ಹೊಸಪೇಟೆ: ಉಪವಿಭಾಗ ಆಗಿದ್ದರೂ ಡೆಂಗಿಯಂತಹ ಮಾರಕ ಕಾಯಿಲೆಗೆ ಹೊಸಪೇಟೆಯಲ್ಲಿ ಸೂಕ್ತ ಚಿಕಿತ್ಸೆ ಸೌಲಭ್ಯ ವಿಲ್ಲ. ಕೇವಲ ಜನಜಾಗೃತಿ, ಮಾಹಿತಿಗೆ ಮಾತ್ರ ಇಲ್ಲಿನ ಸರ್ಕಾರಿ ಆಸ್ಪತ್ರೆ ಸೀಮಿತವಾಗಿವೆ.

ಯಾವುದೇ ವ್ಯಕ್ತಿಗೆ ಡೆಂಗಿ ಇರು ವುದು ಖಾತ್ರಿಯಾದರೆ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ವಿಮ್ಸ್) ಕಳುಹಿಸಿಕೊಡಲಾ ಗುತ್ತದೆ. ಡೆಂಗಿ ಇರುವ ಮನುಷ್ಯನಿಗೆ ಚಿಕಿತ್ಸೆ ಕೊಡಲು ಇರಬೇಕಾದ ಸೂಕ್ಷ್ಮ ಜೀವವಿಜ್ಞಾನ ಶಾಖೆಯೇ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಇಲ್ಲ. ಇದರಿಂದ ಅನಿವಾರ್ಯವಾಗಿ ಇಲ್ಲಿನ ವೈದ್ಯರು ಡೆಂಗಿ ಪ್ರಕರಣ ಖಚಿತವಾಗುತ್ತಿದ್ದಂ ತೆಯೇ ರೋಗಿಗಳನ್ನು ವಿಮ್ಸ್ಗೆ ಕಳುಹಿಸಿ ಕೊಡುತ್ತಾರೆ.

‘ಡೆಂಗಿ ಇದೆಯೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲು ‘ಎಲೀಸಾ ಟೆಸ್ಟ್’ ಮಾಡುತ್ತೇವೆ. ಒಂದುವೇಳೆ ಡೆಂಗಿ ಇರುವುದು ಖಾತ್ರಿಯಾದರೆ ವಿಮ್ಸ್ಗೆ ಕಳುಹಿಸಿಕೊಡುತ್ತೇವೆ.

ಈ ಕಾಯಿಲೆಗೆ ಒಳಗಾದವರಿಗೆ ಚಿಕಿತ್ಸೆ ನೀಡಲು ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ಷ್ಮಜೀವ ವಿಜ್ಞಾನ ಶಾಖೆಯೇ ಇಲ್ಲ. ಹಾಗಾಗಿ ಇದು ಅನಿವಾರ್ಯ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಎನ್. ನಾಗೇಂದ್ರ ಕುಮಾರ್ ಅವರು ಅಸಹಾಯಕತೆ ತೋಡಿಕೊಂಡರು.

‘ಕೆಲವು ಮುನ್ನೆಚ್ಚರಿಕೆ ಕ್ರಮ ತೆಗೆದು ಕೊಂಡರೆ ಡೆಂಗಿ ಬರದಂತೆ ನೋಡಿ ಕೊಳ್ಳಬಹುದು. ಮನೆಯ ಅಂಗಳದಲ್ಲಿ ರುವ ಡ್ರಮ್, ಟ್ಯಾಂಕ್, ಟಯರ್, ಎಳನೀರಿನ ಚಿಪ್ಪು ಸೇರಿದಂತೆ ಇತರ ಕಡೆ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳ ಬೇಕು. ಈ ಕುರಿತು ಆರೋಗ್ಯ ಇಲಾಖೆಯಿಂದ ಎಲ್ಲ ಬಡಾವಣೆಗಳಲ್ಲಿ ಜನಜಾಗೃತಿ ಮಾಡಲಾಗುತ್ತಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಜನಜಾಗೃತಿ ಕಾರ್ಯಕ್ರಮಕ್ಕೆ ಕೊಳಚೆ ಪ್ರದೇಶಗಳಲ್ಲಿ ಉತ್ತಮ ಪ್ರತಿ ಕ್ರಿಯೆ ದೊರೆತಿದೆ. ಆದರೆ ಸಿರಿವಂತರ ಬಡಾವಣೆಗಳಲ್ಲಿ ಆರೋಗ್ಯ ಕಾರ್ಯಕರ್ತ ರನ್ನು ಮನೆಯ ಒಳಗಡೆಯೇ ಬಿಡುವು ದಿಲ್ಲ. ಇದರಿಂದ ಅಂತಹವರಿಗೆ ಡೆಂಗಿ ಹೇಗೆ ಹರಡುತ್ತದೆ ಎಂಬ ತಿಳಿವಳಿಕೆಯೇ ಇರುವುದಿಲ್ಲ’ ಎಂದರು.

‘ತಾಲ್ಲೂಕಿನ ಯಾವುದೇ ಭಾಗದಲ್ಲಿ ಡೆಂಗಿ ಪ್ರಕರಣ ವರದಿಯಾದರೆ ಕೂಡಲೇ ತಾಲ್ಲೂಕು ಕೇಂದ್ರಕ್ಕೆ ತಿಳಿಸು ವಂತೆ ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೂಚನೆ ಕೊಡಲಾಗಿದೆ. ಈ ಸಂಬಂಧ ನರ್ಸಿಂಗ್ ಹೋಮ್ಗಳಿಗೂ ಪತ್ರ ಬರೆಯಲಾಗಿದೆ.

