ಲಂಡನ್ (ಐಎಎನ್ಎಸ್): ಬ್ರಿಟನ್ನ ಆ್ಯಂಡಿ ಮರ್ರೆ ಇಲ್ಲಿ ನಡೆದ ಏಜೋನ್ ಕ್ಲಾಸಿಕ್ ಟೆನಿಸ್ ಚಾಂಪಿಯನ್ಷಿಪ್ನ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ಭಾನುವಾರ ನಡೆದ ಫೈನಲ್ನಲ್ಲಿ ವಿಶ್ವದ ಎರಡನೇ ರ್ಯಾಂಕ್ನ ಆಟಗಾರ ಮರ್ರೆ 5-7, 7-5, 6-3 ರಲ್ಲಿ ಕ್ರೊಯೇಷ್ಯದ ಮರಿನ್ ಸಿಲಿಕ್ ಅವರನ್ನು ಮಣಿಸಿದರು. ಈ ಗೆಲುವಿನ ಮೂಲಕ ಮರ್ರೆ ಮುಂಬರುವ ವಿಂಬಲ್ಡನ್ ಗ್ರ್ಯಾನ್ಸ್ಲಾಮ್ ಟೂರ್ನಿಗೆ ತಕ್ಕ ರೀತಿಯಲ್ಲಿ ಸಜ್ಜಾಗಿದ್ದಾರೆ.

ಫೆಡರರ್ಗೆ ಪ್ರಶಸ್ತಿ (ಬರ್ಲಿನ್ ವರದಿ): ರೋಜರ್ ಫೆಡರರ್ ಬರ್ಲಿನ್ನಲ್ಲಿ ಭಾನುವಾರ ಕೊನೆಗೊಂಡ ಎಟಿಪಿ ಹಾಲ್ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆದರು.

ಸ್ವಿಟ್ಜರ್ಲೆಂಡ್ನ ಆಟಗಾರ ಫೈನಲ್ನಲ್ಲಿ 6-7, 6-3, 6-4 ರಲ್ಲಿ ರಷ್ಯಾದ ಮಿಖಾಯಿಲ್ ಯೂಜ್ನಿ ವಿರುದ್ಧ ಗೆದ್ದರು. ಫೆಡರರ್ಗೆ ವೃತ್ತಿಜೀವನದಲ್ಲಿ ದೊರೆತ 77ನೇ ಪ್ರಶಸ್ತಿ ಇದು. ಈ ಮೂಲಕ ಜಾನ್ ಮೆಕೆನ್ರೊ ದಾಖಲೆಯನ್ನು ಸರಿಗಟ್ಟಿದರು. ಇವಾನ್ ಲೆಂಡ್ಲ್ (94) ಮತ್ತು ಜಿಮ್ಮಿ ಕಾನರ್ (109) ಮಾತ್ರ ಫೆಡರರ್ಗಿಂತ ಹೆಚ್ಚು ಪ್ರಶಸ್ತಿ ಜಯಿಸಿದ್ದಾರೆ. ಪ್ರಸಕ್ತ ಋತುವಿನಲ್ಲಿ ಫೆಡರರ್ ಜಯಸಿದ ಮೊದಲ ಪ್ರಶಸ್ತಿ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.