ಟಾಂ ಟಾಂ... ಮತ್ತೊಂದು ಕತ್ರೀನಾ ಐಟಂ!

ಶುಕ್ರವಾರ, ಮೇ 24, 2019
24 °C

ಟಾಂ ಟಾಂ... ಮತ್ತೊಂದು ಕತ್ರೀನಾ ಐಟಂ!

Published:
Updated:

ಮತ್ತೊಂದು ಐಟಂ ಹಾಡಿನಲ್ಲಿ ನರ್ತಿಸಲು ಕತ್ರೀನಾ ಕೈಫ್ ಹೂಂ ಎಂದಿದ್ದಾಳೆ. ಅದು ಹೃತಿಕ್ ರೋಶನ್ ನಾಯಕ ಮತ್ತು ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿರುವ `ಅಗ್ನಿಪಥ್~ ಚಿತ್ರದಲ್ಲಿ.`ತೀಸ್ ಮಾರ್ ಖಾನ್~ ಚಿತ್ರದ `ಶೀಲಾ ಕೀ ಜವಾನಿ~ ಹಾಡಿನಲ್ಲಿ ಕುಣಿದ ನಂತರ ಐಟಂ ಹಾಡುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕತ್ರೀನಾ, ಇತ್ತೀಚೆಗೆ `ಬಾಡಿಗಾರ್ಡ್~ ಚಿತ್ರದ ಟೈಟಲ್ ಟ್ರ್ಯಾಕ್‌ನಲ್ಲಿ ಸಲ್ಮಾನ್ ಸಂಗಡ ನರ್ತಿಸಿದ್ದಳು.ಅಲ್ಲದೇ ತಮಿಳಿನಲ್ಲಿ ತಯಾರಾಗುತ್ತಿರುವ `ದಬಂಗ್~ ಚಿತ್ರದ ರೀಮೇಕ್‌ನಲ್ಲೂ ಐಟಂ ಹಾಡಿನಲ್ಲಿ ಕುಣಿದು ಬಂದಳು. ಇದೀಗ ಸಂಜಯ್ ದತ್ ಜೊತೆ `ಅಗ್ನಿಪಥ್~ನಲ್ಲಿ ಕುಣಿಯಲಿದ್ದಾಳೆ. ಅತುಲ್ ಗೊಗಾವಲೆ ರಾಗ ಸಂಯೋಜಿಸಿರುವ ಈ ಹಾಡಿನಲ್ಲಿ, ಖಳನಾಗಿ ನಟಿಸುತ್ತಿರುವ ಸಂಜಯ್ ಜೊತೆ ಕತ್ರೀನಾ ಹೆಜ್ಜೆ ಹಾಕಲಿದ್ದಾಳೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry