ಬೆಂಗಳೂರು: `ಬಿಬಿಎಂಪಿಯು ಕೈಗಾರಿಕೋದ್ಯಮಿಗಳ ಮೇಲೆ ಹೇರಲು ಹೊರಟಿರುವ `ಟ್ರೇಡ್ ಲೈಸೆನ್ಸ್~ ವಿರೋಧಿಸಿ ಪ್ರತಿಭಟನೆ ನಡೆಸಲಾಗುವುದು~ ಎಂದು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆ (ಎಫ್ಕೆಸಿಸಿಐ) ಮಾಜಿ ಅಧ್ಯಕ್ಷ ಡಾ.ಫಿಲಿಪ್ ಲೂಯಿ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಬಿಬಿಎಂಪಿಯು ಕೈಗಾರಿಕೋದ್ಯಮಿಗಳ ಮೇಲೆ ವ್ಯಾಪಾರ ಪರವಾನಗಿಯನ್ನು ತೆಗೆದುಕೊಳ್ಳುವಂತೆ ಒತ್ತಡವನ್ನು ಹಾಕುತ್ತಿದೆ. ಪರವಾನಗಿ ತೆಗೆದುಕೊಳ್ಳದ ಪಕ್ಷದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತೇವೆ ಎಂದು ನೋಟಿಸ್ ಜಾರಿ ಮಾಡುತ್ತಿದ್ದಾರೆ~ ಎಂದರು.

`ಈಗಾಗಲೇ ಕೈಗಾರಿಕೋದ್ಯಮಿಗಳು ಹಲವಾರು ಇಲಾಖೆಗಳ ಪರವಾನಗಿಗಳನ್ನು ತೆಗೆದುಕೊಂಡು ಕೈಗಾರಿಕೆಯನ್ನು ನಡೆಸುವುದೇ ದುಸ್ತರವಾಗಿದೆ. ಅಲ್ಲದೇ ಈಗ ಮತ್ತೆ ಟ್ರೇಡ್ ಲೈಸೆನ್ಸ್ ಪಡೆಯಬೇಕೆಂಬುದು ಕೈಗಾರಿಕೋದ್ಯಮಿಗಳಿಗೆ ಹೊರೆಯಾಗಲಿದೆ. ಇದನ್ನು ಈ ಕೂಡಲೇ ರದ್ದುಗೊಳಿಸಬೇಕು~ ಎಂದು ಒತ್ತಾಯಿಸಿದರು.

`ಕಟ್ಟಡ ತೆರಿಗೆ ಪಾವತಿಸುವ ಸಂದರ್ಭದಲ್ಲಿ ಘನ ತ್ಯಾಜ್ಯ ವಸ್ತುಗಳ ಸಾಗಾಣಿಕೆಗೆ ಎಂದು ಪ್ರತ್ಯೇಕ ಮೊತ್ತವನ್ನು ಬಿಬಿಎಂಪಿ ತೆಗೆದುಕೊಳ್ಳುತ್ತದೆ. ಕೈಗಾರಿಕಾ ವಲಯದಿಂದ ಬಿಬಿಎಂಪಿ ಗೆ ಅತಿ ಹೆಚ್ಚು ತೆರಿಗೆ ಸಂದಾಯವಾಗುತ್ತಿದೆ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕೈಗಾರಿಕಾ ವಸಾಹತುಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯವನ್ನು ಒದಗಿಸಿಲ್ಲ~ ಎಂದು ಆರೋಪಿಸಿದರು.

`ಕೈಗಾರಿಕೋದ್ಯಮಿಗಳು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೈಗಾರಿಕೋದ್ಯಮಿಗಳು ಪಾವತಿ ಮಾಡುವ ತೆರಿಗೆ ಹಣದಲ್ಲಿ ಶೇ 25 ರಷ್ಟು ಮೊತ್ತವನ್ನು ಆಯಾ ಭಾಗದ ಮೂಲಭೂತ ಸೌಕರ್ಯಗಳಿಗೆ ಮೀಸಲಾಗಿಡಬೇಕು~ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.