ಶುಕ್ರವಾರ, ಮೇ 29, 2020
27 °C

ಡಿಫ್ತೀರಿಯಾ ಸಾವು: ಶಾಸಕರಿಂದ ಸಾಂತ್ವನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಡಿಫ್ತೀರಿಯಾ ರೋಗದಿಂದ ಇತ್ತೀಚೆಗೆ ಮೃತಪಟ್ಟ ಕಾಖಂಡಕಿ ಗ್ರಾಮದ ಹೆರಕಲ್ಲ ವಸ್ತಿಗೆ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ನಿನ್ನೆ ಭೇಟಿ ನೀಡಿ ಮತ ಬಾಲಕರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಜಿ.ಬಿ. ಚವ್ಹಾಣ, ಜಿಲ್ಲಾ ಮಲೇರಿಯಾ ಅಧಿಕಾರಿ ಎಸ್.ಬಿ.ಮಸಳಿ, ವೈದ್ಯಾಧಿಕಾರಿ ಡಾ.ವಾಸಂತಿ ಚಲವಾದಿ ಅವರನ್ನು ಒಳಗೊಂಡ ತಂಡವು ಡಿಫ್ತೀರಿಯಾ ರೋಗದ ತಡೆಗೆ ಕೈಗೊಂಡ ಕ್ರಮಗಳನ್ನು ಶಾಸಕರಿಗೆ ವಿವರಿಸಿದರು.ಶಾಸಕ ಎಂ.ಬಿ.ಪಾಟೀಲ ಮಾತನಾಡಿ ಒಂದೇ ಕುಟುಂಬದ 4 ಮಕ್ಕಳಿಗೆ ರೋಗ ತಗುಲಿ 2 ಮಕ್ಕಳು ಬಲಿ ಯಾಗಿದ್ದು, ದುರ್ದೈವದ ಸಂಗತಿ. ಜಿಲ್ಲೆಯಲ್ಲಿ ಡಿಫ್ತೀರಿಯಾ ರೋಗ ಮರುಕಳಿಸಿರುವ ಕುರಿತು ಮಾಧ್ಯಮ ಗಳ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೂ ಬಂದಿದ್ದು, ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಔಷಧಗಳು ಲಭ್ಯವಿದ್ದು, ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದರು.ಹಿಂದೆ 2005-06 ಸಾಲಿನಲ್ಲಿ ವಿಜಾಪುರ ಜಿಲ್ಲೆಯ 10 ರೋಗಿಗಳು ಡಿಫ್ತೀರಿಯಾದಿಂದ ಮತಪಟ್ಟಿರುತ್ತಾರೆ ಎಂದು ಸೊಲ್ಲಾಪುರ ಸರಕಾರಿ ವೈದ್ಯಕೀಯ ಕಾಲೇಜಿನವರು ಪತ್ರ ಬರೆದು ತಿಳಿಸಿರುವುದು ಸೇರಿದಂತೆ ಈ ಸಂಬಂಧ ಬರುವ ವಿಧಾನಸಭಾ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಲಾಗುವುದು ಎಂದರು.ಮೃತಪಟ್ಟ ಬಾಲಕರ ಪಾಲಕರು ಆರ್ಥಿಕವಾಗಿ ಹಿಂದುಳಿದಿದ್ದು, ಅವರಿಗೆ ಯೋಗ್ಯ ಪರಿಹಾರ ನೀಡಲು ವಿನಂತಿಸ ಲಾಗುವುದು. ವೈಯಕ್ತಿಕವಾಗಿ 25 ಸಾವಿರ ರೂಪಾಯಿ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಶಾಸಕ ಎಂ.ಬಿ.ಪಾಟೀಲ ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಬಾಪುಗೌಡ ಪಾಟೀಲ ಶೇಗುಣಸಿ, ಗಣ್ಯರಾದ ರಾಮಣ್ಣ ದಳವಾಯಿ, ರಮೇಶ ಹೆಬ್ಬಿ, ಅಲ್ಲಿಸಾಬ ಖಡಕೆ, ಮುದಿಮಲ್ಲಪ್ಪ ತೇಲಿ, ಪ್ರಕಾಶ ಹೂಗಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.