ಸೋಮವಾರ, ಜನವರಿ 20, 2020
19 °C

ಡಿ.29ಕ್ಕೆ ಕುಪ್ಪಳಿಯಲ್ಲಿ ಕುವೆಂಪು ಜನ್ಮದಿನೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ವತಿಯಿಂದ ಡಿ. 29ರಂದು  ಕುವೆಂಪು ಅವರ 109ನೇ ಜನ್ಮದಿನಾಚರಣೆ ಮತ್ತು ‘ಕುವೆಂಪು ರಾಷ್ಟ್ರಮಟ್ಟದ ಪ್ರಶಸ್ತಿ’ ಪ್ರದಾನ ಸಮಾರಂಭ ಹಮ್ಮಿ­ಕೊಳ್ಳ­ಲಾಗಿದೆ’ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಹಂಪ ನಾಗರಾಜಯ್ಯ ಹೇಳಿದರು. ಕುಪ್ಪಳಿಯ ಶತಮಾನೋತ್ಸವ ಭವನದಲ್ಲಿ ಕಾರ್ಯಕ್ರಮ ನಡೆಯ­ಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮಾಜಿ ಸಚಿವ ದಿ. ಎಂ.ಚಂದ್ರ­ಶೇಖರ್‌ ಅವರ ಅವರ ಪುತ್ರ ನರೇಂದ್ರ ಅವರು ‘ಕುವೆಂಪು ರಾಷ್ಟ್ರ­ಮಟ್ಟದ ಪುರಸ್ಕಾರ’ ನೀಡಲು ಪ್ರತಿ­ಷ್ಠಾನಕ್ಕೆ ₨60 ಲಕ್ಷ ದೇಣಿಗೆ ನೀಡಿ­ದ್ದಾರೆ. ಅದರ ನೆರವಿನಿಂದ ಪ್ರತಿ ವರ್ಷ ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ ಸಾಹಿತಿ­ಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗು­ವುದು ಎಂದರು.ಪ್ರಸಕ್ತ ಸಾಲಿನ ಪ್ರಶಸ್ತಿಗೆ ಮಲ­ಯಾಳಂ ಸಾಹಿತಿ ಕೆ.ಸಚ್ಚಿದಾನಂದ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₨5 ಲಕ್ಷ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ  ಎಂದರು. ಇದೇ ವೇಳೆ ಕುವೆಂಪು ಅವರ ‘ರಾಮಾಯಣ ದರ್ಶನಂ’ ಮಹಾ­ಕಾವ್ಯದ 80 ಗಂಟೆಗಳ ಅವಧಿಯ ವಾಚನ ಮತ್ತು ವ್ಯಾಖ್ಯಾನ ಇರುವ  ಸಿ.ಡಿ ಮತ್ತು ಡಿವಿಡಿಗಳನ್ನು ಬಿಡುಗಡೆ ಮಾಡಲಾಗುವುದು. ಲಹರಿ ರೆಕಾರ್ಡಿಂಗ್‌ ಕಂಪೆನಿಯು ಇದನ್ನು ಹೊರತಂದಿದೆ. ಸಿಡಿ ಹಾಗೂ ಡಿವಿಡಿಗಳ ಬೆಲೆ ₨500 ಆಗಿದ್ದು, ಕಾರ್ಯಕ್ರಮದ ದಿನ ₨400 ಮಾರಾಟ ಮಾಡಲಾಗುವುದು ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)