ಹಾಸನ: ನಗರದಲ್ಲಿ ಎಡಬಿಡದೆ ಸುರಿಯುತ್ತಿದ್ದ ಜಿಟಿಜಿಟಿ ಮಳೆಯಲ್ಲೇ ಗುರುವಾರ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಬಾರಿಯ ರಾಜ್ಯೋತ್ಸವ ಹಾಸನ ಜಿಲ್ಲೆಯ ಮಟ್ಟಿಗೆ ವಿಶೇಷವಾಗಿತ್ತು.

ಒಂದೆಡೆ ಭುವನೇಶ್ವರಿ ದೇವಿಯ ಆರಾಧನೆಯಾದರೆ, ಇನ್ನೊಂದೆಡೆ ಹಾಸನದ ಗ್ರಾಮ ದೇವತೆ ಹಾಸನಾಂಬ ದೇವಸ್ಥಾನದ ಬಾಗಿಲನ್ನೂ ಗುರುವಾರ ತೆರೆಯಲಾಯಿತು. ಎರಡೂ ಕಡೆಗಳಲ್ಲಿ ಮಕ್ಕಳು, ನಾಗರಿಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ನೀಲಂ ಚಂಡಮಾರುತದ ಪರಿಣಾಮದಿಂದ ಬುಧವಾರ ಸಂಜೆಯಿಂದಲೇ ಹಾಸನದಲ್ಲಿ ತುಂತುರು ಮಳೆ ಆರಂಭವಾಗಿತ್ತು. ರಾತ್ರಿ ವೇಳೆಗೆ ಅದು ಇನ್ನಷ್ಟು ತೀವ್ರಗೊಂಡು, ಗುರುವಾರವೂ ವರ್ಷಧಾರೆಯ ಅಬ್ಬರ ಮುಂದುವರಿದೇ ಇತ್ತು. ಇದರಿಂದಾಗಿ ರಾಜ್ಯೋತ್ಸವ ಆಚರಣೆಗೆ ಮಾಡಿಕೊಂಡಿದ್ದ ಸಿದ್ಧತೆಗಳಲ್ಲಿ ಕೊಂಚ ಏರುಪೇರಾದರೂ ಉತ್ಸಾಹಕ್ಕೆ ಕೊರತೆ ಆಗಿರಲಿಲ್ಲ.

ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಬೆಳಿಗ್ಗೆ 8.30ರ ಸುಮಾರಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಸೇರಿದ್ದರು. ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಮಕ್ಕಳು ಪರೇಡ್ ನಡೆಸಿದರು. ಆದರೆ ನಂತರದ ಕೆಲವು ಕಾರ್ಯಕ್ರಮಗಳನ್ನು ಮಳೆಯ ಕಾರಣದಿಂದ ರದ್ದು ಮಾಡಲಾಯಿತು.

ಇತ್ತ ಅತಿಥಿಗಳಿಗಾಗಿ ಹಾಕಿದ್ದ ಶಾಮಿಯಾನವೂ ಸೋರುತ್ತಿದ್ದ ಕಾರಣ ಕುರ್ಚಿಗಳೆಲ್ಲವೂ ಖಾಲಿ ಇದ್ದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ವಿತರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಅನುಪಸ್ಥಿತಿಯಲ್ಲಿ ರೇಷ್ಮೆ ಹಾಗೂ ಕಾರ್ಮಿಕ ಇಲಾಖೆ ಸಚಿವ ಬಿ.ಎನ್.ಬಚ್ಚೇಗೌಡ ಅವರು ರಾಷ್ಟ್ರ ಹಾಗೂ ಕನ್ನಡ ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ಸಂದೇಶ ನೀಡಿದರು.

ಶಾಸಕ ಎಚ್.ಎಸ್.ಪ್ರಕಾಶ್, ಹುಡಾ ಅಧ್ಯಕ್ಷ ನವಿಲೆ ಅಣ್ಣಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ರಾಮಕೃಷ್ಣ, ಜಿಲ್ಲಾಧಿಕಾರಿ ಮೋಹನರಾಜ್, ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.