ಸೋಮವಾರ, ಜನವರಿ 20, 2020
18 °C

ಟೆನಿಸ್: ನಿಕ್ಷೇಪ್‌ಗೆ ಪ್ರಶಸ್ತಿ ಡಬಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿ.ಆರ್. ನಿಕ್ಷೇಪ್ ಇಲ್ಲಿ ನಡೆದ 14 ವರ್ಷ ವಯಸ್ಸಿನೊಳಗಿನವರ ಏಷ್ಯನ್ ಜೂನಿಯರ್ ಟೆನಿಸ್ ಟೂರ್ನಿಯ ಬಾಲಕರ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಪ್ರಶಸ್ತಿ `ಡಬಲ್~ ಗೌರವ ಪಡೆದುಕೊಂಡರು.ಜೈನ್ ಇಂಟರ್‌ನ್ಯಾಷನಲ್ ರೆಸಿಡೆನ್ಶಿಯಲ್ ಶಾಲೆಯ ಕೋರ್ಟ್‌ನಲ್ಲಿ ಶುಕ್ರವಾರ ನಡೆದ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ನಿಕ್ಷೇಪ್ 6-4, 6-2 ರಲ್ಲಿ ನಾಲ್ಕನೇ ಶ್ರೇಯಾಂಕದ ವಿಜಯ್ ಮೊಹಂತಿ ಅವರನ್ನು ಮಣಿಸಿದರು.ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ನಿಕ್ಷೇಪ್- ಅಲೆಕ್ಸ್ ಸೋಲಂಕಿ ಜೋಡಿ 7-6, 3-6, 10-5 ಸನಿಲ್ ಜಗತಿಯಾನಿ- ಪರೀಕ್ಷಿತ್ ಸೊಮಾನಿ ವಿರುದ್ಧ ಜಯ ಪಡೆಯಿತು.ಬಾಲಕಿಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಕರ್ಮಾನ್ ಕೌರ್ 6-4, 7-6 ರಲ್ಲಿ ಆರ್. ಅಭಿನಿಕಾ ಎದುರು ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಪ್ರತಿಕ್ರಿಯಿಸಿ (+)