ಜುಲೈನಲ್ಲಿ ವಾಹನ ಮಾರಾಟ ಹೆಚ್ಚಳ

ನವದೆಹಲಿ (ಪಿಟಿಐ): ಮಾರುತಿ ಸುಜುಕಿ ಸೇರಿದಂತೆ ಪ್ರಮುಖ ಕಾರು ತಯಾರಿಕಾ ಕಂಪೆನಿಗಳು ಜುಲೈ ತಿಂಗಳಿನಲ್ಲಿ ಉತ್ತಮ ಮಾರಾಟ ಪ್ರಗತಿ ದಾಖಲಿಸಿವೆ.ದೇಶದಾದ್ಯಂತ ಉತ್ತಮ ಮಳೆಯಾಗುತ್ತಿರುವುದೇ ವಾಹನ ಮಾರಾಟದಲ್ಲಿ ಏರಿಕೆಯಾಗಲು ಕಾರಣ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮಾರುತಿ ಸುಜುಕಿ ಇಂಡಿಯಾ 1.25 ಲಕ್ಷ ಕಾರುಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷಕ್ಕಿಂತಲೂ ಶೇ 14ರಷ್ಟು ಪ್ರಗತಿ ಸಾಧಿಸಿದೆ. ವಿತಾರಾ ಬ್ರೇಜಾ, ಎರ್ಟಿಗಾ ಮತ್ತು ಎಸ್–ಕ್ರಾಸ್ ಸೇರಿದಂತೆ ಎಸ್ಯುವಿ ವಾಹನಗಳ ಉತ್ತಮ ಮಾರಾಟ ದುಪ್ಪಟ್ಟಾಗಿದೆ. ಇದರಿಂದ ಒಟ್ಟು ಮಾರಾಟದಲ್ಲಿ ಏರಿಕೆ ಕಂಡುಬಂದಿದೆ ಎಂದು ಕಂಪೆನಿ ತಿಳಿಸಿದೆ.
ಕಾಂಪ್ಯಾಕ್ಟ್ ಸೆಗ್ಮೆಂಟ್ನಲ್ಲಿ ಸ್ವಿಫ್ಟ್, ಎಸ್ಟಿಲೊ, ಡಿಜೈರ್ ಮತ್ತು ಬಲೆನೊ ಮಾರಾಟ ಶೇ 4ರಷ್ಟು ಹೆಚ್ಚಾಗಿದೆ. ಆದರೆ, ಕಂಪೆನಿಯ ಸಣ್ಣ ಗಾತ್ರದ ವಾಹನಗಳಾದ ಆಲ್ಟೊ, ವ್ಯಾಗನ್ಆರ್ ಮಾರಾಟ ಇಳಿಕೆಯಾಗಿದೆ.
ಹುಂಡೈ: ಹುಂಡೈ ಮೋಟಾರ್ ಇಂಡಿಯಾ 41,201 ವಾಹನಗಳನ್ನು ಮಾರಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟದಲ್ಲಿ ಶೇ 13ರಷ್ಟು ಹೆಚ್ಚಾಗಿದೆ. ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 14ರಷ್ಟು ಮಾರಾಟ ಪ್ರಗತಿ ದಾಖಲಿಸಿದೆ.
ಫೋರ್ಡ್ ಇಂಡಿಯಾದ ಮಾರಾಟವು ಶೇ 62ರಷ್ಟು ಹೆಚ್ಚಾಗಿದೆ. ರೆನೊ ಇಂಡಿಯಾ ಮಾರಾಟ ಅಲ್ಪ ಏರಿಕೆ ಕಂಡಿದೆ.ಇನ್ನು, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಮಾರಾಟದಲ್ಲಿ ಶೇ 3ರಷ್ಟು ಹೆಚ್ಚಳವಾಗಿದೆ.
ದ್ವಿಚಕ್ರ ವಾಹನ: ದ್ವಿಚಕ್ರ ವಾಹನ ವಿಭಾಗದಲ್ಲಿ, ಹೀರೊ ಮೋಟೊ ಕಾರ್ಪ್ ಕಂಪೆನಿ ಮಾರಾಟ ಶೇ 9.13ರಷ್ಟು ಹೆಚ್ಚಾಗಿದೆ. ಚೆನ್ನೈ ಮೂಲದ ಟಿವಿಎಸ್ ಮಾರಾಟವು ಶೇ 14ರಷ್ಟು ಏರಿಕೆಯಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.