ವೆಲಿಂಗ್ಟನ್ (ಎಎಫ್ಪಿ): ರಾಸ್ ಟೇಲರ್ (129) ಅವರ ಅಮೋಘ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡದವರು ಬುಧವಾರ ಇಲ್ಲಿ ಆರಂಭವಾದ ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಉತ್ತಮ ಮೊತ್ತ ಪೇರಿಸಿದ್ದಾರೆ.

ಬೇಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ ಆತಿಥೇಯರು 90 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 307 ರನ್ ಗಳಿಸಿದ್ದಾರೆ.

ಟಾಸ್ ಗೆದ್ದ ಪ್ರವಾಸಿ ವಿಂಡೀಸ್ ತಂಡದವರು ಕಿವೀಸ್ ಪಡೆಯನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿದರು. ಅದನ್ನು ಈ ತಂಡದ ಬೌಲರ್ ಗಳು ಸಮರ್ಥಿಸಿಕೊಂಡರು. 24 ರನ್ ಗಳಿಸುವಷ್ಟರಲ್ಲಿ ನ್ಯೂಜಿಲೆಂಡ್ನ ಆರಂಭಿಕ ಬ್ಯಾಟ್ಸ್ಮನ್ಗಳಾದ ಪೀಟರ್ ಫುಲ್ಟಾನ್ ಹಾಗೂ ಹಮೀಶ್ ರುದರ್ಫೋರ್ಡ್ ಅವರ ವಿಕೆಟ್ ಕಬಳಿಸಿದರು.

ಆದರೆ ಈ ಸಂದರ್ಭದಲ್ಲಿ ಜೊತೆಗೂಡಿದ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಎದುರಾಳಿ ಬೌಲರ್ಗಳನ್ನು ಕಾಡಿದರು. ಇವರಿಬ್ಬರು ಮೂರನೇ ವಿಕೆಟ್ಗೆ 88 ರನ್ ಸೇರಿಸಿದರು. 227 ಎಸೆತ ಎದುರಿಸಿದ ಟೇಲರ್ ಸತತ ಎರಡನೇ ಶತಕ ದಾಖಲಿಸಿದರು. ಅವರ ಈ ಇನಿಂಗ್ಸ್ನಲ್ಲಿ 15 ಬೌಂಡರಿಗಳಿದ್ದವು. ಅಷ್ಟು ಮಾತ್ರವಲ್ಲದೇ, ಟೆಸ್ಟ್ನಲ್ಲಿ ನಾಲ್ಕು ಸಾವಿರ ರನ್ಗಳ ಗಡಿ ದಾಟಿದರು. ಟೇಲರ್ ಮೊದಲ ಟೆಸ್ಟ್ನಲ್ಲಿ ದ್ವಿಶತಕ ಬಾರಿಸಿದ್ದರು.

ನಾಯಕ ಬ್ರೆಂಡನ್ ಮೆಕ್ಲಮ್ ಹಾಗೂ ಕೋರಿ ಆ್ಯಂಡರ್ಸನ್ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. ಆದರೆ ಕೊನೆಯ ಅವಧಿಯ ಆಟದಲ್ಲಿ ವಿಂಡೀಸ್ ಬೌಲರ್ಗಳು ಮೇಲುಗೈ ಸಾಧಿಸಿದರು. ಟಿನೊ ಬೆಸ್ಟ್ (66ಕ್ಕೆ2) ಪ್ರಭಾವಿಯಾಗಿದ್ದರು.

ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್: 90 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 307 (ಕೇನ್ ವಿಲಿಯಮ್ಸನ್ 45, ರಾಸ್ ಟೇಲರ್ 129, ಬ್ರೆಂಡನ್ ಮೆಕ್ಲಮ್ 37, ಕೋರಿ ಜೆ ಆ್ಯಂಡರ್ಸನ್ 38; ಟಿನೊ ಬೆಸ್ಟ್ 66ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.