ಸೋಮವಾರ, ಜನವರಿ 20, 2020
18 °C

ಜಿಲ್ಲೆಗೆ 255 ಪೊಲೀಸ್‌ ವಸತಿ ಗೃಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆಗೆ 255 ಪೊಲೀಸ್‌ ವಸತಿ ಗೃಹ ಮಂಜೂರಾಗಿದ್ದು, ಇದರಲ್ಲಿ ನಗರದಲ್ಲಿ 108 ವಸತಿ ಗೃಹ ನಿರ್ಮಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್‌ಗುಪ್ತಾ ಹೇಳಿದರು.ನಗರದ ಡಿಎಆರ್‌ ಮೈದಾನದಲ್ಲಿ ಗುರುವಾರ ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸದ್ಯದಲ್ಲೇ ವಸತಿ ಗೃಹ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಅಲ್ಲದೆ ಶಿರಾ ಗೇಟ್‌ನಲ್ಲಿ ಎಸ್ಪಿ ವಸತಿ ಗೃಹ ನಿರ್ಮಾಣಕ್ಕೆ ಪೊಲೀಸ್‌ ಇಲಾಖೆಗೆ ಸರ್ಕಾರ 2 ಎಕರೆ ಜಾಗ ನೀಡಿದೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಕೆ.ಎಸ್‌.ಸತ್ಯಮೂರ್ತಿ ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿ, ಜಿಲ್ಲೆ ಸೂಕ್ಷ್ಮ ಪ್ರದೇಶವಾಗಿದ್ದು, ಪೊಲೀಸರ ಮೇಲೆ ಹೆಚ್ಚು ಕೆಲಸದ ಒತ್ತಡವಿದೆ. ಚುನಾವಣೆ ಕಾರ್ಯಗಳ ಜತೆಗೆ ಮತೀಯ ಮನೋಭಾವವನ್ನು ಸಹ ನಿಯಂತ್ರಿಸುವ ಹೊಣೆಗಾರಿಕೆ ಇದೆ. ಈಚೆಗೆ ಗೊರವನಹಳ್ಳಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ಅವಾಂತರದಲ್ಲಿ ಜಿಲ್ಲಾಡಳಿತಕ್ಕೆ ಕೆಟ್ಟ ಹೆಸರು ಬರುವುದನ್ನು ಪೊಲೀಸರು ತಪ್ಪಿಸಿದರು ಎಂದು ಶ್ಲಾಘಿಸಿದರು.ಎಎಸ್‌ಪಿ ಲಕ್ಷ್ಮಣ್‌ ಮತ್ತಿತರರು ಭಾಗವಹಿಸಿದ್ದರು. ಜಿಲ್ಲೆಯ ಎಲ್ಲಾ 5 ವಿಭಾಗಗಳ ಪೊಲೀಸ್‌ ಸಿಬ್ಬಂದಿ, ಡಿಎಆರ್‌ ಮತ್ತು ಮಹಿಳಾ ಪೊಲೀಸರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಓಟ, ತ್ರಿಬಲ್‌ ಜಂಪ್‌, ಲಾಂಗ್‌ ಜಂಪ್‌, ರಿಲೇ, ಹ್ಯಾಮರ್‌, ಡಿಸ್ಕಸ್‌ ಎಸೆತ ಸೇರಿದಂತೆ ವಿವಿಧ ಅಥ್ಲೆಟಿಕ್ಸ್‌ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಪ್ರತಿಕ್ರಿಯಿಸಿ (+)