ಬುಧವಾರ, ಜನವರಿ 22, 2020
16 °C

ಜೈನ ಮುನಿ ವಿಜಯ್‌ಜಿ ಮಹಾರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಗಲ್: ಸಮೀಪದ ವಡನ್‌ಬೈಲಿನ ಪದ್ಮಾವತಿ ಅಮ್ಮನವರ ದೇವಾಲಯದಲ್ಲಿ ಈಚಿನ ವರ್ಷಗಳಲ್ಲಿ ಉತ್ತರ ಭಾರತ ಮೂಲದಿಂದ ಬಂದು ನೆಲೆಸಿದ್ದ ಶ್ವೇತಾಂಬರ ಜೈನ ಮುನಿ ಶ್ರೀ ಮತಿಸಾರ ವಿಜಯ್‌ಜಿ ಮಹಾರಾಜ್ ಹೃದಯಾ ಘಾತದಿಂದ ಮಂಗಳವಾರ ಬೆಳಗಿನ ಜಾವ ನಿಧನರಾದರು.ಪೂಜ್ಯರು ತಮ್ಮ ಅಣ್ಣನೊಂದಿಗೆ ವಡನ್‌ಬೈಲು ಜೈನ ಕ್ಷೇತ್ರಕ್ಕೆ ಬಂದು ನೆಲೆಸಿದ್ದು, 2008 ರಲ್ಲಿ ಮುನಿಗಳಾಗಿದ್ದ ಅವರ ಸೋದರ ಸಹಾ ಇದೇ ಕ್ಷೇತ್ರದಲ್ಲಿ ಹ್ರದಯಾಘಾತದಿಂದ ನಿಧನರಾಗಿದ್ದರು.ಜನವರಿ 1 ರಂದು ವಡನ್‌ಬೈಲು ಜೈನ ಕ್ಷೇತ್ರದಲ್ಲಿ ನಡೆದ ಪಿಂಚ ಪರಿವರ್ತನಾ ಕಾರ್ಯಕ್ರಮದಲ್ಲಿ ವಿಶೇಷವಾದ ಪ್ರವಚನವನ್ನು ಮಾಡಿದ್ದ ವಿಜಯ್‌ಜಿ, ತಾವು ಅನೇಕ ಧರ್ಮ ಕ್ಷೇತ್ರಗಳನ್ನು ಸಂದರ್ಶಿಸಿದ್ದರೂ, ತಮ್ಮ ಕೊನೆಗಾಲದಲ್ಲಿ ತಾವು ವಡನ್‌ಬೈಲಿನಲ್ಲಿಯೇ ಮಣ್ಣಾಗುವುದಾಗಿ ನುಡಿದಿದ್ದನ್ನು ಸ್ಮರಿಸಬಹುದು.ಬುಧವಾರ ಜೈನ ಧರ್ಮದ ವಿಧಿವಿಧಾನಗಳೊಂದಿಗೆ ಅಂತಿಮಕ್ರಿಯೆ ನೆರವೇರಿಸಲಾಗುವುದು ಎಂದು ಜೈನ ಸಮಾಜ ಮೂಲಗಳು ತಿಳಿಸಿದೆ.

ಪ್ರತಿಕ್ರಿಯಿಸಿ (+)