ಭಾನುವಾರ, ಮೇ 22, 2022
22 °C

ಡಬ್ಬಿಂಗ್‌ಗೆ ಅವಕಾಶ ಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ಮಾಡಲು ಉತ್ತರ ಕರ್ನಾಟಕದ ಊರುಗಳಿಂದ ಬೆಂಗಳೂರಿಗೆ ಹೋಗಿ ನೆಲೆಸಿರುವ ಹಲವು ಜನ ನನ್ನ ಸ್ನೇಹಿತರು ಕನ್ನಡ ಚಲನಚಿತ್ರಗಳನ್ನು ನೋಡುವುದು ಅಪರೂಪ.ಅವರು ಹೆಚ್ಚಾಗಿ ನೋಡುವುದು ಅದ್ದೂರಿ ವೆಚ್ಚದ, ಅದ್ಭುತವಾಗಿ ಚಿತ್ರೀಕರಣಗೊಂಡ ಹಿಂದಿ, ತೆಲುಗು, ತಮಿಳು ಹಾಗೂ ಇಂಗ್ಲಿಷ್ ಚಿತ್ರಗಳನ್ನೇ. ಪರಭಾಷೆಗಳಲ್ಲಿ ಬರುವ ಉತ್ತಮ ಚಿತ್ರಗಳು ಕನ್ನಡದಲ್ಲಿ ಡಬ್ ಆಗಿ ಬಿಡುಗಡೆಯಾದರೆ ನಾವು ಪರಭಾಷೆ ಚಿತ್ರಗಳನ್ನು ನೋಡುವ ಬದಲು ಕನ್ನಡ ಚಿತ್ರಗಳನ್ನೇ ನೋಡುತ್ತೇವೆ ಎನ್ನುತ್ತಾರೆ ಅವರು.ಈ ಸಂಗತಿಯನ್ನು ಗಮನಿಸಿದಾಗ ಡಬ್ಬಿಂಗ್‌ನ್ನು ವಿರೋಧಿಸುವವರು ಆ ಮೂಲಕ ಪರಭಾಷೆ ಚಿತ್ರಗಳನ್ನು ನೋಡುವವರ ಸಂಖ್ಯೆ ಹೆಚ್ಚಳವಾಗಲು ಕಾರಣರಾಗುತ್ತಿದ್ದಾರೆ ಎಂಬುದಂತೂ ಸತ್ಯ.ಬೇರೆ ಭಾಷೆಗಳ ಚಿತ್ರಗಳನ್ನು ನೋಡುವಂತವರು ಕನ್ನಡ ಚಿತ್ರಗಳನ್ನು ನೋಡುವಂತೆ ಮಾಡಬೇಕಾದರೆ ಕನ್ನಡ ಚಿತ್ರರಂಗದವರಿಗೆ ಇರುವುದು ಎರಡೇ ದಾರಿ. ಪರಭಾಷೆಗಳ ಆ ಚಿತ್ರಗಳಿಗೆ ಸರಿಸಮನಾದ ಕನ್ನಡ ಚಿತ್ರಗಳನ್ನು ನಿರ್ಮಿಸುವುದು, ಇಲ್ಲವೇ ಆ ಭಾಷೆಗಳ ಡಬ್ಬಿಂಗ್‌ಗೆ ಅವಕಾಶ ಮಾಡಿಕೊಡುವುದು.

-

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.