ದಾನಚಿಂತಾಮಣಿ ಅತ್ತಿಮಬ್ಬೆ ವೇದಿಕೆ, ಲಕ್ಕುಂಡಿ (ಗದಗ ತಾ.): ‘ಬಹಳಷ್ಟು ನಾಯಕರು ಹೇಳುತ್ತಾರೆ. ಗದಗ ಜಿಲ್ಲೆಯ ಮಣ್ಣಿನಲ್ಲಿ ಚಿನ್ನವಿದೆ, ಗಾಳಿಯಲ್ಲಿ ವಿದ್ಯುತ್ ಇದೆ, ನೀರಿನಲ್ಲಿ ಫಲವತ್ತತೆ ಇದೆ, ವಾತಾವರಣದಲ್ಲಿ ಸೌಹ್ದಾ ಇದೆ. ಆದರೂ ಜಿಲ್ಲೆ ಯಾಕೆ ಹಿಂದುಳಿದಿದೆ? ಏಕೆಂದರೆ ನಮ್ಮ ನಾಯಕರ ತಲೆಯಲ್ಲಿ ಮಣ್ಣಿದೆ...’

ಲಕ್ಕುಂಡಿ ಉತ್ಸವದ ಎರಡನೇ ದಿನ ವಾದ ಭಾನುವಾರ ಏರ್ಪಡಿಸಿದ್ದ ಕವಿ ಗೋಷ್ಠಿಯಲ್ಲಿ ಹೀಗೆ ಕವಿ ಡಿ.ವಿ.ಬಡಿಗೇರ ಅವರು ಕವನ ವಾಚಿಸುತ್ತಿದ್ದರೆ ಪ್ರೇಕ್ಷಕರ ಗ್ಯಾಲರಿಯಿಂದ ಕರತಾಡನ ಮೊಳಗಿತು. ಶಿಳ್ಳೆ ಕೇಳಿ ಬಂತು. ಓನ್ಸ್ ಮೋರ್, ಓನ್ಸ್ ಮೋರ್ ಎಂದು ಕೂಗಿದರು. ಇದರಿಂದ ಉತ್ತೇಜಿತರಾದ ಬಡಿಗೇರ, ‘ತುಂಗಭದ್ರ ತುಂಬಿ ಹರಿಯುತ್ತಿದ್ದರೂ ಜನರಿಗೆ ಕುಡಿಯಲು ಹನಿ ನೀರಿಲ್ಲ. ಏಕೆಂದರೆ ನಮ್ಮ ನಾಯಕರ ತಲೆಯಲ್ಲಿಮಣ್ಣಿದೆ’ ಎಂದು ಹೇಳುತ್ತಿದ್ದಂತೆ ಮತ್ತೆ ಚಪ್ಪಾಳೆ ಕೇಳಿ ಬಂತು.

‘ಯಾವ ಪಕ್ಷವನ್ನು ಉದ್ದೇಶಿಸಿ ಹೇಳುತ್ತಿಲ್ಲ. ರಾಜಕೀಯ ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆ ಯಿದೆ. ಹೀಗಾಗಿ ಸಮಸ್ಯೆಗಳಿಗೆ ಪರಿಹಾ ರವೇ ಇಲ್ಲವಾಗಿದೆ’ ಎಂದು ಹೇಳಿ ಮಾತು ನಿಲ್ಲಿಸಿದರು. ‘ಹೇಳ್ರಿ ಸಾರ್, ನಿಲ್ಲಿ ಸಬೇಡ್ರಿ’ ಎಂದು ಪ್ರೇಕ್ಷಕರು ಕೂಗ ತೊಡ ಗಿದರು. ‘ತುಂಬ ಮಾತ ನಾಡಿದ್ದೇನೆ, ಸಾಕು’ ಎನ್ನುತ್ತಾ ತಮ್ಮ ಆಸನದಲ್ಲಿ ಹೋಗಿ ಕುಳಿತರು.
ಈ ನಡುವೆ ಪ್ರೇಕ್ಷಕರ ಗ್ಯಾಲರಿಯ ಮುಂದಿನ ಸಾಲಿನಲ್ಲಿ ಕುಳಿತ್ತಿದ್ದ ಜನಪ್ರತಿ ನಿಧಿಗಳಿಗೆ ಮುಜುಗರ ಉಂಟಾದರೂ ಒಲ್ಲದ ಮನಸ್ಸಿನಿಂದ ಕವನ ಕೇಳುತ್ತ ಕುಳಿತರು.