ರೋಗ ತಪಾಸಣೆಗೆ ಸಂಬಂಧಿಸಿದಂತೆ ನಿಗದಿಪಡಿಸಿರುವ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿ ಸಬೇಕು ಎಂದು ತಿಳಿಸಲಾಗಿದೆ. ಶೀಘ್ರ ದಲ್ಲೇ ಎಲ್ಲ ಆಸ್ಪತ್ರೆಗಳಿಗೆ ಭೇಟಿ ನೀಡಿ ಇದನ್ನು ಖುದ್ದಾಗಿ ಪರಿಶೀಲಿಸಲಾಗು ವುದು’ ಎಂದು ತಿಳಿಸಿದರು.

ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 2015ರಲ್ಲಿ ತಾಲ್ಲೂಕಿ ನಾದ್ಯಂತ ಒಟ್ಟು 14 ಡೆಂಗಿ ಪ್ರಕರಣ ವರದಿಯಾಗಿದ್ದವು.
70 ಶಂಕಿತ ಪ್ರಕರಣ ಗಳು ದಾಖಲಾಗಿದ್ದವು. 2016ರ ಜನವರಿಯಿಂದ ಜೂನ್ 20ರ ವರೆಗೆ ನಗರ ಸೇರಿದಂತೆ ತಾಲ್ಲೂಕಿನಲ್ಲಿ ಆರು ಜನರಿಗೆ ಡೆಂಗಿ ಆಗಿರುವುದು ದೃಢಪಟ್ಟಿದೆ. ಯಾರೊಬ್ಬರೂ ಸಾವನ್ನಪ್ಪಿಲ್ಲ. ಆದರೆ ಇಲಾಖೆಯ ಈ ವಾದವನ್ನು ಸ್ಥಳೀಯರು ಒಪ್ಪುವುದಿಲ್ಲ.

‘ವಾರದ ಹಿಂದೆ ಪ್ರೇಮ ನಗರ ಕೊಳಚೆ ಪ್ರದೇಶದ ನಿವಾಸಿ ಮಹಮ್ಮದ್ ಅಲಿ (6) ಡೆಂಗಿಯಿಂದ ಮೃತಪಟ್ಟಿದ್ದಾನೆ. ಇನ್ನು ಬೆಳಕಿಗೆ ಬಾರದ ಎಷ್ಟೋ ಪ್ರಕರಣಗಳು ನಡೆದಿವೆ.

ಜವಾಬ್ದಾರಿ ಯಿಂದ ನುಣುಚಿಕೊಳ್ಳಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಸರಿಯಾಗಿ ಮಾಹಿತಿ ದಾಖಲಿಸುವುದಿಲ್ಲ’ ಎಂದು ಹೊಸಪೇಟೆ ಸ್ಲಂ ಜನರ ವೇದಿಕೆ ಕಾರ್ಯದರ್ಶಿ ಎನ್. ವೆಂಕಟೇಶ ದೂರುತ್ತಾರೆ.

‘2012ರಲ್ಲಿ ಹೈಪಟೈಟಿಸ್ ಲಸಿಕೆ ಯಿಂದ ಇಬ್ಬರೂ ಮಕ್ಕಳು ಸಾವನ್ನಪ್ಪಿ ದ್ದರು. ಎಂಟರಿಂದ ಹತ್ತು ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ. ಆಗ ಆರೋಗ್ಯ ಇಲಾಖೆಯ ಅಧಿಕಾರಿ ಗಳು ಏನೋ ಸಬೂಬು ನೀಡಿ ತಮ್ಮ ತಪ್ಪನ್ನು ಮರೆ ಮಾಚಿದ್ದರು’ ಎಂದರು.

‘ಡೆಂಗಿ ಸೊಳ್ಳೆ ಹುಟ್ಟಿಕೊಳ್ಳಲು ಮೂಲ ಕಾರಣವಾಗಿರುವ ಲಾರ್ವಾ ಆಗದಂತೆ ತಡೆಯಲು ಸರ್ಕಾರದಿಂದ ಪ್ರತಿವರ್ಷ ಸಾಕಷ್ಟು ಹಣ ಬರುತ್ತದೆ. ಆದರೆ ಸರಿಯಾಗಿ ಕಾರ್ಯಕ್ರಮವೇ ರೂಪಿಸುವುದಿಲ್ಲ’ ಎಂದೂ ದೂರಿದರು.

ಡೆಂಗಿ ಚಿಕಿತ್ಸೆ ಇರಬೇಕಾದ ಸೂಕ್ಷ್ಮಜೀವ ವಿಜ್ಞಾನ ಶಾಖೆಯೇ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಇಲ್ಲ. ಹಾಗಾಗಿ ಡೆಂಗಿಯಾದವರನ್ನು ವಿಮ್ಸ್ಗೆ ಕಳುಹಿಸಿಕೊಡುತ್ತೇವೆ
-ಎನ್.ನಾಗೇಂದ್ರಕುಮಾರ್,
ತಾಲ್ಲೂಕು ಆರೋಗ್ಯ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.