ಬೆಳಗಾವಿ: ಮಾನವ ರಹಿತ ರೈಲ್ವೆ ಕ್ರಾಸಿಂಗ್ ಬಳಿ ರೈಲಿಗೆ ಟಂಟಂ ಡಿಕ್ಕಿ ಹೊಡೆದುದರಿಂದ ಒಬ್ಬರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ತಾಲ್ಲೂಕಿನ ತುಮ್ಮರಗುದ್ದಿ ಗ್ರಾಮದ ಬಳಿ ಶುಕ್ರವಾರ ಸಂಭವಿಸಿದೆ.

ಟಂಟಂನಲ್ಲಿದ್ದ ಬೈಲಹೊಂಗಲ ತಾಲ್ಲೂಕಿನ ಉಗರಖೋಡದ ರಾಮಲಿಂಗ (30) ಮೃತಪಟ್ಟಿದ್ದಾರೆ. ಗಾಯಾಳುಗನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಿರಜ್ಗೆ ತೆರಳುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದ ರಭಸಕ್ಕೆ ಟಂಟಂ ಸುಮಾರು 200 ಮೀಟರ್ ದೂರಕ್ಕೆ ಹಾರಿಬಿತ್ತು.

ಅಪಘಾತದ ಬಳಿಕ ರೈಲಿನ ಎಂಜಿನ್ನಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಆತಂಕಗೊಂಡ ಪ್ರಯಾಣಿಕರು ಇಳಿದು ದಿಕ್ಕಾಪಾಲಾಗಿ ಓಡಿದರು. ತಾಂತ್ರಿಕ ದೋಷ ಇಲ್ಲ ಎಂದು ರೈಲ್ವೆ ಸಿಬ್ಬಂದಿ ಖಚಿತಪಡಿಸಿದ ನಂತರ ಪ್ರಯಾಣಿಕರು ರೈಲು ಹತ್ತಿದರು. ಏಳು ನಿಮಿಷ ತಡವಾಗಿ ರೈಲು ಅಲ್ಲಿಂದ ಹೊರಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.