ಬುಧವಾರ, ಏಪ್ರಿಲ್ 14, 2021
24 °C

ಡಿವಿಎಸ್ ಕಳಂಕ ರಹಿತ, ಅಸಮರ್ಥ ಮುಖ್ಯಮಂತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಹಗರಣ ರಹಿತ ಆಡಳಿತ ನೀಡುವ ಮೂಲಕ ಮುಖ್ಯಮಂತ್ರಿ ಸದಾನಂದಗೌಡ ಒಬ್ಬ ಕಳಂಕ ರಹಿತ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಸಮರ್ಥವಾಗಿ ಆಡಳಿತ ನಡೆಸುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಾನಂದಗೌಡರು ಅಧಿಕಾರಕ್ಕೆ ಬಂದ ನಂತರ ಯಾವುದೇ ಹಗರಣಗಳು ನಡೆದಿಲ್ಲ. ಅದಕ್ಕಾಗಿ ತಾವು ಹಗರಣಗಳ ಬಯಲಿಗೆಳೆಯುವ ಪ್ರಮೇಯವೇ ಬಂದಿಲ್ಲ ಎಂದರು.ಯಡಿಯೂರಪ್ಪ ಆಡಳಿತದಲ್ಲಿ ಸಾಕಷ್ಟು ಹಗರಣಗಳು ನಡೆದಿದ್ದವು. ಅವುಗಳಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಸಿಲುಕಿಕೊಂಡಿದ್ದರು. ಹೀಗಾಗಿ ಅವರ ವಿರುದ್ಧ ದಾಖಲೆಗಳ ಸಮೇತವಾಗಿ ಹಗರಣಗಳ ಬಯಲಿಗೆಳೆಯಲು ಸಾಧ್ಯವಾಗಿತ್ತು ಎಂದು ಹೇಳಿದರು.ಸದಾನಂದಗೌಡರಿಗೆ ಆಡಳಿತ ನಡೆಸಲು ಜೆಡಿಎಸ್ ಸಲಹೆ ನೀಡುತ್ತಿದೆ ಎಂಬ ಕಾರಣವನ್ನು ನೀಡಿ ರಾಜೀನಾಮೆ ನೀಡಿರುವುದಾಗಿ ಹೇಳಿರುವ ಸಚಿವ ಸಿ.ಎಂ.ಉದಾಸಿ ಅದನ್ನು ಸಾಬೀತು ಪಡಿಸಬೇಕೆಂದು ಸವಾಲು ಹಾಕಿದರು.  ಹಿರಿಯರಾದ ಉದಾಸಿ   ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಇನ್ನೊಬ್ಬರ ಮೇಲೆ ಗೂಬೆ ಕೂಡ್ರಿಸುವುದು ಅವರ ವಯಸ್ಸಿಗೆ ತಕ್ಕುದಾದಲ್ಲ ಎಂದು ಹೇಳಿದರು.ಸಚಿವರ ಕಮಿಷನ್‌ಗೆ ತಡೆ ಬಿದ್ದುದರಿಂದ ಸಚಿವರು ರಾಜೀನಾಮೆ ನೀಡಿದ್ದಾರೆ ಎಂದು ಆಪಾದಿಸಿದ ಅವರು, ರಾಜ್ಯ ರಾಜಕಾರಣದಲ್ಲಿ ಕೆಲವರು ತಮ್ಮ  ವೈಯಕ್ತಿಕ ತೊಂದರೆಗೂ ದೇವೇಗೌಡರ ಕುಟುಂಬವನ್ನೇ ದೂಷಿಸುವುದನ್ನು ರೂಡಿ ಮಾಡಿಕೊಂಡಿದ್ದಾರೆ. ಇದಕ್ಕೆ ಬರುವ ದಿನಗಳಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.ಬಿಜೆಪಿಯಲ್ಲಿ ನಾಯಕತ್ವ ಬದ ಲಾವಣೆ ಕುರಿತಂತೆ ಹೈಕಮಾಂಡ್ ಸುಮ್ಮನಿರುವುದು ಸರಿಯಲ್ಲ. ಇಷ್ಟೊಂದು ಅಶಕ್ತವಾಗಿರುವುದು ಜನತೆ ಮಾಡುತ್ತಿರುವ ದ್ರೋಹವಾದಂತಾಗಿದೆ. ಆದಕಾರಣ ಕೂಡಲೇ ಬಿಜೆಪಿ ಹೈಕಮಾಂಡ್ ಸರ್ಕಾರ ಇದೆಯೋ ಇಲ್ಲವೋ ಅಥವಾ ಮುಂದಿನ ಒಂದು ವರ್ಷದ ಅವಧಿಗೆ ಮುಖ್ಯಮಂತ್ರಿಯಾರು ಎಂಬುದನ್ನು ಜನರೆದರು ಸ್ಪಷ್ಟ ಪಡಿಸಬೇಕು ಎಂದ ಅವರು, ಮುಖ್ಯ ಮಂತ್ರಿಗಳೇ ಗೌರವಯುತವಾಗಿ ರಾಜಿ ನಾಮೆ ನೀಡಿ ಸರ್ಕಾರವನ್ನು ವಿಸರ್ಜನೆ ಮಾಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಬಸವರಾಜ ಹೊರಟ್ಟಿ, ಬಂಡೆಪ್ಪ ಕಾಶಂಪೂರ, ಮಧುಬಂಗಾರಪ್ಪ, ಎನ್,ಎಚ್.ಕೋನರೆಡ್ಡಿ , ರಾಜಣ್ಣ ಕೊರವಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.