ಉತ್ತಮ ಪ್ರತಿಕ್ರಿಯೆ: ಯುವ ಕವಿ ಗಳಿಂದ ಸಭಾಂಗಣದ ವೇದಿಕೆ ತುಂಬಿತ್ತು. ಜಿಲ್ಲೆಯ ವಿವಿಧೆಡೆಯ 24 ಕವಿಗಳು ತಮ್ಮ ಕವಿತೆಗಳ ಮೂಲಕ ಪ್ರಾದೇಶಿಕ ಸೊಗಡನ್ನು ಕಟ್ಟಿಕೊಟ್ಟರು.

ಕವಿಗೋಷ್ಠಿಯಲ್ಲಿ ಮಂಡಿಸಿದ ಕವನ ಗಳಲ್ಲಿ ಕೆಲವು ಮಾತ್ರ ಕಾಡುವಂತ ಹದ್ದಾಗಿದ್ದವು. ಕೆಲ ಕವನಗಳು ಹೊಸ ತನವಿಲ್ಲದ ಹಳೆಯದರ ಮುಂದುವರಿಕೆ ಯಾಗಿ ಕಂಡು ಬಂದವು. ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸಿದ ಕವನಗಳೂ ಬೆರಳಣಿಕೆಯಷ್ಟಿದ್ದವು.

ಎ.ಎಸ್.ಮಕಾನದಾರ ಅವರ ಅಪ್ಪಣ್ಣನಲ್ಲಿ ಒಂದು ಮನವಿ, ಡಾ.ಎಂ. ಡಿ.ವಕ್ಕುಂದ ಅವರ ರೆಡ್ಡಿಯ ವರೊಂದಿಗೆ ಆತ್ಮ ಸಂವಾದ, ಮರಳ ಸಿದ್ದಪ್ಪ ದೊಡ್ಡ ಮನಿ ಅವರ ಅನ್ನದಾತನ ಕಣ್ಣೀರು, ಚೇತನ ಸೊಲಗಿ ಅವರ ‘ಸಾಫ್ಟ್ ಜಗತ್ತಿನಲ್ಲಿ’ ಕವಿತೆಗಳು ವಿಶೇಷತೆಯನ್ನು ಹೊಂದಿದ್ದವು. ಹಾಗೆಯೇ ಪ್ರಸ್ತುತ ಅಧಿ ಕಾರಿಶಾಹಿಗಳು ಮತ್ತು ಕಾರ್ಮಿಕರ ನಡುವಿನ ತಿಕ್ಕಾಟ ಕುರಿತು ಬಸವರಾಜ ಹಲಕುರ್ಕಿ ಅವರ ಕಾಲನ ದವಡೆ ಕವಿತೆ ಕವಿಗಳಲ್ಲಿ ಬಿಸಿ ಚರ್ಚೆ ನಡೆಯಿತು.

ಧಾರವಾಡದ ಕವಿ ಸುಕನ್ಯಾ ಮಾರುತಿ ಅಧ್ಯಕ್ಷತೆ ವಹಿಸಿದ್ದರು. ಗೀತಾಂಜಲಿ ಮೆಣಸಿನಕಾಯಿ ಮತ್ತು ಎಂ.ಎಸ್.ಹುಲ್ಲೂರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.