ಬೀದರ್: ‘ಬೀದರ್ ಉತ್ಸವ’ದ ಅಂಗವಾಗಿ ಆಯೋಜಿಸಲಾಗಿರುವ ಉತ್ಸವ ಜ್ಯೋತಿ ಯಾತ್ರೆಗೆ ಜಿಲ್ಲಾಧಿಕಾರಿ ಸುೀರ್ ಶುಕ್ಲಾ ಅವರು ಭಾನುವಾರ ಚಾಲನೆ ನೀಡಿದರು.ನಗರದ ಬರೀದ್ಶಾ ಉದ್ಯಾನವನದಲ್ಲಿ ಬೆಳಿಗ್ಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜ್ಯೋತಿ ಯಾತ್ರೆಗೆ ಚಾಲನೆ ನೀಡಲಾಯಿತು. ಬರೀದ್ಶಾ ಉದ್ಯಾನವನದಿಂದ ಆರಂಭವಾಗಿ ನಗರದ ಮೆಡಿಕಲ್ ಕಾಲೇಜು, ಅಂಬೇಡ್ಕರ್ ವೃತ್ತ, ಚಿದ್ರಿ, ಗುಂಪಾ, ಬೊಮ್ಮಗೊಂಡೇಶ್ವರ ವೃತ್ತ, ನಯಾಕಮಾನ್, ಚೌಬಾರ, ಬೀದರ್ ಕೋಟೆಯಿಂದ ಮುಂದೆ ಹೋಬಳಿಗಳಿಗೆ ತೆರಳಿತು.

ಜಯಕುಮಾರ್ ಸೋನಾರೆ ನೇತೃತ್ವದ ಕಲಾ ತಂಡ ಜ್ಯೋತಿಯೊಂದಿಗೆ ಹಾಡುಗಳನ್ನು ಹಾಡುತ್ತಾ ಜಿಲ್ಲೆಯ ಜನತೆಯನ್ನು ಬೀದರ್ ಉತ್ಸವಕ್ಕೆ ಆಹ್ವಾನಿಸಲಿದೆ. ಸುಂದರವಾಗಿ ಅಲಂಕರಿಸಲಾಗಿರುವ ವಾಹನದಲ್ಲಿ ಉತ್ಸವದ ಜ್ಯೋತಿ ಜಿಲ್ಲೆಯ ಎಲ್ಲಾ 30 ಹೋಬಳಿಗಳಿಗೆ ತೆರಳಲಿದೆ.

ಇದೇ ಮೊದಲ ಬಾರಿಗೆ ಬೀದರ್ ಉತ್ಸವಕ್ಕೆ ಜಿಲ್ಲೆಯ ಜನತೆ ಶುಭ ಕೋರುವ ಜ್ಯೋತಿ ಮೆರವಣಿಗೆ ಆರಂಭಿಸಲಾಗಿದೆ.ಜ್ಯೋತಿಯಾತ್ರೆ ಫೆ.14ರಂದು ಹುಮನಾಬಾದ್, ಫೆ.15 ರಂದು ಬಸವಕಲ್ಯಾಣ, ಫೆ.16ರಂದು ಭಾಲ್ಕಿ ಹಾಗೂ ಫೆ.17ರಂದು ಔರಾದ್ಗೆ ತೆರಳಲಿದೆ. ಫೆ. 18ರಂದು ಬೀದರ್ ಉತ್ಸವದ ಉದ್ಘಾಟನಾ ಮೆರವಣಿಗೆಯಲ್ಲಿ ಜ್ಯೋತಿ ಯಾತ್ರೆ ಭಾಗಿಯಾಗಲಿದೆ.

“ಬೀದರ್ ಉತ್ಸವ ನಮ್ಮೆಲ್ಲರ ಉತ್ಸವ ಎಂಬ ಏಕತೆಯ ಭಾವನೆಯನ್ನು ಜನರಲ್ಲಿ ಜ್ಯೋತಿ ಯಾತ್ರೆ ಉಂಟು ಮಾಡಲಿದೆ. ಉತ್ಸವದಲ್ಲಿ ಉತ್ಸಾಹದಿಂದ ಭಾಗವಹಿಸಲು ಜ್ಯೋತಿಯಾತ್ರೆ ಎಲ್ಲರಿಗೆ ಪ್ರೇರಣೆ ನೀಡಲಿದೆ” ಎಂದು ಜಿಲ್ಲಾಧಿಕಾರಿ ಸುೀರ್ ಶುಕ್ಲಾ ಅವರು ತಿಳಿಸಿದರು.

ಜಿಲ್ಲಾ ಪಂಚಾುತಿ ಅಧ್ಯಕ್ಷ ಕುಶಾಲರಾವ್, ಸದಸ್ಯ ಶೈಲೇಂದ್ರ ಬೆಲ್ದಾಳೆ, ಸಹಾಯಕ ಆಯುಕ್ತರಾದ ಖುಷ್ಬೂ ಗೋಯಲ್, ಪ್ರಮುಖರಾದ ಬಲಬೀರ ಸಿಂಗ್, ಬಾಬುವಾಲಿ ಮತ್ತಿತರ ಗಣ್ಯರು ಜ್ಯೋತಿ ಯಾತ್ರೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.