ಕೊಪ್ಪಳ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬುಧವಾರ ಜನಾರ್ದನ ಹುಲಿಗಿ ಆಯ್ಕೆಯಾದರು.

ಮಧ್ಯಾಹ್ನ 3ರ ವೇಳೆಗೆ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ನಡೆಸಿದರು. ಜನಾರ್ದನ ಪರ 19 ಮತಗಳು ಬಿದ್ದವು. ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ತಲಾ 8, ಜೆಡಿಎಸ್ನಿಂದ 3 ಮತಗಳು ಜನಾರ್ದನ ಪಾಲಾದರೆ ಬಿಜೆಪಿ ಅಭ್ಯರ್ಥಿ ಅಮರೇಶ್ ಕುಳಗಿ ಅವರು 7 ಮತಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಕೊನೇ ಕ್ಷಣದವರೆಗೂ ಕುತೂಹಲ ಕಾಯ್ದುಕೊಂಡಿದ್ದ ಚುನಾವಣಾ ಪ್ರಕ್ರಿಯೆ ಮಧ್ಯಾಹ್ನ 2.30ರ ಬಳಿಕ ಗರಿಗೆದರಿ, ಸಂಜೆ ಫಲಿತಾಂಶ ಘೋಷಣೆಯೊಂದಿಗೆ ಮುಕ್ತಾಯವಾಯಿತು.

ಅಭಿವೃದ್ಧಿಯೇ ಹಿತದೃಷ್ಟಿ: ಜನಾರ್ದನ ಜಿಲ್ಲೆಯ ಸಚಿವರು, ಶಾಸಕರು ಹಾಗೂ ಜಿ.ಪಂ. ಸದಸ್ಯರು ಪಕ್ಷಾತೀತವಾಗಿ ಬೆಂಬಲಿಸಿದ್ದಾರೆ. ಆದ್ದರಿಂದ ಇಡೀ ಜಿಲ್ಲೆಯ ಅಭಿವೃದ್ಧಿ ದೃಷ್ಟಿಕೋನ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತೇನೆ ಎಂದು ನೂತನ ಅಧ್ಯಕ್ಷ ಜನಾರ್ದನ ಹುಲಿಗಿ ಹೇಳಿದರು.
ಫಲಿತಾಂಶ ಘೋಷಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಹಳ್ಳಿಗೂ ಕುಡಿಯುವ ಶುದ್ಧ ನೀರು, ವೈಯಕ್ತಿಕ ಶೌಚಾಲಯ, ಸ್ವಚ್ಛತೆಗೆ ಆದ್ಯತೆ ಕೊಡುತ್ತೇನೆ. ಸದಸ್ಯರ ಜತೆ ಸೇರಿಕೊಂಡು ತೀರಾ ಹಿಂದುಳಿದ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ, ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ. ಅಲ್ಲಿ ಅಗತ್ಯವಿರುವ ಕಾಮಗಾರಿ ಕೈಗೊಳ್ಳಲು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ನುಡಿದರು.

ರಾಜಕೀಯವೇ ಗೊಂದಲ: ಅಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿ ಸದಸ್ಯರನ್ನು ಓಲೈಸುವುದು, ಪ್ರವಾಸ ಕರೆದೊಯ್ಯುವುದು ಇತ್ಯಾದಿ ಗೊಂದಲ ಬೇಕಿತ್ತೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ಎಂಬುದೇ ಗೊಂದಲ. ಇಲ್ಲಿ ಎಲ್ಲ ಸದಸ್ಯರು ಎರಡು ವರ್ಷಗಳಿಂದ ನನ್ನ ಕಾರ್ಯನಿರ್ವಹಣೆಯ ಶೈಲಿ ಗಮನಿಸಿದ್ದಾರೆ. ಹಾಗಾಗಿ ಬೆಂಬಲಿಸಿದ್ದಾರೆ. ನಾನು ಕ್ಷೇತ್ರದಲ್ಲಿಯೇ ಇದ್ದೆ. ಯಾರನ್ನೂ ಪ್ರವಾಸಕ್ಕೆ ಕರೆದೊಯ್ದಿಲ್ಲ ಎಂದು ಹೇಳಿದರು.

ಇದೇ ವೇಳೆ ಬಿಜೆಪಿ ಸದಸ್ಯರ ಪ್ರವಾಸದ ನೇತೃತ್ವ ವಹಿಸಿದ್ದ ಸದಸ್ಯ ವಿನಯ್ ಮೇಲಿನಮನಿ ಅವರನ್ನು ಪ್ರಶ್ನಿಸಿದಾಗ, ಅಭಿವೃದ್ಧಿಯ ದೃಷ್ಟಿಯಿಂದ ಜನಾರ್ದನ ಅವರನ್ನು ಬೆಂಬಲಿಸಿದ್ದೇವೆ. ವಿಪ್ ಜಾರಿ ಇತ್ಯಾದಿ ಕ್ರಮಗಳ ಬಗ್ಗೆ ಪಕ್ಷ ಕಾನೂನು ಕ್ರಮ ಕೈಗೊಂಡರೆ ನಾವೂ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತೇವೆ. ಸದ್ಯಕ್ಕಂತೂ ಬಿಜೆಪಿಯಲ್ಲೇ ಇದ್ದೇವೆ. ಸಮಯ ಬಂದಾಗ ಎಲ್ಲದಕ್ಕೂ ಉತ್ತರಿಸುತ್ತೇವೆ ಎಂದು ಹೇಳಿದರು.
ಚುನಾವಣೆಯ ಬಳಿಕ ಜನಾರ್ದನ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಮುಂಭಾಗದ ರಸ್ತೆಯಲ್ಲಿ ವಿಜಯೋತ್ಸವ ಆಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.