ಸುರತ್ಕಲ್: ವಿದ್ಯಾರ್ಥಿ ವೇತನ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿನಿಯೋಗಿ ಸಲೆಂದು ಎಂಎಸ್ಇಜೆಡ್, ಜಿಲ್ಲಾಧಿಕಾರಿ ಮತ್ತು ಕದಿಕೆ ಮೊಗವೀರ ಮಹಾಸಭಾದ ಜಂಟಿ ಖಾತೆಗೆ ವರ್ಗಾಯಿಸಿದ್ದ ಹಣವನ್ನು ಕದಿಕೆ ಮೊಗವೀರ ಮಹಾ ಸಭಾ ನಗದೀಕರಿಸಿಕೊಂಡು ತಮ್ಮ ಖಾತೆಗೆ ಜಮಾಗೊಳಿಸಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.

ಇದು ಗಂಭೀರ ವಿಚಾರ ಎಂದಿರುವ ಸಹಾಯಕ ಆಯುಕ್ತರು, ಈ ಮೊತ್ತವನ್ನು ಕೂಡಲೇ ಜಂಟಿ ಖಾತೆಗೆ ವರ್ಗಾಯಿಸುವಂತೆ ಆದೇಶ ನೀಡಿದ್ದಾರೆ. ಆದರೆ ಕಳೆದ ಒಂದು ರ್ಷದಿಂದ ಆದೇಶ ನೀಡುತ್ತಲೇ ಇದ್ದರೂ ಕದಿಕೆ ಮೊಗವೀರ ಮಹಾಸಭಾ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸದೇ ಇರುವುದರಿಂದ ಇವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಹಾಯಕ ಆಯುಕ್ತರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ.
ಎಂಎಸ್ಇಜೆಡ್ ತನ್ನ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸಮುದ್ರಕ್ಕೆ ಪೈಪ್ಲೈನ್ ಅಳವಡಿಸಲು ಮುಂದಾಗಿತ್ತು. ಎಂಎಸ್ಇಜೆಡ್ ಯೋಜನೆಯಂತೆ ಮುಕ್ಕ ಎನ್ಐಟಿಕೆ ಬಳಿ ಈ ಪೈಪ್ಲೈನ್ ಸಮುದ್ರಕ್ಕೆ ಸೇರುತ್ತದೆ. ಆದರೆ ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಮೊಗವೀರರು ತ್ಯಾಜ್ಯವನ್ನು ಸಮುದ್ರಕ್ಕೆ ಬಿಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ ಹೂಳೆತ್ತಲು ಬಂದಿದ್ದ ಬಾರ್ಜ್ಗೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದ್ದರು. ಆ ಬಳಿಕ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಎಂಎಸ್ಇಜೆಡ್ ಅಧಿಕಾರಿಗಳು ಮತ್ತು ಮೊಗವೀರರ ಸಭೆ ನಡೆದಿದ್ದು ಈ ಸಭೆಯಲ್ಲಿ ಒಪ್ಪಂದ ನಡೆದು ಸಭೆಯಲ್ಲಿ ಭಾಗವಹಿಸಿದ್ದ ಮೊಗವೀರ ಸಂಘಟನೆಗೆ ಪರಿಹಾರ ಮೊತ್ತ ವಿತರಿಸಲಾಗಿತ್ತು. ಇದಾದ ಕೆಲವೇ ದಿನದಲ್ಲಿ ಬಾರ್ಜ್ ಮತ್ತೆ ಕೆಲಸ ಆರಂಭಿಸಲು ಮುಂದಾಗಿತ್ತು. ಈ ಸಂದರ್ಭದಲ್ಲಿ ಕದಿಕೆ ಮೊಗವೀರ ಮಹಾಸಭಾ ಈ ಕೆಲಸಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿಗೊಂಡರೆ ಅದರ ಪರಿಣಾಮ ನೇರವಾಗಿ ನಮ್ಮ ಮೇಲಾಗುತ್ತದೆ ಎಂದು ಹೋರಾಟ ನಡೆಸಿತ್ತು.

ಹೀಗಾಗಿ ಎಂಎಸ್ಇಜೆಡ್ ಮತ್ತೆ ಜಿಲ್ಲಾಧಿಕಾರಿಗಳ ಮೊರೆ ಹೋಗಿತ್ತು. ಹೀಗಾಗಿ 21-2-2012 ರಂದು ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಎಂಎಸ್ಇಜೆಡ್ ಅಧಿಕಾರಿಗಳ ಮತ್ತು ಕದಿಕೆ ಮೋಗವೀರ ಮಹಾಸಭಾದ ಸದಸ್ಯರ ಸಭೆ ನಡೆದಿತ್ತು. ಈ ಸಭೆಯಲ್ಲಿ ಕದಿಕೆ ಮೋಗವೀರ ಮಹಾಸಭಾ 5 ಕೋಟಿ ರೂಪಾಯಿ ಪರಿಹಾರ ಮೊತ್ತಕ್ಕೆ ಬೇಡಿಕೆ ಇಟ್ಟಿತ್ತು. ಆದರೆ ಎಂಎಸ್ಇಜೆಡ್ ಇದಕ್ಕೆ ಒಪ್ಪದೆ ಕೇವಲ 55 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದಾಗ ಮಾತುಕತೆ ವಿಫಲಗೊಂಡಿತ್ತು.

