ಮಂಗಳವಾರ, ಮೇ 11, 2021
21 °C

ಟಿಟಿ: ಅಮೋಘ, ಅಕ್ಷತಾಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಿಪ್ಪಾಣಿಯ ಕೆಎಲ್‌ಇ ಶಾಲೆಯ ಅಮೋಘ ಅಥಣಿ ಹಾಗೂ ಸೇಂಟ್ ಝೇವಿಯರ್ ಶಾಲೆಯ ಅಕ್ಷತಾ ಮಾಲಶೇಟ್ ಅವರು ನಗರದ ಟಿಳಕವಾಡಿ ಕ್ಲಬ್‌ನಲ್ಲಿ ಬೆಳಗಾವಿ ಜಿಲ್ಲಾ ಟೇಬಲ್ ಟೆನಿಸ್ ಸಂಘವು ಭಾನುವಾರ ಹಮ್ಮಿಕೊಂಡಿದ್ದ ಮುಕ್ತ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಜ್ಯೂನಿಯರ್ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.ಜ್ಯೂನಿಯರ್ ಬಾಲಕರ ವಿಭಾಗದ ಫೈನಲ್‌ನಲ್ಲಿ ಅಮೋಘ ಅಥಣಿ ಅವರು ಕೇಂದ್ರೀಯ ವಿದ್ಯಾಲಯದ ದಿವಿತ್ ಯಕ್ಕುಂಡಿ ಅವರನ್ನು 11-3, 11-4, 12-10, 10-12, 11-9ರಿಂದ ಸೋಲಿಸಿ ಪ್ರಶಸ್ತಿ ಜಯಿಸಿದರು.ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಮೋಘ ಅಥಣಿ ಅವರು ಸೇಂಟ್ ಪೌಲ್ ಶಾಲೆಯ ದಯಾನಂದ ಹುಲಮನಿ ಅವರನ್ನು 11-8, 9-11, 11-4, 6-11, 11-9, 11-9ರಿಂಧ ಮಣಿಸಿದರೆ, ದಿವಿತ್ ಯಕ್ಕುಂಡಿ ಅವರು ನಿಪ್ಪಾಣಿಯ ಕೆಎಲ್‌ಇ ಶಾಲೆಯ ದ್ರುವ ಕುರಬೆಟ್ಟಿ ಅವರನ್ನು 11-2, 9-11, 9-11, 11-9, 12-10, 11-5ರಿಂದ ಸೋಲಿಸಿದರು.ಜ್ಯೂನಿಯರ್ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಅಕ್ಷತಾ ಮಾಲಶೆಟ್ಟಿ ಅವರು ಕೇಂದ್ರೀಯ ವಿದ್ಯಾಲಯದ ಮೃನಾಲಿನಿ ಬಿರಾಂಜೆ ಅವರ ವಿರುದ್ಧ 9-11, 12-10, 11-5, 11-3, 11-8ರಿಂದ ಗೆಲುವು ಸಾಧಿಸಿದರು.ಸೆಮಿಫೈನಲ್ ಪಂದ್ಯದಲ್ಲಿ ಅಕ್ಷತಾ ಮಾಲಶೆಟ್ಟಿ ಅವರು ಲವ್ ಡೇಲ್ ಶಾಲೆಯ ನಿವೇದಿತಾ ಟಂಕಸಾಲಿ ಅವರನ್ನು 11-8, 11-7, 11-5, 11-4ರಿಂದಲ್ಲೂ; ಮೃನಾಲಿ ಅವರು ಕೆಎಲ್‌ಇ ಇಂಟರ್‌ನ್ಯಾಶನಲ್ ಶಾಲೆಯ ಸ್ಫೂರ್ತಿ ಕೋಟ್ಯನ್ ಅವರನ್ನು 11-5, 8-11, 11-8, 11-4, 11-6ರಿಂದ ಸೋಲಿಸಿದರು.ಸಬ್ ಜ್ಯೂನಿಯರ್ ಬಾಲಕರ ವಿಭಾಗದ ಫೈನಲ್‌ನಲ್ಲಿ ಅಮೋಘ ಅಥಣಿ ಅವರು ದಿವಿತ್ ಯಕ್ಕುಂಡಿ ವಿರುದ್ಧ 11-6, 11-9, 12-10ರಿಂದ ಗೆಲುವು ಸಾಧಿಸಿದರು.ಸೆಮಿಫೈನಲ್‌ನಲ್ಲಿ ಅಮೋಘ ಅವರು ಸೇಂಟ್ ಮೇರಿ ಶಾಲೆಯ ಮನೋಹರ ಸಾಖರೆ ಅವರನ್ನು 11-1, 11-9, 11-5ರಲ್ಲೂ; ದಿವಿತ್ ಅವರು ದ್ರುವ ಕುರಬೆಟ್ಟಿ ಅವರನ್ನು 11-5, 14-12, 7-11, 11-5ರಿಂದ ಸೋಲಿಸಿದರು.ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಸ್ಫೂರ್ತಿ ಕೋಟ್ಯನ್ ಅವರು ಸೇಂಟ್ ಜೋಸೆಫ್ ಶಾಲೆಯ ಕ್ಯಾಸೆಂಡ್ರಾ ಲೋಬೊ ವಿರುದ್ಧ 11-5, 11-9, 11-4ರಿಂದ ವಿಜಯಿಯಾದರು.ಸೆಮಿಫೈನಲ್‌ನಲ್ಲಿ ಸ್ಫೂರ್ತಿ ಕೋಟ್ಯನ್ ಅವರು ಕೆಎಲ್‌ಇ ಇಂಟರ್‌ನ್ಯಾಶನಲ್ ಶಾಲೆಯ ರಶ್ಮಿ ವಿಭೂತಿ ಅವರನ್ನು 11-6, 12-10, 14-12ರಲ್ಲೂ; ಕ್ಯಾಸೆಂಡ್ರಾ ಲೋಬೊ ಅವರು ಕೇಂದ್ರೀಯ ವಿದ್ಯಾಲಯದ ಮೇಘನಾ ಬಿರಾಂಜೆ ಅವರನ್ನು 11-6, 7-11, 11-7, 11-8ರಿಂದ ಸೋಲಿಸಿದರು.ಕೆಡೆಟ್ ಬಾಲಕರ ವಿಭಾಗದ ಫೈನಲ್‌ನಲ್ಲಿ ಸೇಂಟ್ ಮೇರಿ ಶಾಲೆಯ ರಾಹುಲ್ ಹುಲಮನಿ ಅವರು ಹೆರ್ವಾಡ್ಕರ್ ಪ್ರೌಢಶಾಲೆಯ ಚಿನ್ಮಯ ಸಾಥೆ ಅವರನ್ನು 8-11, 11-7, 9-11, 11-5, 11-4ರಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡರು.ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಸೇಂಟ್ ಜೋಸೆಫ್‌ನ ಭಕ್ತಿ ಮನ್ನೂರಕರ ಅವರು ಸೇಂಟ್ ಝೇವಿಯರ್ ಶಾಲೆಯ ದಿವ್ಯಾ ಭಾತಕಾಂಡೆ ಅವರ ವಿರುದ್ಧ 11-7, 11-9, 11-8ರಿಂದ ಗೆಲುವು ಸಾಧಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.