ಬೆಂಗಳೂರು: ಬ್ರಿಟನ್ ಮೂಲದ ಟ್ವಿಸ್ ಡ್ರಿಂಕ್ಸ್ (ಇಂಡಿಯಾ) ಸಂಸ್ಥೆಯ ಹಣ್ಣುಗಳ ರಸ ಸ್ವಾದದ ತಂಪುಪಾನೀಯ ‘ಟ್ವಿಸ್’ ಗುರುವಾರ ಬೆಂಗಳೂರು ಮಾರುಕಟ್ಟೆ ಪ್ರವೇಶಿಸಿದೆ.

ಪಾನೀಯ ಬಿಡುಗಡೆ ಮಾಡಿ ಮಾತನಾಡಿದ ಟ್ವಿಸ್ ಡ್ರಿಂಕ್ಸ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಎಸ್. ಮೆನನ್, ಇದೊಂದು ಅನಿಲಮಿಶ್ರಿತ (ಏರೇಟೆಡ್) ಪಾನೀಯವಾಗಿದ್ದು ಶೇ10ರಷ್ಟು ನೈಜ ಹಣ್ಣಿನ ರಸ ಮಿಶ್ರಣ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ದೊರೆಯುವ ತಂಪುಪಾನಿಯ ಗಳಿಗಿಂತ ವಿಶಿಷ್ಟ ಹಾಗೂ ವಿಭಿನ್ನ ಸ್ವಾದ ಹೊಂದಿದೆ ಎಂದರು.

ಪುಣೆಯಲ್ಲಿ ಬಾಟ್ಲಿಂಗ್ ಘಟಕ ಹೊಂದಿದ್ದು ಸದ್ಯ ನಿಂಬೆ, ಮಾವು, ಕಿತ್ತಳೆ, ಸೇಬು ಹಣ್ಣಿನ ಸ್ವಾದದಲ್ಲಿ ಪಾನೀಯ ಲಭ್ಯವಿದ್ದು 250 ಎಂ.ಎಲ್ಗೆ ₹40 ಬೆಲೆ ನಿಗದಿಪಡಿ ಸಲಾಗಿದೆ ಎಂದು ತಿಳಿಸಿದರು.

‘ಭಾರತೀಯ ತಂಪುಪಾನೀಯ ಮಾರುಕಟ್ಟೆ ಪ್ರತಿವರ್ಷ ಶೇ 15ರಷ್ಟು ಏರಿಕೆಯಾಗುತ್ತದೆ. ಹೊಸ ರುಚಿ ಮತ್ತು ಬ್ರಾಂಡ್ಗಳಿಗೆ ಅವಕಾಶ ಇದ್ದು ಅದನ್ನು ನಾವು ಬಳಸಿಕೊಳ್ಳುತ್ತೇವೆ’ ಎಂದು ಟ್ವಿಸ್ ಡ್ರಿಂಕ್ಸ್ ಅಧ್ಯಕ್ಷ ಪ್ರೇಮಚಂದರ್ ರಾಜನ್ ಹೇಳಿದರು.

ಯುವ ಜನಾಂಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಪಾನೀಯ ತಯಾರಿಸಲಾಗಿದೆ. ಸದ್ಯ ಬೆಂಗಳೂರು ಸೇರಿದಂತೆ ಆರು ಮೆಟ್ರೊಗಳಲ್ಲಿ ಮಾತ್ರ ಲಭ್ಯವಿದ್ದು, ಕ್ರಮೇಣ ಸಣ್ಣಪುಟ್ಟ ನಗರಗಳನ್ನೂ ಪ್ರವೇಶಿಸಲಿದೆ ಎಂದರು.

ಮುಂಬೈನಲ್ಲಿ ಬುಧವಾರ ನಡೆದ ಆಹಾರ ಮೇಳದಲ್ಲಿ ಟ್ವಿಸ್ ಅನ್ನು ಮಾರುಕಟ್ಟೆಗೆ ಬಿಡಿಗಡೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.