27-2-2012 ರಂದು ಮತ್ತೆ ಸಭೆ ನಡೆದಿದ್ದು ಎಂಎಸ್ಇಜೆಡ್ ತನ್ನ ಮೊತ್ತವನ್ನು 75 ಲಕ್ಷ ರೂಪಾಯಿಗೆ ಏರಿಕೆ ಮಾಡಿ ಮೂರು ವರ್ಷದಲ್ಲಿ ನೀಡುವ ಸಲಹೆ ನೀಡಿತ್ತು. ಇದಕ್ಕೆ ಒಪ್ಪದ ಕದಿಕೆ ಮೊಗವೀರ ಸಭಾ 5 ಕೋಟಿಯಿಂದ 1.5 ಕೋಟಿಗೆ ತನ್ನ ಬೇಡಿಕೆಯನ್ನು ಇಳಿಸಿತ್ತು. ಅಲ್ಲದೆ ಈ ಮೊತ್ತವನ್ನು ಏಕ ಕಂತಿನಲ್ಲಿ ಪಾವತಿಸುವಂತೆ ಒತ್ತಾಯಿಸಿತ್ತು. ಇದಕ್ಕೆ ಅಧಿಕಾರಿಗಳು ಒಪ್ಪದ ಕಾರಣ ಇಲ್ಲೂ ಒಂದು ರೀತಿಯ ಒಪ್ಪಂದ ಏರ್ಪಡಲೇ ಇಲ್ಲ. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರು ಜಿಲ್ಲಾಡಳಿತದ ಪರವಾಗಿ ಒಂದು ಮೊತ್ತ ಸೂಚಿಸುವುದಾಗಿಯೂ, ಅದಕ್ಕೆ ಎರಡೂ ಕಡೆಯವರೂ ಸಮ್ಮತಿ ನೀಡಬೇಕು ಎಂದು ಅಂದಿನ ಸಹಾಯಕ ಆಯುಕ್ತರಾದ ಡಾ.ವೆಂಕಟೇಶ್ ತಿಳಿಸಿದ್ದರು. ಇದಕ್ಕೆ ಎರಡೂ ಕಡೆಯವರು ಒಪ್ಪಿದ್ದು, ರೂ.1 ಕೋಟಿ ಎಂಎಸ್ಇಜೆಡ್ ಮೂರು ಕಂತುಗಳಲ್ಲಿ ನೀಡಬೇಕು ಎಂದಿದ್ದರು.

ಹೀಗೆ ನೀಡುವ ಮೊತ್ತವನ್ನು ಜಿಲ್ಲಾಧಿಕಾರಿ ಹಾಗೂ ಕದಿಕೆ ಮೊಗವೀರ ಮಹಾ ಸಭಾದ ಜಂಟಿ ಖಾತೆಯಲ್ಲಿ ಇರಿಸಿ ಅಗತ್ಯಾನುಸಾರ ಹಣ ನೀಡುವುದಾಗಿ ಸೂಚಿಸಿದ್ದರು. ಇದಕ್ಕೆ ಎರಡೂ ಕಡೆಯವರೂ ಒಪ್ಪಿಕೊಂಡಿದ್ದರು.

ಎಂಎಸ್ಇಜೆಡ್ ತನ್ನ ಮಾತಿನಂತೆ ನಡೆದುಕೊಂಡಿತ್ತು. ಮೊದಲ ಕಂತಿನ ಹಣ 20 ಲಕ್ಷವನ್ನು ಒಂದೇ ತಿಂಗಳೊಳಗೆ ಎಸ್ಬಿಎಂ ಬಂದರು ಶಾಖೆಯಲ್ಲಿರುವ ಜಂಟಿ ಖಾತೆಗೆ ಬಿಡುಗಡೆಗೊಳಿಸಿತ್ತು. ಕದಿಕೆ ಮೊಗವೀರ ಸಭೆ 21- 3-2012ರಂದು ತನ್ನ ಸಮಿತಿ ಸಭೆಯನ್ನು ನಡೆಸಿ ಬಿಡುಗಡೆಯಾದ ಮೊತ್ತವನ್ನು ಜಂಟಿ ಖಾತೆಯಿಂದ ತೆಗೆದು ತಮ್ಮ ಸಂಸ್ಥೆಯ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಕೋಶಾಧಿಕಾರಿಗಳ ಜಂಟಿ ಖಾತೆಯಲ್ಲಿಡುವುದೆಂದು ನಿರ್ಣಯ ಅಂಗೀಕರಿಸಿತು. ಅದೇ ರೀತಿ ಈ 20 ಲಕ್ಷದಲ್ಲಿ ಮೊದಲ 10 ಲಕ್ಷವನ್ನು ಮಳೆಗಾಲದ ಸಮಯದಲ್ಲಿ ಮೀನುಗಾರ ಕುಟುಂಬಕ್ಕೆ ಅಕ್ಕಿ ನೀಡಲು ಹಾಗೂ ಉಳಿದ 10 ಲಕ್ಷವನ್ನು ಬಬ್ಬರ್ಯ ದೈವಸ್ಥಾನದಲ್ಲಿ ನಡೆಯುವ ನೇಮೋತ್ಸವ ಮತ್ತು ಚೌತಿ ಪೂಜೆಯ ಖರ್ಚಿಗೆ ವಿನಿಯೋಗಿಸಲು ಅವಕಾಶ ವಾಗುವಂತೆ ನಿರಖು ಠೇವಣಿಯಲ್ಲಿಡುವುದಾಗಿ ತೀರ್ಮಾನಿ ಸಿತ್ತು. ಅಲ್ಲದೆ ಎಂಎಸ್ಇಜೆಡ್ ಎಲ್ಲಾ ಮೊತ್ತವನ್ನು ಬಿಡುಗಡೆಗೊಳಿಸಿದ ಬಳಿಕ ಅಕ್ಕಿ ವಿತರಣೆ ಮಾಡುವುದಾಗಿಯೂ ಅಂದಿನ ಸಭೆಯಲ್ಲಿ ನಿರ್ಣಯ ಕೈಗೊಂಡಿತ್ತು.

ಇದನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ ಕದಿಕೆ ಮೊಗವೀರ ಸಭಾ ಜಂಟಿ ಖಾತೆಯಲ್ಲಿದ್ದ ಹಣವನ್ನು ನಿರಖು ಠೇವಣಿ ಇಡುವುದಾಗಿ ಪಡೆದುಕೊಂಡಿತ್ತು. ಆದರೆ ಈ ವಿಚಾರ ಎಂಎಸ್ಇಜೆಡ್ ಗಮನಕ್ಕೆ ಬರುತ್ತಿರುವಂತೆ ಅವರು ಆಕ್ಷೇಪ ವ್ಯಕ್ತಪಡಿಸಿ ಅಂದಿನ ಸಭೆಯ ನಿರ್ಣಯವನ್ನು ಉಲ್ಲೇಖಿಸಿ ಡಿಸಿಗೆ ಪತ್ರ ಬರೆದಿದ್ದರು.

ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡಿದ್ದು ಅದರಂತೆ ಸಹಾಯಕ ಆಯುಕ್ತರು ಮೌಖಿಕ ಸಂದೇಶ ನೀಡಿದ್ದರು. ಜಿಲ್ಲಾಡಳಿತದಿಂದ ನಾಲ್ಕಾರು ಪತ್ರಗಳು ಬಂದರೂ ಕದಿಕೆ ಮೊಗವೀರ ಸಭಾ ಅವುಗಳಿಗೆ ಸೊಪ್ಪು ಹಾಕದೆ ಜಂಟಿ ಖಾತೆಗೆ ಹಣ ವರ್ಗಾಯಿಸಿಲ್ಲ.

ಸಭಾದ ವರ್ತನೆಯಿಂದ ಕಂಗೆಟ್ಟಿ ಸಹಾಯಕ ಆಯುಕ್ತರು 18-2-2013 ರಂದು ಮತ್ತೊಂದು ಪತ್ರವನ್ನು ಬರೆದು ಮೂರು ದಿನದ ಅವಕಾಶ ಮತ್ತೆ ನೀಡಿರುವ ಬಗ್ಗೆ ತಿಳಿಸಿದ್ದಾರೆ ಅಲ್ಲದೆ ಈ ಬಗ್ಗೆ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಇದಾಗಿ ಮತ್ತೆ ಮೂರು ತಿಂಗಳು ಉರುಳಿದರೂ ಕದಿಕೆ ಮೊಗವೀರ ಸಭಾ ತಮ್ಮಖಾತೆಯಲ್ಲಿರುವ ಹಣದ ಬಗ್ಗೆ ಯಾವುದೇ ಮಾಹಿತಿಯನ್ನೂ ನೀಡದೆ ಜಂಟಿ ಖಾತೆಗೂ ವರ್ಗಾಯಿಸದೇ ಜಿಲ್ಲಾಧಿಕಾರಿಗಳ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡದೆ ಮೌನವಹಿಸಿದ್ದು ಪರಿಣಾಮ ಹಣ ದುರುಪಯೋಗದ ಬಗ್ಗೆ ಕದಿಕೆ ಮೊಗವೀರ ಸಭಾದ ಮೇಲೆ ದೂರು ದಾಖಲುಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ಮಾಹಿತಿ ರವಾನೆಯಾಗಿದೆ. ಅಲ್ಲದೆ 20 ಲಕ್ಷ ಹಣ ಜಂಟಿ ಖಾತೆಯಲ್ಲಿ ಇಲ್ಲದ ಕಾರಣಕ್ಕೆ ಎಂಎಸ್ಇಜೆಡ್ ಉಳಿದ ಮೊತ್ತ ನೀಡುವುದೂ ಇದೀಗ ಸಂಶಯದಿಂದ ಕೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.