ಟೇಬಲ್ ಟೆನಿಸ್ ಟೂರ್ನಿ: ದಕ್ಷ, ಅದಿತಿ ನಂದಿ ಚಾಂಪಿಯನ್
ಬೆಳಗಾವಿ: ಬೆಂಗಳೂರು ಬಿಎನ್ಎಂ ಕ್ಲಬ್ನ ದಕ್ಷ ತೇಲಾಂಗ್ ಹಾಗೂ ಅದಿತಿ ನಂದಿ ಇಲ್ಲಿಯ ಸಂಗಮ್ ಬೈಲೂರು ಟಿಟಿ ಅಕಾಡೆಮಿ ಆಶ್ರಯದಲ್ಲಿ ಶುಕ್ರವಾರ ಆರಂಭವಾದ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಬಾಲಕ-ಬಾಲಕಿಯರ ಕೆಡೆಟ್ ಪ್ರಶಸ್ತಿಯನ್ನು ಗೆದ್ದುಕೊಂಡರು.
ಬಾಲಕರ ವಿಭಾಗದ ಫೈನಲ್ನಲ್ಲಿ ದಕ್ಷ 11-5, 9-11, 11-5, 11-9ರಿಂದ ಓಂ ಟಿಟಿ ಕ್ಲಬ್ನ ಕೆ.ಎನ್. ಪ್ರೀತಮ್ ಅವರನ್ನು ಪರಾಭವಗೊಳಿಸಿದರು. ಸೆಮಿಫೈನಲ್ನಲ್ಲಿ ದಕ್ಷ 6-11, 11-9, 13-11, 11-8ರಿಂದ ಸಿಸಿಎಯ ಆರ್. ಕೃಷ್ಣ ಮೇಲೂ; ಪ್ರೀತಮ್ 11-6, 8-11, 11-6, 11-6ರಿಂದ ಹೊರೈಜಾನ್ ಕ್ಲಬ್ನ ರ್ಯಾಟಿನ್ ಕೆ. ವಿರುದ್ಧವೂ ಜಯ ಸಾಧಿಸಿದರು.
ಬಾಲಕಿಯರ ವಿಭಾಗದಲ್ಲಿ ಅದಿತಿ 11-6, 9-11, 11-8, 11-6ರಿಂದ ಓಂ ಟಿಟಿ ಕ್ಲಬ್ನ ಕಿರಣ ಸಂಜೀವ ಅವರ ವಿರುದ್ಧ ಜಯ ಸಾಧಿಸಿದರು. ಸೆಮಿಫೈನಲ್ನಲ್ಲಿ ಅದಿತಿ 7-11, 2-11, 11-9, 11-4, 13-11ರಿಂದ ಎಚ್ಟಿಟಿಎಯ ಋತು ರೋಹಿತ್ ಅವರನ್ನು; ಕಿರಣ 2-11, 11-8, 11-9, 11-8ರಿಂದ ಹೊರೈಜಾನ್ ಕ್ಲಬ್ನ ಆಯೇಷಾ ಸಿದ್ದಿಕಿ ಅವರನ್ನು ಸೋಲಿಸಿದರು.
ಮಿನಿ ಕೆಡೆಟ್ ಬಾಲಕರ ವಿಭಾಗದಲ್ಲಿ ಸಿಸಿಎಯ ಆರ್. ಕೃಷ್ಣ 11-2, 11-5, 11-6ರಿಂದ ಬಿಎನ್ಎಂನ ದಿವ್ಯಾಂಶು ಗುಪ್ತಾ ಅವರನ್ನು, ಬಾಲಕಿಯರ ವಿಭಾಗದಲ್ಲಿ ಆದಿತಿ ಜೋಶಿ 10-12, 11-7, 13-11, 4-11, 11-9ರಿಂದ ಓಂ ಟಿಟಿ ಕ್ಲಬ್ನ ಅನರ್ಘ್ಯಾ ಮಂಜುನಾಥ್ ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿ ಗೆದ್ದುಕೊಂಡರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.