದರೂ ಅದು ಯಾರದು ಎಂಬುದು ಸ್ಪಷ್ಟವಾಗಿಲ್ಲ. ಅದರಲ್ಲಿ ಕಬ್ಬು ಪೂರೈಸಿರುವ ರೈತರ ಬಿಲ್ ಪಾವತಿಸಲು ಬ್ಯಾಂಕಿನಿಂದ ಸಾಲ ಪಡೆಯಲು ಪ್ರಯತ್ನಿಸುತ್ತಿದ್ದು, ಅದು ಶೀಘ್ರದಲ್ಲಿ ಪೂರೈಕೆಯಾಗಲಿದೆ ಎಂದು ಹೇಳಿದ್ದಾರೆ.

ಬ್ಯಾಂಕಿನಿಂದ ಪಡೆಯುವ ಸಾಲವನ್ನು ಬಡ್ಡಿ ಸಮೇತ ಕಂಪೆನಿ ಮರು ಪಾವತಿ ಮಾಡುತ್ತದೆ. ಅದಕ್ಕೆ ಕಾರ್ಖಾನೆ ಆಡಳಿತ ಮಂಡಳಿ ಹೊಣೆ ಹೊರತು, ರೈತರು ಅಲ್ಲ. ಅದಕ್ಕಾಗಿ ರೈತರ ಮಾಹಿತಿ ಹಾಗೂ ಸಹಿಗಳ ಅವಶ್ಯಕತೆ ಇರುವುದರಿಂದ ತಮ್ಮ ಸಹಿಯೊಂದಿಗೆ ಕೆಲವು ದಾಖಲೆಗಳನ್ನು ನೀಡುವಂತೆ ಆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ರೈತರಿಗೆ ಕಬ್ಬಿನ ಬಿಲ್ ಪಾವತಿಸಲು ಹಣದ ಅವಶ್ಯಕತೆ ಯಿದ್ದರೇ ಆಡಳಿತ ಮಂಡಳಿ ಯವರು ತಮ್ಮ ಆಸ್ತಿಯನ್ನು ಅಡವಿಟ್ಟು ಸಾಲ ತೆಗೆದುಕೊಳ್ಳುವುದನ್ನು ಬಿಟ್ಟು, ರೈತರ ಆಸ್ತಿಯನ್ನು ಭದ್ರತೆಗಾಗಿ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದರು.

ಕುಂತಂತ್ರ: ಸಾಲದ ರೂಪದಲ್ಲಿ ಪಡೆಯುವ ಹಣವನ್ನು ರೈತರಿಗೆ ನೀಡಬೇಕಾದ ಬಾಕಿ ಹಣವನ್ನು ನೀಡಿ ಉಳಿದ ಹಣವನ್ನು ಕಾರ್ಖಾನೆ ಅಭಿವೃದ್ಧಿಗೆ ಬಳಸುವ ವ್ಯವಸ್ಥಿತ ಸಂಚು ಹಾಗೂ ರೈತರ ಆಸ್ತಿಯ ಸಾಲ ಪಡೆದು ಅವರನ್ನು ತಮ್ಮ ತಾಳಕ್ಕೆ ಕುಣಿಯುವಂತೆ ಮಾಡುವ ಕುಂತಂತ್ರ ಇದರಲ್ಲಿ ಅಡಗಿದೆ ಎಂದು ದೂರಿದರು.

ರೈತರು ಯಾವುದೇ ಕಾರಣಕ್ಕೂ ಇಂತಹ ಕುಂತಂತ್ರಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ತಕ್ಷಣವೇ ರೈತರ ಆಸ್ತಿ ಮೇಲೆ ಸಾಲ ಪಡೆಯುವ ಪ್ರಕ್ರಿಯೆ ನಿಲ್ಲಿಸಬೇಕು. ಇಲ್ಲವಾದರೆ, ಕಾರ್ಖಾನೆ ಆಡಳಿತ ಮಂಡಳಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾ ಗುವುದು ಎಂದು ಎಚ್ಚರಿಸಿದರು.

3-4 ದಿನಗಳಲ್ಲಿ ಕಬ್ಬು ಬೆಳೆ ಗಾರರು ಸಭೆ ಸೇರಿ ಈ ಕುರಿತು ಚರ್ಚೆ ಹಾಗೂ ಮುಂದಿನ ಹೋರಾ ಟದ ರೂಪರೇಷೆಗಳನ್ನು ತಯಾರಿಸ ಲಾಗುವುದು. ಮುಂದಾಗುವ ಎಲ್ಲ ಅನಾಹುತಗಳಿಗೆ ಜಿಲ್ಲಾಡಳಿತ ಹಾಗೂ ಕಾರ್ಖಾನೆ ಆಡಳಿತ ಮಂಡಳಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗು ವುದಲ್ಲದೇ, ಅಗತ್ಯಬಿದ್ದರೆ, ಕಾರ್ಖಾ ನೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾ ಗುವುದು ಎಂದು ಎಚ್ಚರಿಸಿದರು.

ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಬೆಟಗೇರಿ, ಕಾರ್ಯದರ್ಶಿ ವಿ.ಆರ್.ಪಾಟೀಲ, ಬಸವಣ್ಣಪ್ಪ ಬೆಂಚಿಹಳ್ಳಿ, ರೈತ ಶಿವಪುತ್ರಪ್ಪ ಸಣ್ಣಮನಿ ಮುಂತಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.