ಬುಧವಾರ, ಏಪ್ರಿಲ್ 21, 2021
27 °C

ಜೀವನಪೂರ್ತಿ ಸೇವಾ ಭಾವನೆ ಪಾಲಿಸಲು ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಶಿಬಿರದಲ್ಲಿ ಪಡೆದ ಸೇವಾ ಮನೋಭಾವವನ್ನು ವಿದ್ಯಾರ್ಥಿ ಜೀವನದ ನಂತರವೂ ಮುಂದುವರಿಸಿಕೊಂಡು ಹೋಗಬೇಕು ಎಂದು ಸಚಿವ ಬಿ.ಎನ್.ಬಚ್ಚೇಗೌಡ ಶನಿವಾರ ಹೇಳಿದರು. ತಾಲ್ಲೂಕಿನ ಜಡಿಗೇನಹಳ್ಳಿ ಗ್ರಾಮದಲ್ಲಿ ಬೆಂಗಳೂರಿನ ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ವಿದ್ಯಾರ್ಥಿಗಳು ನಡೆಸಿದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.ಜಿಲ್ಲಾ ಪಂಚಾಯಿತಿ ಸದಸ್ಯ ತಿರುವರಂಗ ನಾರಾಯಣ ಸ್ವಾಮಿ ಮಾತನಾಡಿದರು. ಪ್ರಾಂಶುಪಾಲರಾದ ಪ್ರೊ.ಸರೋಜಿನಿ ಕೆ.ಮಲ್ಹಾರಿ ಅಧ್ಯಕ್ಷತೆ ವಹಿಸಿದ್ದರು. ಒಂದು ವಾರ ನಡೆದ ಶಿಬಿರದಲ್ಲಿ ಮಹಿಳೆಯರಿಗೆ ಕ್ಯಾಂಡಲ್ ತಯಾರಿಕೆ ತರಬೇತಿ, ಗ್ರಾಮ ಸ್ವಚ್ಛತೆ, ಗಿಡ ನೆಡುವ ಕಾರ್ಯವನ್ನು 80 ವಿದ್ಯಾರ್ಥಿನಿಯರು ನಡೆಸಲಾಯಿತು. ವಿದ್ಯಾರ್ಥಿನಿ ಕುಮಾರಿ ಆಶಾ ವರದಿ ಓದಿದರು.ಗ್ರಾ.ಪಂ. ಅಧ್ಯಕ್ಷ ಜಿ.ವೈ.ಕೃಷ್ಣಪ್ಪ, ಉಪಾಧ್ಯಕ್ಷ ಕೆ.ಎಂ.ಕೃಷ್ಣಪ್ಪ, ತಾ.ಪಂ. ಸದಸ್ಯರಾದ ರಾಣಿ, ಮಮತಾ, ಸಿಪಿಐ ಎಂ.ಮಲ್ಲೇಶ್, ಶಿಬಿರಾಧಿಕಾರಿಗಳಾದ ಎ.ಗೀತಾ, ಆರ್.ಪುಷ್ಪಲತಾ ಪಾಲ್ಗೊಂಡಿದ್ದರು. ಎಸ್.ಗೋವಿಂದಪ್ಪ ವಂದಿಸಿದರು. ಜೂಜಾಟ: ಹೊಸಕೋಟೆಯ ಕೆಜಿಕೆಎಂಎಸ್ ಶಾಲೆ ಮೈದಾನದಲ್ಲಿ ಶುಕ್ರವಾರ ಸಂಜೆ ಜೂಜಾಡುತ್ತಿದ್ದ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿ ಸುರೇಂದ್ರ ಮತ್ತು ಇತರ ಐವರನ್ನು ಬಂಧಿಸಿದ್ದಾರೆ. ಅಲ್ಲದೆ ಪಣಕ್ಕೆ ಇಟ್ಟಿದ್ದ 21 ಸಾವಿರ ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.