ಬೆಂಗಳೂರು: ರಾಜ್ಯದ ಹಣಕಾಸು ವ್ಯವಹಾರ ಇನ್ನು ಮುಂದೆ ಮತ್ತಷ್ಟು ಆನ್ಲೈನ್ ಆಗಲಿದೆ. ವಿವಿಧ ಇಲಾಖೆ, ವ್ಯಕ್ತಿಗಳಿಗೆ ಹಣ ಬಿಡುಗಡೆ, ಹಣ ಸ್ವೀಕಾರ, ಲೆಕ್ಕ ಪರಿಶೋಧನೆ... ಹೀಗೆ ಎಲ್ಲವೂ ಆನ್ಲೈನ್ನಲ್ಲೇ ಮಾಡುವ `ಖಜಾನೆ-2~ರ ಜಾರಿಗೆ ರಾಜ್ಯ ಖಜಾನೆ ಇಲಾಖೆಯು ಸಾಫ್ಟ್ವೇರ್ ಸಂಸ್ಥೆ ಟಿ.ಸಿ.ಎಸ್ ಜತೆ ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಿತು.

ಖಜಾನೆ ನಿರ್ದೇಶಕಿ ಎನ್.ಟಿ.ಆಬ್ರೂ ಮತ್ತು ಟಿಸಿಎಸ್ ಉಪಾಧ್ಯಕ್ಷ ತನ್ಮಯ ಚಕ್ರವರ್ತಿ ಅವರು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸೇರಿದಂತೆ ಇತರರು ಹಾಜರಿದ್ದರು.

2001ರಿಂದಲೂ `ಖಜಾನೆ-1~ ಜಾರಿಯಲ್ಲಿದೆ. ಅದರ ನಂತರದ ಸಾಫ್ಟ್ವೇರ್ `ಖಜಾನೆ-2~. ಇದರಲ್ಲಿ ಎಲ್ಲವೂ ಆನ್ಲೈನ್ನಲ್ಲೇ ನಡೆಯುತ್ತದೆ. ಪ್ರತಿ ಸೆಕೆಂಡಿಗೂ ರಾಜ್ಯದ ಹಣಕಾಸಿನ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡುವ; ಹಣ ಬಿಡುಗಡೆ ಮತ್ತು ಸ್ವೀಕಾರ.. ಹೀಗೆ ಎಲ್ಲವೂ ಆನ್ಲೈನ್ನಲ್ಲಿ ಆಗಲಿದೆ ಎಂದು ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ವಿ.ನಾಗರಾಜನ್ ಸುದ್ದಿಗಾರರಿಗೆ ತಿಳಿಸಿದರು.

25 ಸಾವಿರ ಸರ್ಕಾರಿ ಕಚೇರಿಗಳನ್ನು ಸಂಪರ್ಕಿಸಲು ಈ ಸಾಫ್ಟ್ವೇರ್ ನೆರವಾಗಲಿದೆ. ಆನ್ಲೈನ್ನಲ್ಲಿ ಹಣ ಬಳಕೆ ಬಗ್ಗೆಯೂ ಮಾಹಿತಿ ಸಿಗಲಿದೆ. ಲೆಕ್ಕ ಪರಿಶೋಧನೆ ಕೂಡ ಆಗುತ್ತದೆ ಎಂದರು.

ಈ ಸಾಫ್ಟ್ವೇರ್ ಅನ್ನು ಟಿಸಿಎಸ್ ಅಭಿವೃದ್ಧಿಪಡಿಸಿ ಆರು ತಿಂಗಳಲ್ಲಿ ಸರ್ಕಾರಕ್ಕೆ ನೀಡಲಿದೆ. ನಂತರ ಅದನ್ನು ಪ್ರಾಯೋಗಿಕವಾಗಿ ಕೆಲ ಖಜಾನೆಗಳಲ್ಲಿ ಪರೀಕ್ಷೆ ಮಾಡಲಾಗುವುದು. 2013ರ ಏಪ್ರಿಲ್ ವೇಳೆಗೆ ಈ ಯೋಜನೆ ಪೂರ್ಣವಾಗಿ ಅನುಷ್ಠಾನಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.

ಈ ಗಡುವಿಗೆ ಕಾಯದೆ, ಆದಷ್ಟು ಬೇಗ ಯೋಜನೆ ಜಾರಿಗೊಳಿಸುವಂತೆಯೂ ಸೂಚಿಸಿದರು.ಈ ಸಲುವಾಗಿ ರಾಜ್ಯ ಸರ್ಕಾರ ರೂ 80 ಕೋಟಿ ವೆಚ್ಚ ಮಾಡುತ್ತಿದೆ ಎಂದು ನಾಗರಾಜನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.