ಬೆಳಗಾವಿ: ವಿಶ್ವ ಕನ್ನಡ ಸಮ್ಮೇಳನವನ್ನು ಬಿಜೆಪಿ ಸಮಾವೇಶ ಮಾಡುತ್ತಿರುವುದನ್ನು ಖಂಡಿಸಿ ಸೋಮವಾರ ಜೆಡಿ(ಎಸ್) ಮುಖಂಡರು ಪ್ರತಿಭಟನಾ ರ್ಯಾಲಿ ನಡೆಸಿದರು. ನಗರದ ಎಲ್ಲೆಡೆ ಬ್ಯಾನರ್ಗಳಲ್ಲಿ ಬಿಜೆಪಿ ನಾಯಕರ ಭಾವಚಿತ್ರಗಳೇ ಕಾಣಿಸುತ್ತಿವೆ. ಸಮಿತಿಗಳಲ್ಲಿಯೂ ಬಿಜೆಪಿಯವರಿಗೆ ಮಣೆ ಹಾಕಲಾಗಿದೆ. ಸರ್ಕಾರದ ಹಣದಲ್ಲಿ ಪಕ್ಷದ ಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ನಾಡಿಗಾಗಿ ದುಡಿದವರ, ಸಾಧನೆ ಮಾಡಿದವರ ಭಾವ ಚಿತ್ರಗಳನ್ನು ಬ್ಯಾನರ್ಗಳಲ್ಲಿ ಹಾಕಬೇಕು ಎಂದು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಏಕೆ ಗಮನ ಹರಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ಸಲ್ಲಿಸದ ಮನವಿಯಲ್ಲಿ ಪ್ರಶ್ನಿಸಿದ್ದಾರೆ. ಕನ್ನಡಕ್ಕಾಗಿ ಹೋರಾಡಿದ ಹಲವರ ಮೇಲೆ ಮೊಕದ್ದಮೆಗಳನ್ನು ಹೂಡಲಾಗಿದೆ. ಕೂಡಲೇ ಅವುಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಯುವ ಘಟಕದ ಅಧ್ಯಕ್ಷ ಮುಕ್ತಾ ಇನಾಮದಾರ, ಸಿದಗೌಡ ಮೋದಗಿ, ಗಿರೀಶ ಗೋಕಾಕ, ಮುಸ್ತಾಕ್ ಮಿರ್ಜಾ, ಆಸಿಫ್ ಬುರಾನವಾಲೆ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.