ಚೆನ್ನೈ/ ನವದೆಹಲಿ: ತಮಿಳುನಾಡು ವಿಧಾನಸಭಾ ಕ್ಷೇತ್ರಗಳ ಹೊಂದಾಣಿಕೆ ಭಿನ್ನಾಭಿಪ್ರಾಯದಿಂದಾಗಿ ಡಿಎಂಕೆ- ಕಾಂಗ್ರೆಸ್ ಮೈತ್ರಿಯಲ್ಲಿ ಮೂಡಿರುವ ಬಿರುಕನ್ನು ಸರಿಪಡಿಸುವ ಯಾವ ಪ್ರಯತ್ನವೂ ಯಾವುದೇ ಪಕ್ಷದ ಕಡೆಯಿಂದ ಭಾನುವಾರ ನಡೆಯಲಿಲ್ಲ. ಇದೇ ವೇಳೆ, ತಮ್ಮ ಪಕ್ಷದ ಎಲ್ಲಾ ಆರು ಕೇಂದ್ರ ಸಚಿವರು ಸೋಮವಾರ ನವದೆಹಲಿಗೆ ತೆರಳಿ ರಾಜೀನಾಮೆ ನೀಡಲಿದ್ದಾರೆ ಎಂದು ಡಿಎಂಕೆ ಸಂಸದ ಟಿ.ಆರ್.ಬಾಲು ಹೇಳಿದ್ದು, ಮರುಮೈತ್ರಿಯ ಸಾಧ್ಯತೆ ಬಹುತೇಕ ಕ್ಷೀಣಿಸಿದೆ.

ಕ್ಷೇತ್ರ ಹೊಂದಾಣಿಕೆ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳುವ ಸಂಬಂಧ ಕಾಂಗ್ರೆಸ್ ನಾಯಕರು ತಮ್ಮನ್ನು ಸಂಪರ್ಕಿಸಿಲ್ಲ ಎಂದು ಕರುಣಾನಿಧಿ ಸ್ಪಷ್ಟಪಡಿಸಿದ್ದಾರೆ. ಎಡ ಪಕ್ಷಗಳು ಹಾಗೂ ಮತ್ತಿತರ ಕೆಲ ಪಕ್ಷಗಳು ಡಿಎಂಕೆ ಜತೆ ಕೈಜೋಡಿಸುವ ಸಾಧ್ಯತೆ ಕುರಿತು ಕೇಳಿದಾಗ, ‘ಇದು ಒಂದು ಅಥವಾ ಎರಡು ದಿನಗಳಲ್ಲಿ ಗೊತ್ತಾಗುತ್ತದೆ’ ಎಂದಿದ್ದಾರೆ.

ಇದೇ ವೇಳೆ, ‘ಕಾಂಗ್ರೆಸ್ಸಿನ ಯಾವೊಬ್ಬ ನಾಯಕರೂ ನಮ್ಮನ್ನು ಈವರೆಗೆ ಸಂಪರ್ಕಿಸಿಲ್ಲ’ ಎಂದು ಸಂಸದ ಬಾಲು ಹೇಳಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್ ಕಡೆಯಿಂದ ಕ್ಷೇತ್ರ ಹೊಂದಾಣಿಕೆಗೆ ಸಂಬಂಧಿಸಿದ ಐವರು ಸದಸ್ಯರ ಸಮಿತಿಯ ನೇತೃತ್ವ ವಹಿಸಿದ್ದ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರು ಡಿಎಂಕೆ ಧೋರಣೆಯ ಬಗ್ಗೆ ಒಂದಿಷ್ಟೂ ಸಮಾಧಾನ ಹೊಂದಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

