ಮಂಗಳೂರು:  ಎಂಆರ್ಪಿಎಲ್ನ ಮೂ ರನೇ ಹಂತದ ಕೋಕ್ ಘಟಕದಿಂದ ದೊಡ್ಡ ಪ್ರಮಾಣದ ಮಾಲಿನ್ಯಯುಕ್ತ ಅಶುದ್ಧ ನೀರು ಘಟಕದ ಆವರಣ ಗೋಡೆ ದಾಟಿ ಹೊರಹರಿದಿದ್ದು ಶುಕ್ರ ವಾರ ಸುತ್ತ ಮುತ್ತಲಿನ ಪರಿಸರದ ನಿವಾಸಿಗಳು ಆತಂಕಗೊಂಡಿದ್ದಾರೆ.

ಮಾಲಿನ್ಯಯುಕ್ತ ಕಪ್ಪು ನೀರು ಊರಿ ನಲ್ಲಿ ಮಳೆನೀರು ಹರಿಯುವ ತೋಡು ಗಳ ಮೂಲಕ ಹಳ್ಳ, ಕೆರೆಗಳಿಗೆ ಸೇರಿದೆ. ಕೆಲವು ಕಡೆ ಅಂತರ್ಜಲದ ಮೂಲಕ ಬಾವಿ ನೀರು ಕಲುಷಿತಗೊಂಡಿದೆ. ಶುಕ್ರ ವಾರ ಬೆಳಿಗ್ಗೆ ನಾಗರಿಕ ಹೋರಾಟ ಸಮಿತಿ ಸದಸ್ಯರ ಗಮನಕ್ಕೆ ಈ ಸೋರಿಕೆ ಕಂಡು ಬಂದಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದರು.

ಸ್ಥಳಕ್ಕೆ ಮಾಲಿನ್ಯ ನಿಯಂತ್ರಣ ಮಂ ಡಳಿ ಅಧಿಕಾರಿ ರಾಜಶೇಖರ್ ಪುರಾಣಿಕ್ ಭೇಟಿ ನೀಡಿ ಪರಿಶೀಲಿಸಿದರು. ಎಂಆರ್ ಪಿಎಲ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಮಲಿನ ನೀರು ಹರಿದು ಗ್ರಾಮಸ್ಥರಿಗೆ ಆದ ತೊಂದರೆಯ ಬಗ್ಗೆ ವಿಚಾರಿಸಿದರು. ಅಲ್ಲದೆ ಇಂತಹ ಪರಿಸ್ಥಿತಿ ಮರುಕಳಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಡಿವೈ ಎಫ್ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿ ಪಳ್ಳ, ತಾಲ್ಲೂಕು ಪಂಚಾಯಿತಿ ಸದಸ್ಯ ಬಿ. ಎಸ್. ಬಶೀರ್, ಪಂಚಾಯಿತಿ ಉಪಾಧ್ಯಕ್ಷ ಸಂಶುದ್ದೀನ್, ಪಂಚಾಯಿತಿ ಸದಸ್ಯರಾದ ಅಬೂಬಕ್ಕರ್ ಬಾವ, ಮೊಯ್ದಿನ್ ಶರೀಫ್ ಸಹಿತ ಹೋರಾಟ ಸಮಿತಿ ಉಪಸ್ಥಿತರಿದ್ದರು.

ಕೋಕ್ ಸಲ್ಫರ್ ಘಟಕದ ವಿರುದ್ಧ ನಿರಂತರ ಹೋರಾಟ ನಡೆಸಿದ್ದ ಜೋ ಕಟ್ಟೆ ನಾಗರಿಕರು ಮಲಿನ ನೀರನ್ನು ಕಂಡು ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಸ್ಯೆ ಇತ್ಯರ್ಥಗೊಳಿಸುವುದಾಗಿ ಸರ್ಕಾ ರ ಭರವಸೆ ನೀಡಿ ಆದೇಶ ಜಾರಿ ಮಾಡಿದ್ದರೂ ಜನಜೀವನ ನೆಮ್ಮದಿ ಯಿಂದ ನಡೆಯುತ್ತಿಲ್ಲ.

ಎಂಆರ್ಪಿಎಲ್ ಮತ್ತೆ ನಾಲ್ಕನೇ ಹಂತದ ವಿಸ್ತರಣೆ ನಡೆಸಲು ಸಿದ್ಧತೆ ನಡೆಸಿದ್ದು, ಮುಂದಿನ ಜೀವನ ಇನ್ನಷ್ಟು ದುರ್ಬರವಾಗಬಹುದು ಎಂಬ ಆತಂಕ ಜನರಲ್ಲಿ ಮೂಡುವಂತೆ ಮಾಡಿದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಮಾಲಿನ್ಯ ಯುಕ್ತ ನೀರನ್ನು ಬೇಜವಾ ಬ್ದಾರಿತನ ದಿಂದ ಹೊರಬಿಟ್ಟಿರುವ ಎಂ ಆರ್ಪಿಎಲ್ ಕಂಪೆನಿ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಜಿಲ್ಲಾಧಿಕಾರಿ ಅವರನ್ನು ಆಗ್ರಹಿಸಿದ್ದಾರೆ.

ಸರ್ಕಾರಿ ಆದೇಶದಂತೆ ತೆಗೆದುಕೊಂ ಡಿರುವ ಪರಿಹಾರ ಕ್ರಮಗಳನ್ನು ತಕ್ಷ ಣವೇ ಜಾರಿಗೊಳಿಸಬೇಕು. ತಪ್ಪಿದಲ್ಲಿ ಮತ್ತೊಂದು ಸುತ್ತಿನ ಹೋರಾಟ ಕೈಗೆತ್ತಿ ಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.