ಮಂಗಳವಾರ, ಜನವರಿ 28, 2020
19 °C

ಡಿ. 16ಕ್ಕೆ ದೆಹಲಿಯಲ್ಲಿ ಬೃಹತ್‌ ರ್‍ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಖಾಸಗಿ ಕ್ಷೇತ್ರದಲ್ಲಿ ಪರಿ­ಶಿಷ್ಟ ಜಾತಿ ಹಾಗೂ ಪಂಗಡ ದವರಿಗೆ ಮೀಸ­ಲಾತಿ ನೀಡುವ ಮಸೂದೆ ಮಂಡ­ನೆಗೆ ಆಗ್ರಹಿಸಿ ಅಖಿಲ ಭಾರತ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಂಘಟನೆಗಳ ಒಕ್ಕೂಟ, ಆರ್‌ಪಿಐ ಹಾಗೂ ಸಮತಾ ಸೈನಿಕ ದಳದ ಸಹಯೋಗದಲ್ಲಿ ಇದೇ 16ರಂದು ದೆಹಲಿಯಲ್ಲಿ ರಾಷ್ಟ್ರ ಮಟ್ಟದ ಬೃಹತ್‌ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ, ಜಂತರ್‌ಮಂತರ್‌ನಲ್ಲಿ ನಡೆ­ಯುವ ಪ್ರತಿಭಟನೆಗೆ ರಾಜ್ಯದ 2 ಸಾವಿರ ಪ್ರತಿನಿಧಿ­ಗಳು ತೆರಳಿದ್ದಾರೆ ಎಂದರು.ವಿವಿಧ ರಾಜ್ಯಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಪ್ರತಿನಿಧಿಗಳು ಈ ರ್‍ಯಾಲಿಯಲ್ಲಿ ಭಾಗವಹಿಸಲಿದ್ದು, ಲೋಕಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ  ಕಾರ್ಯಕ್ರಮವನ್ನೂ ಹಮ್ಮಿ ಕೊಳ್ಳಲಾ­ಗಿದೆ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)