ಗುರುವಾರ , ಮೇ 19, 2022
20 °C

ಜೈಲಲ್ಲಿ ಮಾನಸಿಕವಾಗಿ ಕುಗ್ಗಿರುವ ಕಸಾಬ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಐಎಎನ್‌ಎಸ್): ಬಂಧಿತ ಉಗ್ರ ಅಜ್ಮಲ್ ಅಮೀರ್ ಕಸಾಬ್ ಈಗ ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ ಎಂದು ಆತನ ವಕೀಲರು ತಿಳಿಸಿದ್ದಾರೆ.ಆತನ ಪರ ವಕೀಲ ಫರ್ಹಾನಾ ಷಾ ಶನಿವಾರ ಕಸಾಬ್‌ನನ್ನು ಇಲ್ಲಿನ ಆರ್ಥರ್ ಜೈಲಿನಲ್ಲಿ ಭೇಟಿ ಮಾಡಿದ್ದರು. ‘ಕೋರ್ಟ್ ವಿಚಾರಣೆ ನಿಮಿತ್ತ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಳ್ಳಲು ಅವನಿಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ಆತ ಕುಗ್ಗಿಹೋಗಿರುವುದನ್ನು ಗಮನಿಸಿದೆ’ ಎಂದು ಅವರು   ಹೇಳಿದ್ದಾರೆ.‘ನಾನು ಅವನ್ನು ಭೇಟಿಯಾದ ಸಂದರ್ಭದಲ್ಲಿ ತೀರಾ ದುರ್ಬಲನಂತೆ ಕಂಡು ಬಂದ. ಅವನಲ್ಲಿನ ಮೊದಲಿನ ಮನೋಭಾವ ಈಗ ಇಲ್ಲವಾಗಿತ್ತು. ಯಾವಾಗಲಾದರೊಮ್ಮೆ ಮಾತನಾಡುತ್ತಿದ್ದ ಎಂದು ಅವರು ಭಾನುವಾರ ತಿಳಿಸಿದ್ದಾರೆ.‘ಅಂದು ಅವನು ನನಗೆ ಸುದ್ದಿಪತ್ರಿಕೆ ನೀಡುವಂತೆ ಕೇಳಿದ. ಆದರೆ ನಾನು ಯಾವುದೇ ಸುದ್ದಿಪತ್ರಿಕೆಯನ್ನು ನನ್ನೊಡನೆ ಒಯ್ದಿರಲಿಲ್ಲ. ಸೋಮವಾರ ಕೋರ್ಟ್ ನಿನ್ನ ಮರಣದಂಡನೆ ದೃಢೀಕರಣದ ಬಗ್ಗೆ ತೀರ್ಪು ನೀಡಲಿದೆ. ವಿಡಿಯೊ ಕ್ಯಾಮೆರಾ ಮುಂದೆ ನೀನು ಶಾಂತವಾಗಿ ವರ್ತಿಸಬೇಕು ಎಂದು ನಾನವನಿಗೆ ಸೂಚಿಸಿದೆ. ಈ ಮಾತುಗಳನ್ನು ಅವನು ಶಾಂತವಾಗಿ ಆಲಿಸಿದ’ ಎಂದು ಷಾ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.