ಸೋಮವಾರ, ಜೂನ್ 21, 2021
27 °C

ಟಿ.ಜಿ.ಹಳ್ಳಿಗೆ ಹೇಮಾವತಿ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಿ.ಜಿ.ಹಳ್ಳಿಗೆ ಹೇಮಾವತಿ ನೀರು

ಪೀಣ್ಯ ದಾಸರಹಳ್ಳಿ: ಹೇಮಾವತಿ ಜಲಾಶಯದ ನೀರನ್ನು ತಿಪ್ಪಗೊಂಡನಹಳ್ಳಿ ಕೆರೆಗೆ ತರಲು ಚಿಂತಿಸಲಾಗಿದ್ದು, ಪೂರ್ವಭಾವಿಯಾಗಿ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ ಎಂದು ಶಾಸಕ ಎಸ್.ಮುನಿರಾಜು ತಿಳಿಸಿದರು.ದಾಸರಹಳ್ಳಿ ವಲಯದ ರಾಜಗೋಪಾಲನಗರ ವಾರ್ಡ್‌ನ ಅನ್ನಪೂರ್ಣೇಶ್ವರಿನಗರದ ಪಿಳ್ಳಪ್ಪನ ಕಟ್ಟೆ ಸಮೀಪ 55 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಕಸ ವಿಂಗಡಣೆ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದರಿಂದ ದಾಸರಹಳ್ಳಿ, ಹೆಗ್ಗನಹಳ್ಳಿ, ಸುಂಕದಕಟ್ಟೆ, ಮಾಗಡಿ ರಸ್ತೆ ಮತ್ತು ಸುತ್ತಮುತ್ತಲಿನ ಅನೇಕ ಬಡಾವಣೆಗಳ ಜನರಿಗೆ ಅನುಕೂಲವಾಗಲಿದೆ. ಕಾವೇರಿ ಯೋಜನೆಯ 4ನೇ ಹಂತದ 2ನೇ ಘಟ್ಟದ ಕಾಮಗಾರಿ ಮುಗಿದು ಮಾರ್ಚ್‌ನಲ್ಲಿ ಜನತೆಗೆ ನೀರು ಪೂರೈಸಬೇಕಿತ್ತು.

 

ಆದರೆ, ಕನಕಪುರ ಬಳಿ ಕಾಮಗಾರಿಗೆ ಬಂಡೆ ಅಡ್ಡಿಯಾಗಿರುವುದರಿಂದ ಎರಡು-ಮೂರು ತಿಂಗಳು ವಿಳಂಬವಾಗಲಿದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಲಿದ್ದು, ನಾಗರಿಕರು ಸಹಕರಿಸಬೇಕು ಎಂದು ಕೋರಿದರು.ಪಾಲಿಕೆ ಸದಸ್ಯರಾದ ಎಚ್.ಎನ್.ಗಂಗಾಧರ್, ಚಂದ್ರಶೇಖರ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.