ಕೊಪ್ಪಳ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಗದ್ದುಗೆಗೆ ಸದಸ್ಯರು ದಂಡಯಾತ್ರೆ ಕೈಗೊಂಡಿದ್ದಾರೆ. ಕೊಪ್ಪಳ ಸೀಮೆಯ ಮಂದಿ ಕೇರಳದ ಮಲಬಾರ್ ತೀರದಲ್ಲಿ ಬೀಡುಬಿಟ್ಟು ಹಾಯಾಗಿದ್ದಾರೆ. ವಿಚಿತ್ರವೆಂದರೆ ಇವರೆಲ್ಲರ ನೇತೃತ್ವ ವಹಿಸಿದವರು ಬಿಜೆಪಿ ಸದಸ್ಯರು.

ಕಾಂಗ್ರೆಸ್ನ ಜನಾರ್ದನ ಹುಲಿಗಿ ಅವರ `ಪಟ್ಟಾಭಿಷೇಕ'ಕ್ಕೆ ಇಷ್ಟೆಲ್ಲಾ ಕಸರತ್ತು ನಡೆಯುತ್ತಿದೆ. ಇರುವ 27 ಸದಸ್ಯರು ಮೂರು ತಂಡಗಳಾಗಿ ಹೊರಟಿದ್ದಾರೆ. ಬಿಜೆಪಿಯ 14 ಸದಸ್ಯರ ಪೈಕಿ 11 ಮಂದಿ ಕೇರಳಕ್ಕೆ ಹೋಗಿದ್ದರೆ, ಕಾಂಗ್ರೆಸ್ನ 7 ಮಂದಿ ಮೈಸೂರಿನಲ್ಲಿ ಬೀಡುಬಿಟ್ಟಿದ್ದಾರೆ. ಜೆಡಿಎಸ್ನ ನಾಲ್ವರು ಇನ್ನೊಂದು ತಂಡದಲ್ಲಿ ಪ್ರವಾಸ ಹೊರಟಿದ್ದಾರೆ.

ಕುಟುಂಬದ ಸದಸ್ಯರಿಗೆ ಗಾಳ: ಇತ್ತೀಚೆಗೆ ಹೊಸಪೇಟೆಯ ತುಂಗಭದ್ರಾ ಅಣೆಕಟ್ಟೆ ಬಳಿಯ ಇಂದ್ರಭವನದಲ್ಲಿ ಕಾಂಗ್ರೆಸ್ ಗುಪ್ತ ಸಭೆ ನಡೆದಿತ್ತು. ಅಲ್ಲಿ ಈ ವ್ಯವಸ್ಥಿತ ತಂತ್ರ ಹೆಣೆಯಲಾಗಿದೆ ಎನ್ನುತ್ತವೆ ಮೂಲಗಳು. ಎಲ್ಲ ಸದಸ್ಯರನ್ನು ಅದರಲ್ಲೂ ಮಹಿಳಾ ಸದಸ್ಯರನ್ನು ಕರೆದೊಯ್ಯಲಾಗದ ಹಿನ್ನೆಲೆಯಲ್ಲಿ ಅವರ ಕುಟುಂಬದ ಸದಸ್ಯರನ್ನು ಪ್ರವಾಸಕ್ಕೆ ಕರೆದೊಯ್ಯಲಾಗಿದೆ. ಬಿಜೆಪಿ ಸದಸ್ಯರ ತಂಡದ ನೇತೃತ್ವವನ್ನು ವಿನಯ್ಕುಮಾರ್ ಮೇಲಿನಮನೆ ವಹಿಸಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ.

ಹೋದವರಿವರು: ಬಿಜೆಪಿಯ ಹೇರೂರು ಕ್ಷೇತ್ರದ ಚನ್ನಮ್ಮ ವಿರೂಪಾಕ್ಷಗೌಡ ಅವರ ಪುತ್ರ ಬಸವನಗೌಡ, ನವಲಿ ಕ್ಷೇತ್ರದ ಸದಸ್ಯೆ ಜ್ಯೋತಿ ಬಿಲ್ಗಾರ್ ಅವರ ಪತಿ ನಾಗರಾಜ್ ಬಿಲ್ಗಾರ್, ಇರಕಲ್ಗಡ ಕ್ಷೇತ್ರದ ಕಸ್ತೂರಮ್ಮ ಬಸವನಗೌಡ ಪಾಟೀಲ್ ಅವರ ಪುತ್ರ ಸಂಗನಗೌಡ ಪಾಟೀಲ್, ಯಲಬುರ್ಗದ ಅರವಿಂದಗೌಡ, ಉಪಾಧ್ಯಕ್ಷೆ ಅನ್ನಪೂರ್ಣಮ್ಮ ಕಂದಕೂರಪ್ಪ ಅವರ ಪತಿ ಕಂದಕೂರಪ್ಪ ವಾಲ್ಮೀಕಿ, ಚಳಗೇರಾ ಕ್ಷೇತ್ರದ ಸದಸ್ಯೆ ಹನುಮಕ್ಕ ಅವರ ಪತಿ ಹನುಮಂತಪ್ಪ ಚೌಡ್ಕಿ, ಕೊರಡಕೇರಾ ಕ್ಷೇತ್ರದ ಪರಸಪ್ಪ ಮರಿಯಪ್ಪ ಕತ್ತಿ ಪ್ರವಾಸಕ್ಕೆ ತೆರಳಿದ್ದಾರೆ.

ಹನುಮನಾಳ ಕ್ಷೇತ್ರದ ಸದಸ್ಯೆ ವಿದ್ಯಾಶ್ರೀ ಈರಣ್ಣ ಗಜೇಂದ್ರಗಡ ಅವರ ಪತಿ ಈರಣ್ಣ ಗಜೇಂದ್ರಗಡ ಅವರೂ ಈ ಗುಂಪಿನ ಜತೆ ಸೇರಲು ಒಪ್ಪಿದ್ದಾರೆ ಎನ್ನುತ್ತವೆ ಮೂಲಗಳು.

ಪ್ರವಾಸ ಹೋದದ್ದು: ಹೊಸಪೇಟೆ-ಮೈಸೂರು -ಊಟಿ-ಕೊಯಮತ್ತೂರು-ಕೊಚ್ಚಿ-ಮಂಗಳೂರು. ಇಲ್ಲಿಂದ ಸೋಮವಾರ (ಜೂ.17) ಹೊರಟು ಹುಬ್ಬಳ್ಳಿ ಅಥವಾ ಕೊಪ್ಪಳಕ್ಕೆ ಸಮೀಪವಿರುವ ಸ್ಥಳಕ್ಕೆ ಬರಲಿದ್ದಾರೆ. ಇದೇ ವೇಳೆಗೆ ಜೂನ್ 18 ರಂದು ಕಾಂಗ್ರೆಸ್, ಜೆಡಿಎಸ್ ತಂಡಗಳು ಇವರನ್ನು ಸೇರಲಿವೆ. 19ರಂದು ನೇರವಾಗಿ ಜಿ.ಪಂ.ನ ಚುನಾವಣಾ ಪ್ರಕ್ರಿಯೆಗೆ ಆಗಮಿಸಲಿದ್ದಾರೆ ಎಂದು ಮೂಲಗಳು ವಿವರಿಸಿವೆ.

ಕುಕನೂರು ಕ್ಷೇತ್ರದ ಸದಸ್ಯ ಈರಪ್ಪ ಕುಡಗುಂಟಿ ಕಾಂಗ್ರೆಸ್ ತಂಡದ ನೇತೃತ್ವ ವಹಿಸಿದ್ದಾರೆ. ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಜನಾರ್ದನ ಹುಲಿಗಿ ಹೊರತುಪಡಿಸಿ ಎಲ್ಲರೂ ಪ್ರವಾಸಕ್ಕೆ ತೆರಳಿದ್ದಾರೆ.

ಒಟ್ಟಿನಲ್ಲಿ ಜಿ.ಪಂ.ನ 27 ಸದಸ್ಯ ಬಲದಲ್ಲಿ 14 ಸದಸ್ಯರ ಬಲ ಬಿಜೆಪಿಗೆ ಇದ್ದರೂ ಆಂತರಿಕ ಭಿನ್ನಾಭಿಪ್ರಾಯದಿಂದ ಅಧಿಕಾರದ ಲಾಭ ಕಾಂಗ್ರೆಸ್ ಪಾಲಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.

ಜಿ.ಪಂ. ಸದಸ್ಯ ಬಲ
ಕಾಂಗ್ರೆಸ್ 9
ಬಿಜೆಪಿ 14
ಜೆಡಿಎಸ್ 4
ಒಟ್ಟು 27

ಪ್ರವಾಸ ಅಗತ್ಯವಿರಲಿಲ್ಲ
ಕಾಂಗ್ರೆಸ್ ಸದಸ್ಯ ಜನಾರ್ದನ ಹುಲಿಗಿ ಅಧ್ಯಕ್ಷರಾಗುವುದು ಖಾತ್ರಿ. ಅವರಿಗೆ ಎಲ್ಲರ ಬೆಂಬಲವೂ ಇದೆ. ಅದಕ್ಕಾಗಿ ಪ್ರವಾಸ ಹೋಗುವ ಅಗತ್ಯವಿರಲಿಲ್ಲ. ಬಿಜೆಪಿಯ ಆಂತರಿಕ ಕಲಹ, ಸರಿಯಾದ ನಾಯಕತ್ವದ ಕೊರತೆಯಿಂದಾಗಿ ಆ ಸದಸ್ಯರು ನಮ್ಮತ್ತ ಒಲವು ತೋರಿದ್ದಾರೆ.
-ಕೆ.ರಾಘವೇಂದ್ರ ಹಿಟ್ನಾಳ, ಕೊಪ್ಪಳ ಶಾಸಕ

ಭರವಸೆಯಿದೆ
ಎರಡು ಬಾರಿ ಸಭೆ ನಡೆಸಿದ್ದೆವು. ಆಗ ನಮ್ಮವರಿಗೆ ಬೆಂಬಲ ಕೊಡುವುದಾಗಿ ಹೇಳಿದವರು ಈಗ ಪ್ರವಾಸ ಹೋಗಿದ್ದಾರೆ ಎನ್ನಲಾಗುತ್ತಿದೆ. ದಿಢೀರ್ ಗೊಂದಲ ಸೃಷ್ಟಿಯಾಗಿದೆ. ಅವರು ವಾಪಸ್ ಬರಬಹುದು. ನಮ್ಮವರನ್ನೇ ಬೆಂಬಲಿಸಬಹುದು ಎಂಬ ಭರವಸೆಯಿದೆ. ಈ ಬಗ್ಗೆ ಉನ್ನತಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ.
-ಎಚ್. ಗಿರೇಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.