ಶನಿವಾರ, ಮೇ 8, 2021
26 °C

ಡಾ.ವಿ.ಕೃ.ಗೋಕಾಕರ ಮೂರ್ತಿ ರಕ್ಷಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸವಣೂರ: ನಗರದ ಸರ್ಕಾರಿ ಮಜೀದ್ ಹೈಸ್ಕೂಲಿನ ಆವರಣದಲ್ಲಿ ಈಚೆಗೆ ಅನಾವರಣಗೊಂಡಿರುವ ಡಾ. ವಿ.ಕೃ.ಗೋಕಾಕರ ಪ್ರತಿಮೆಗೆ ಅವ ಮಾನಪಡಿಸಲಾಗಿರುವ  ಘಟನೆ ಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ತಾಲ್ಲೂಕು ಘಟಕ  ತೀವ್ರವಾಗಿ ಖಂಡಿಸಿದೆ.ಈ ಕುರಿತಂತೆ ಶನಿವಾರ ಉಪ ವಿಭಾಗಾಧಿಕಾರಿಗಳ ಕಛೇರಿಗೆ ಮನವಿ ಸಲ್ಲಿಸಿರುವ ಸದಸ್ಯರು, ಡಾ.ಗೋಕಾ ಕರು ವ್ಯಾಸಂಗ ಮಾಡಿದ ಶಾಲೆ ಯಲ್ಲಿಯೇ ಅವರ ಪ್ರತಿಮೆಗೆ ಅಪ ಮಾನ ಪಡಿಸಲಾಗುತ್ತಿರುವುದು ವಿಷಾದನೀಯ ಎಂದರು.ಯಾವುದೇ ರೀತಿಯ ರಕ್ಷಣೆ ಇಲ್ಲದ ರೀತಿಯಲ್ಲಿ ಗೋಕಾಕರ ಪುತ್ಥಳಿಯನ್ನು ಅನಾವರಣಗೊಳಿಸಲಾಗಿದೆ. ಶಾಲಾ ಮುಖ್ಯಸ್ಥರ ಬೇಜವಾಬ್ದಾರಿತನದಿಂದ ಗೋಕಾಕರಿಗೆ ಅಪಮಾನವಾಗುತ್ತಿದೆ. ಪ್ರತಿಮೆಯ ಮೇಲೆ ಬಳಪದಿಂದ     ಬರೆಯುವುದು, ಇನ್ನಿತರೇ ವಿಕೃತಿ ಗಳನ್ನು ತೋರುವುದು, ಬಿಸಿ ಊಟ ಮಾಡಿದ ಬಳಿಕ ಉಳಿದ ಪದಾರ್ಥ ವನ್ನು ಕಟ್ಟೆಯ ಮೇಲೆ ಚೆಲ್ಲುವದು ಮೊದಲಾದ ಬೆಳವಣಿಗೆಯನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ. ಈ ಘಟನೆಗಳು ಪುನರಾ ವರ್ತನೆಯಾಗದಂತೆ ಶಾಲಾ ಮುಖ್ಯಸ್ಥರು ಹಾಗೂ ತಾಲ್ಲೂ ಕಿನ ಅಧಿಕಾರಿಗಳು ಸೂಕ್ತ ಮುಂಜಾ ಗ್ರತೆ ಕೈಗೊಳ್ಳಬೇಕಾಗಿದೆ ಎಂದು ಸಂಘಟನೆ ಮನವಿಯಲ್ಲಿ ತಿಳಿಸಿದೆ.ಈ ಸಂದರ್ಭದಲ್ಲಿ ಗಿರೀಶ ಬಗರೆ, ರಾಜಶೇಖರ ಹೊಂಡದಕಟ್ಟಿ, ಈರಯ್ಯ ಹಿರೇಮಠ, ರೋಹಿತ ಹಂಚಾಟೆ, ಮಂಜುನಾಥ ಸಂಶಿ, ಈರಣ್ಣ ಶಿಗ್ಗಾಂವಿ, ಪುಟ್ಟಯ್ಯ ಹಿರೇ ಮಠ, ವಿನಾಯಕ್ ಸಾಥಪತಿ, ಜ್ಞಾನೇಶ್ವರ ಸುಲಾಖೆ, ಗಜಾನನ ರಾಶಿನಕರ, ವೆಂಕಟೇಶ್  ಕರೇಕಲ್ಲ ಮುಂತಾದವರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.