‘ನಾವು ಮುಂದಿಟ್ಟ ಷರತ್ತುಗಳಿಗೆ ಡಿಎಂಕೆ ಒಪ್ಪದಿದ್ದರೆ ನಮ್ಮ ಪಕ್ಷದ ಕಡೆಯಿಂದ ಮತ್ತೆ ಮಾತುಕತೆ ನಡೆಯುವ ಸಾಧ್ಯತೆ ಇಲ್ಲ’ ಎಂಬುದು ಕಾಂಗ್ರೆಸ್ ಮೂಲಗಳ ಹೇಳಿಕೆ. ಇದೇ ಸಂದರ್ಭದಲ್ಲಿ, ಬರುವ ವಿಧಾನಸಭಾ ಚುನಾವಣೆಯನ್ನು ತಾನು ಏಕಾಂಗಿಯಾಗಿ ಎದುರಿಸಬೇಕೋ, ಅಥವಾ ಹೊಸ ಮೈತ್ರಿಕೂಟದ ಭಾಗವಾಗಿ ಕಣಕ್ಕಿಳಿಯಬೇಕೋ ಎಂಬ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸೋಮವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದೂ ಕೇಳಿಬಂದಿದೆ.

ಮರುಮೈತ್ರಿ ಸಂಧಾನದ ಬಗ್ಗೆ ಕಾಂಗ್ರೆಸ್ ಸ್ವತಃ ಮುಂದೆ ಬಂದು ಪ್ರಸ್ತಾಪಿಸಬೇಕೆಂದು ತಮ್ಮ ಪಕ್ಷ ನಿರೀಕ್ಷಿಸಿಲ್ಲ ಎಂದಿರುವ ಡಿಎಂಕೆಯ ಮತ್ತೊಬ್ಬ ಮುಖಂಡರಾದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಎಂ.ಕೆ.ಅಳಗಿರಿ, ಮೈತ್ರಿಭಂಗದಿಂದ ಮುಂಬರುವ ಚುನಾವಣೆಯಲ್ಲಿ ತಮಗೇನೂ ನಷ್ಟವಾಗದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತ, ಡಿಎಂಕೆಯ ಕಟ್ಟಾ ಬೆಂಬಲಿಗರು ಯುಪಿಎ ಮೈತ್ರಿಕೂಟದಿಂದ ಹೊರಬರಲು ಪಕ್ಷ ಕೈಗೊಂಡಿರುವ ನಿರ್ಧಾರದ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಪಿಎಂಕೆ, ವಿಸಿಕೆ ಯಂತಹ ಸಣ್ಣಪುಟ್ಟ ಪಕ್ಷಗಳ ಮೈತ್ರಿಯೊಂದಿಗೆ ಚುನಾವಣೆ ಎದುರಿಸುವ ಉತ್ಸಾಹವನ್ನು ಅವರು ವ್ಯಕ್ತಪಡಿಸಿದ್ದಾರೆ.

‘ಯುಪಿಎಗೆ ಆತಂಕ ಇಲ್ಲ’: ಸಂಪುಟದಿಂದ ಡಿಎಂಕೆ ಹೊರ ಬಂದರೂ ಯುಪಿಎ ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ. ಸರ್ಕಾರ ನಿರಾತಂಕವಾಗಿ ಮುಂದುವರೆಯಲಿದೆ ಎಂದು ಲಖನೌದಲ್ಲಿ ಹೇಳಿರುವ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್, ಸರ್ಕಾರಕ್ಕೆ ತಮ್ಮ ಪಕ್ಷ ನೀಡಿರುವ ಬೆಂಬಲ ಮುಂದುವರಿಯಲಿದೆ ಎಂದಿದ್ದಾರೆ.

ಯುಪಿಎ ಸರ್ಕಾರದ ಸಂಪುಟಕ್ಕೆ ಸಮಾಜವಾದಿ ಪಕ್ಷ ಸೇರುವ ಕುರಿತು ಯಾವುದೇ ಚರ್ಚೆ ಈತನಕ ನಡೆದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಡಿಎಂಕೆ ಸಚಿವರು ರಾಜೀನಾಮೆ ನೀಡಿದರೂ ಅದನ್ನು ಅಂಗೀಕರಿಸುವುದು, ಬಿಡುವುದು ಪ್ರಧಾನಿಗೆ ಬಿಟ್ಟ ವಿಷಯ. ಮೈತ್ರಿ ಸರ್ಕಾರದಲ್ಲಿ ಇದೆಲ್ಲಾ ಸಹಜ ಎಂದು ಯಾದವ್ ಹೇಳಿದ್ದಾರೆ.

