ಚೆನ್ನೈ(ಪಿಟಿಐ): ರಾಕೆಟ್ನ ಎರಡನೇ ಹಂತದಲ್ಲಿ ಇಂಧನ ಸೋರಿಕೆ ಕಾರಣದಿಂದ ಮುಂದೂಡಲಾಗಿದ್ದ ಸ್ವದೇಶೀ ತಂತ್ರಜ್ಞಾನದ ಕ್ರಯೋಜೆನಿಕ್ ಎಂಜಿನ್ ಅಳವಡಿಸಿರುವ ‘ಜಿಯೊಸಿಂಕ್ರನಸ್ ಸ್ಯಾಟಲೈಟ್ ಲಾಂಚಿಂಗ್ ವೆಹಿಕಲ್’ (ಜಿಎಸ್ಎಲ್ವಿ –ಡಿ5) ಉಡಾವಣೆಯನ್ನು 2014ರ ಜನವರಿಯಲ್ಲಿ ಮಾಡುವ ಸಾಧ್ಯತೆ ಇದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮಂಗಳವಾರ ಪ್ರಕಟಿಸಿದೆ.

ಜಿಎಸ್ಎಲ್ವಿ ಉಡಾವಣೆಗೆ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದ್ದು, ಜನವರಿಯ ಮೊದಲ ವಾರದಲ್ಲಿ ಅದು ತನ್ನ ಪ್ರಯಾಣ ಬೆಳೆಸಲಿದೆ. ಶೀಘ್ರದಲ್ಲಿ ಉಡಾವಣೆಯ ದಿನಾಂಕ ಮತ್ತು ಸಮಯವನ್ನು ಗೊತ್ತುಪಡಿಸಲಾಗುವುದು ಎಂದು ಇಸ್ರೊ ಹೇಳಿದೆ.

ರಾಕೆಟ್ನ ಎರಡನೇ ಹಂತದಲ್ಲಿ ಉಂಟಾಗಿದ್ದ ಇಂಧನ ಸೋರಿಕೆಯನ್ನು ತಡೆಯುವ ಕಾರ್ಯ ಪೂರ್ಣಗೊಂಡಿದ್ದು, ಡಿ. 9ಕ್ಕೆ ಅದನ್ನು ಅಳವಡಿಸುವ ಕಾರ್ಯ ಪೂರ್ಣಗೊಳ್ಳಲಿದೆ.

ಎಲ್ಲ ಕಾರ್ಯಗಳು ಪೂರ್ಣಗೊಂಡ ನಂತರ ಡಿ. 28ರಂದು ರಾಕೆಟ್ಅನ್ನು ಉಡಾವಣೆ ಮಾಡುವ ಸ್ಥಳದಲ್ಲಿ ಜೋಡಣೆ ಮಾಡಲಾಗುವುದು ಎಂದು ಇಸ್ರೊ ತಿಳಿಸಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್ ನಭಕ್ಕೆ ಚಿಮ್ಮಬೇಕಿತ್ತು. ಆದರೆ, ಉಡಾವಣೆಗೆ 74 ನಿಮಿಷಗಳಿರುವಾಗ ರಾಕೆಟ್ನ ಎರಡನೇ ಹಂತದಲ್ಲಿ ಇಂಧನ ಸೋರಿಕೆ ಕಂಡು ಬಂದಿದ್ದರಿಂದ ಉಡಾವಣೆಯನ್ನು ಸ್ಥಗಿತಗೊಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.