ಮಂಗಳವಾರ, ಮೇ 18, 2021
29 °C

ಜಿ.ಎಸ್.ಎಸ್. ಸಾಹಿತ್ಯ ವಿಚಾರಸಂಕಿರಣದಲ್ಲಿ ಇಂದು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರದ ಸೆಮಿನಾರ್ ಹಾಲ್‌ನಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಸಮಗ್ರ ಸಾಹಿತ್ಯ ಕುರಿತು ವಿಚಾರಸಂಕಿರಣದಲ್ಲಿ ಇಂದು ಮೂರು ಗೋಷ್ಠಿಗಳು ನಡೆಯಲಿವೆ.ಗೋಷ್ಠಿ 1 ವಿಷಯ:`ಕಾವ್ಯ ಮೀಮಾಂಸೆ ಮತ್ತು ವ್ಯಕ್ತಿ ವಿಮರ್ಶೆ'.  ಡಾ.ಸಿ.ಎನ್. ರಾಮಚಂದ್ರನ್ ಅಧ್ಯಕ್ಷತೆವಹಿಸುವರು. `ಜಿಎಸ್‌ಎಸ್ ಅವರ ಕಾವ್ಯ ಮೀಮಾಂಸೆ ಕೃತಿಗಳ ಅವಲೋಕನ' ಡಾ.ಆಶಾದೇವಿ. ಡಾ. ಲಿಂಗಣ್ಣ ಗೋನಾಳ್ ಅವರಿಂದ `ಜಿಎಸ್‌ಎಸ್ ಅವರ ವ್ಯಕ್ತಿ ವಿಮರ್ಶೆಯ ಕೃತಿಗಳು'. ಪ್ರತಿಕ್ರಿಯೆ ನೀಡುವವರು ಡಾ.ಬಿ.ಯು. ಸುಮಾ ಮತ್ತು ಡಾ.ಮುರಳೀಧರ.ಗೋಷ್ಠಿ 2 ವಿಷಯ: `ಪ್ರವಾಸ ಸಂಪಾದನೆ'. ಇದರ ಅಧ್ಯಕ್ಷತೆಯನ್ನು ಡಾ.ಸಿ.ಪಿ.ಸಿದ್ದಾಶ್ರಮ ವಹಿಸುವರು. `ಜಿಎಸ್‌ಎಸ್ ಅವರ ಪ್ರವಾಸ ಕಥನಗಳು' ವಿಚಾರವಾಗಿ ಡಾ.ಪ್ರಶಾಂತ ನಾಯಕ್ ಪ್ರಬಂಧ ಮಂಡಿಸುವರು. `ಜಿಎಸ್‌ಎಸ್ ಸಂಪಾದಿತ ಕೃತಿ'ಗಳ ಕುರಿತು ಡಾ.ಎಂ.ಜಿ.ಮಂಜುನಾಥ್ ಮಾತನಾಡುವರು. ಡಾ.ವಡ್ಡೆ ಹೇಮಲತಾ ಮತ್ತು ಡಾ.ವಿ.ನಾಗರಾಜು ಪ್ರತಿಕ್ರಿಯೆ ನೀಡುವರು.ಗೋಷ್ಠಿ 3 ವಿಷಯ `ಜಿಎಸ್‌ಎಸ್ ವ್ಯಕ್ತಿ ವಿಶೇಷತೆ' ನಾಡೋಜ ಡಾ.ಹಂಪ ನಾಗರಾಜಯ್ಯ ಅಧ್ಯಕ್ಷತೆವಹಿಸುವರು. ಡಾ.ಸುಮತೀಂದ್ರ ನಾಡಿಗ್, ಡಾ.ಎಸ್.ವಿದ್ಯಾಶಂಕರ್, ಪ್ರೊ.ಹು.ಕ ಜಯದೇವ್, ಶೂದ್ರ ಶ್ರೀನಿವಾಸ್ ಮತ್ತು ಡಾ.ವಿಜಯಾ ಸುಬ್ಬರಾಜ್ ವಿಚಾರ ಮಂಡಿಸುವರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ವೀರಣ್ಣ ವಹಿಸುವರು. ಅತಿಥಿಗಳಾಗಿ ಡಾ.ಸಿದ್ದಲಿಂಗಯ್ಯ ಮತ್ತು ಡಾ.ಸಿ.ಬಿ. ಹೊನ್ನು ಸಿದ್ದಾರ್ಥ ಭಾಗವಹಿಸುವರು. ಬೆಳಿಗ್ಗೆ 10.30ರಿಂದ ಸಂಜೆ 4.30.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.