ಎಐಎಡಿಎಂಕೆ ಬೆಂಬಲ ಅನುಮಾನ: ತಮಿಳುನಾಡು ವಿಧಾನ ಸಭೆ ಚುನಾವಣೆಗೆ ಸಂಬಂಧಿಸಿದಂತೆ ಎಐಎಡಿಎಂಕೆ ಹಾಗೂ ತಮ್ಮ ಪಕ್ಷದ ನಡುವೆ ಶೀಘ್ರವೇ ಒಪ್ಪಂದವಾಗಲಿದ್ದು, ಯುಪಿಎ ನೇತೃತ್ವದ ಕಾಂಗ್ರೆಸ್ಗೆ ಎಐಎಡಿಎಂಕೆ ಬೆಂಬಲ ನೀಡುವ ಲಕ್ಷಣಗಳಿಲ್ಲ ಎಂದು ಸಿಪಿಐ (ಎಂ) ಹೇಳಿದೆ.ಕಾಂಗ್ರೆಸ್-ಡಿಎಂಕೆ ಮೈತ್ರಿ ಭಂಗ ಎಡ ಪಕ್ಷಗಳಿಗೆ ಅನುಕೂಲ ಕಲ್ಪಿಸಲಿದೆ ಎಂದು ಸಿಪಿಎಂ ಮುಖಂಡ ಕಾರಟ್ ಹೇಳಿದ್ದಾರೆ.

‘ಯುಪಿಎ ಬೆಂಬಲಿಸಲು ಬಿಜೆಡಿ ಸಿದ್ಧ’
ಭುವನೇಶ್ವರ (ಪಿಟಿಐ): ಕೇಂದ್ರ ಸಂಪುಟದಿಂದ ತನ್ನ ಸಚಿವರನ್ನು ಹಿಂದಕ್ಕೆ ಕರೆಸಿಕೊಳ್ಳಲು ಡಿಎಂಕೆ ತೀರ್ಮಾನಿಸಿದ ಬೆನ್ನಲ್ಲೆ, ಬಿಜು ಜನತಾದಳ (ಬಿಜೆಡಿ) ಯುಪಿಎ ಸರ್ಕಾರವನ್ನು ಬೆಂಬಲಿಸುವ ಇಂಗಿತ ವ್ಯಕ್ತಪಡಿಸಿದೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಬೆಂಬಲ ಯಾಚಿಸಿದರೆ ತಾವು ಸಹಕರಿಸಲು ಸಿದ್ಧ ಎಂದು ಬಿಜೆಡಿ ಮುಖಂಡ ಮತ್ತು ರಾಜ್ಯಸಭೆ ಸದಸ್ಯ ಪ್ಯಾರಿ ಮೋಹನ್ ಮಹಾಪಾತ್ರ ತಿಳಿಸಿದ್ದಾರೆ.

‘ಯುಪಿಎ ಸರ್ಕಾರಕ್ಕೆ ಬೆಂಬಲ ನೀಡುವಂತೆ ಇದುವರೆಗೆ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ. ಅಂತಹ ಯಾವುದಾದರೂ ಪ್ರಸ್ತಾವನೆ ಬಂದರೆ ಪಕ್ಷದೊಳಗೆ ಚರ್ಚಿಸಿ ಸಕಾರಾತ್ಮಕವಾಗಿ ನಿರ್ಧಾರ ಕೈಗೊಳ್ಳುವುದಾಗಿ’ ಅವರು ಹೇಳಿದರು.

ಪ್ರಣವ್- ಆಜಾದ್ ಚರ್ಚೆ

ನವದೆಹಲಿ ವರದಿ: ತಮಿಳುನಾಡಿನಲ್ಲಿ ಪಕ್ಷದ ವ್ಯವಹಾರದ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್ ಅವರು ಭಾನುವಾರ ರಾತ್ರಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರನ್ನು ಭೇಟಿ ಮಾಡಿ ಡಿಎಂಕೆ ನಿರ್ಧಾರದ ಬಗ್ಗೆ ಚರ್ಚಿಸಿದ್ದಾರೆ. ಆದರೆ ವಿವರ ತಿಳಿದು ಬಂದಿಲ್ಲ.

ಉಭಯ ನಾಯಕರು ಸೋಮವಾರ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ತಮಿಳುನಾಡಿನ ಪರಿಸ್ಥಿತಿ ಬಗ್ಗೆ ವಿವರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.